Saturday, January 21, 2012

ಜಿಲ್ಲೆಯಲ್ಲಿ ಜ.23ರಂದು ಫೈಲೇರಿಯಾಕ್ಕೆ ಸಾಮೂಹಿಕ ಔಷಧಿ ವಿತರಣೆ ಕಾರ್ಯಕ್ರಮ

ಮಂಗಳೂರು,ಜನವರಿ.21: ರಾಷ್ಟ್ರೀಯ ಆನೆಕಾಲು ರೋಗ ನಿಯಂತ್ರಣ ಕಾರ್ಯಕ್ರಮದನ್ವಯ ಜ.23ರಂದು ಆನೆಕಾಲು ರೋಗ (ಫೈಲೇರಿಯಾ)ಕ್ಕೆ ದ.ಕ. ಜಿಲ್ಲೆಯಾದ್ಯಂತ ಡಿಇಸಿ ಸಾಮೂಹಿಕ ಔಷಧಿ ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಓ. ಶ್ರೀರಂಗಪ್ಪ ತಿಳಿಸಿದರು.ಸುದ್ದಿ ಗೋಷ್ಟಿ ಯಲ್ಲಿ ಮಾಹಿತಿ ನೀಡಿದ ಅವರು ಜಿಲ್ಲೆ ಯಲ್ಲಿ 2004 ರಿಂದ 2011 ರವರೆಗೆ 1664 ಫೈಲೇ ರಿಯಾ ಪ್ರಕ ರಣ ಗಳು ಪತ್ತೆ ಯಾಗಿದ್ದು, ಮಂಗ ಳೂರು ನಗರ ವೊಂದ ರಲ್ಲೇ ಪತ್ತೆ ಯಾದ ಸಂಖ್ಯೆ 1136 ಆಗಿದೆ. 2010ರಲ್ಲಿ 6876 ಮಂದಿಯ ರಕ್ತಪರೀಕ್ಷೆ ನಡೆಸಲಾಗಿದ್ದು, ಅದರಲ್ಲಿ 13 ಮಂದಿಯಲ್ಲಿ ರೋಗ ಪತ್ತೆಯಾಗಿದೆ. 2011ರಲ್ಲಿ ರಕ್ತ ಪರೀಕ್ಷೆ ನಡೆಸಿರುವ 9629 ಮಂದಿಯಲ್ಲಿ 19 ಮಂದಿಯಲ್ಲಿ ಫೈಲೇರಿಯಾ ರೋಗ ಪತ್ತೆಯಾಗಿದೆ.ಫೈಲೇರಿಯಾ ರೋಗಾಣು ಒಬ್ಬ ವ್ಯಕ್ತಿಯನ್ನು ಪ್ರವೇಶಿಸಿದ ಬಳಿಕ ಸುಮಾರು 8ರಿಂದ 10 ವರ್ಷದವರೆಗೆ ಯಾವುದೇ ತೊಂದರೆಗಳು ಕಾಣಿಸಿಕೊಳ್ಳುವುದಿಲ್ಲ. ಆದರೆ ವ್ಯಕ್ತಿಯಿಂದ ಇತರರಿಗೆ ರೋಗ ಹರಡುತ್ತಿರುತ್ತದೆ. ಮಾತ್ರೆ ಸೇವಿಸುವುದರಿಂದ ಹರಡುವಿಕೆಯನ್ನು ತಡೆಗಟ್ಟಬಹುದು. ಎಲ್ಲರೂ ಏಕ ಕಾಲದಲ್ಲಿ ಡಿಇಸಿ ಮಾತ್ರೆ ಸೇವಿ ಸುವು ದರಿಂದ ರೋಗ ಹರಡು ವುದನ್ನು ತಡೆ ಗಟ್ಟ ಬಹುದು ಹಾಗೂ ಶರೀರ ದಲ್ಲಿರ ಬಹು ದಾದ ರೋಗಾಣು ಗಳನ್ನು ನಾಶ ಮಾಡ ಬಹುದು.ಜಿಲ್ಲೆಯ ಎಲ್ಲಾ ತಾಲೂ ಕುಗಳ ವ್ಯಾಪ್ತಿ ಯಲ್ಲಿ ಈ ಕಾರ್ಯ ಕ್ರಮ ನಡೆಯ ಲಿದೆ. ತಾಲೂಕು ವ್ಯಾಪ್ತಿಯ 54 ಆರೋಗ್ಯ ಕೇಂದ್ರ ಹಾಗೂ ಮಂಗಳೂರು ನಗರದ 60 ವಾರ್ಡ್ ಗಳ ವ್ಯಾಪ್ತಿಯಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಒಟ್ಟು 14,45,946 ಮಂದಿಗೆ ಔಷಧಿ ವಿತರಣೆ ಮಾಡುವ ಗುರಿಯನ್ನು ಹೊಂದಲಾಗಿದೆ ಎಂದು ತಿಳಿಸಿದರು.ಎರಡು ವರ್ಷದೊಳಗಿನ ಮಕ್ಕಳು, ಗರ್ಭಿಣಿಯರು, ಗಂಭೀರ ಆರೋಗ್ಯ ಸಮಸ್ಯೆ ಇರುವವರನ್ನು ಹೊತುಪಡಿಸಿ ಉಳಿದೆಲ್ಲರಿಗೂ ಕಾರ್ಯಕ್ರಮದ ಸಂದರ್ಭ ಮಾತ್ರೆ ನುಂಗಿಸಲಾಗುವುದು. 2ರಿಂದ 5 ವರ್ಷದೊಳಗಿನ ಮಕ್ಕಳಿಗೆ ಒಂದು ಮಾತ್ರೆ, 6ರಿಂದ 14 ವರ್ಷದ ಮಕ್ಕಳಿಗೆ 2 ಮಾತ್ರ ಎಹಾಗೂ 15 ಲರ್ಷ ಮೇಲ್ಪಟ್ಟವರಿಗೆ ಮೂರು ಮಾತ್ರೆಗಳನ್ನು ನುಂಗಿಸಲಾಗುವುದು.
ಎಂದು ಅವರು ಹೇಳಿದರು.
ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿ ಡಾ. ಅರುಣ್ ಕುಮಾರ್ ಉಪಸ್ಥಿತರಿದ್ದರು.