Friday, January 6, 2012

17ನೇ ರಾಷ್ಟ್ರೀಯ ಯುವಜನ ಉತ್ಸವ 6 ದಿನ ಬಾಕಿ

ಮಂಗಳೂರು,ಜನವರಿ.06:2010 ರಲ್ಲಿ ಒಡಿಶಾ ದ ಭವನೇಶ್ವರದಲ್ಲಿ ಮತ್ತು 2011 ರಲ್ಲಿ ರಾಜಸ್ಥಾನದ ಉದಯಪುರದಲ್ಲಿ ರಾಷ್ಟ್ರೀಯ ಯುವಜನ ಉತ್ಸವಗಳು ನಡೆದಿದಿದ್ದು ಈ ಬಾರಿ ಕರ್ನಾಟಕದ ಕರಾವಳಿ ನಗರಿ ಮಂಗಳೂರಿನಲ್ಲಿ ಇದು ನಡೆಯಲಿದೆ.
2010 ರಲ್ಲಿ ಒಡಿಶಾದ ಭವನೇಶ್ವರ ಮತ್ತು 2011 ರಲ್ಲಿ ರಾಜಸ್ಥಾನದ ಉದಯಪುರದ ರಾಷ್ಟ್ರೀಯ ಯುವಜನ ಉತ್ಸವದ ಫೈಲ್ ಚಿತ್ರಗಳು ಇಲ್ಲಿವೆ
17ನೇ ರಾಷ್ಟ್ರೀ ಯ ಯುವ ಜನ ಉತ್ಸವ 20 12 ಮಂಗ ಳೂರಿ ನಲ್ಲಿ ಜ. 12 ರಿಂದ 16ರ ವರೆಗೆ ನಡೆ ಯಲ್ಲಿದ್ದು ಕೇ ವಲ ಆರು ದಿನ ಗಳು ಬಾಕಿ ಇವೆ.ಉತ್ಸ ವದ ಯಶ ಸ್ಸಿಗೆ ಸಿದ್ದತೆ ಗಳು ಭರ ದಿಂದ ಸಾಗು ತ್ತಿವೆ.ರಾಜ್ಯ ದಲ್ಲಿ ಪ್ರಥಮ ಬಾರಿಗೆ ನಡೆ ಯುವ ಈ ಕಾರ್ಯ ಕ್ರಮ ದಲ್ಲಿ ದೇಶದ 28 ರಾಜ್ಯ ಗಳು ಹಾಗೂ ಏಳು ಕೇಂದ್ರಾ ಡಳಿತ ಪ್ರದೇಶ ಗಳಿಂದ 5,000 ಯುವ ಪ್ರತಿ ನಿಧಿ ಗಳು ಪಾಲ್ಗೊ ಳ್ಳಲಿದ್ದಾರೆ. ಉತ್ಸವದ ಅಂಗ ವಾಗಿ ಪಣಂ ಬೂರು ಬೀಚ್‌ ಅಥವಾ ತಣ್ಣೀರು ಬಾವಿ ಬೀಚ್‌, ಮಂ ಗಳಾ ಕ್ರೀ ಡಾಂಗಣ, ನೆಹರೂ ಮೈದಾನ ದಲ್ಲಿ ಏಕ ಕಾಲದಲ್ಲಿ 18 ವಿಭಾಗ ಗಳಲ್ಲಿ ಸ್ಪರ್ಧೆ ಗಳು ನಡೆ ಯಲಿವೆ. ಸಾಂಪ್ರಾ ದಾಯಿಕ ನೃತ್ಯ ಪ್ರಕಾರ ಗಳಾದ ಭರತ ನಾಟ್ಯ, ಒಡಿಸ್ಸಿ, ಕೂಚು ಪುಡಿ, ಮಣಿ ಪುರಿ ಹಾಗೂ ಕಥಕ್ ‌ಗಳ ಸ್ಪರ್ಧೆ, ಸಾಂಪ್ರಾ ದಾಯಿಕ ಸಂ ಗೀತ ವಾದ್ಯ ಗಳಾದ ಮೃ ದಂಗ, ಕೊಳಲು, ವೀಣೆ, ಸಿತಾರ್‌, ತಬಲ, ಗಿಟಾರ್‌ ಹಾಗೂ ಹಾರ್ಮೋ ನಿಯಂ ನುಡಿ ಸುವಿಕೆ, ಸಾಂಪ್ರಾ ದಾಯಿಕ ಸಂಗೀ ತವಾದ ಕರ್ನಾಟಕ, ಹಿಂದೂಸ್ತಾನಿ, ಜನಪದ ನೃತ್ಯ ಹಾಗೂ ಗೀತೆಗಳು, ಏಕ ಪಾತ್ರಾಭಿ ನಯ (ಇಂಗ್ಲೀಷ್‌ , ಹಿಂದಿ) ಸ್ಪರ್ಧೆ ಗಳು ನಡೆಯ ಲಿವೆ.ಸ್ಪರ್ಧೆತರ ಚಟು ವಟಿಕೆ ಗಳಲ್ಲಿ ಪೈಂಟಿಂಗ್‌, ಶಿಲ್ಪ ಕಲೆ, ಛಾಯಾಗ್ರಹಣ, ಆಹಾರೋತ್ಸವ, ಸಾಹಸ ಚಟುವಟಿಕೆ ಹಾಗೂ ಸ್ಪರ್ಧೆತರ ಸಾಂಸ್ಕೃತಿಕ ಚಟುವಟಿಕೆಗಳು ನಡೆಯಲಿವೆ.