Thursday, January 5, 2012

ರಾಷ್ಟ್ರೀಯ ಯುವಜನೋತ್ಸವ ಅದ್ದೂರಿ ಆಚರಣೆಗೆ ಎಲ್ಲರ ಸಹಕಾರ ಅಗತ್ಯ- ಪಾಲೇಮಾರ್

ಮಂಗಳೂರು,ಜನವರಿ.05:ಇದೇ ಪ್ರಥಮ ಬಾರಿಗೆ ಕನರ್ಾಟಕ ರಾಜ್ಯ ಯುವಜನೋತ್ಸವ ಆಚರಣೆಗೆ ಆತಿಥ್ಯದ ಅವಕಾಶವನ್ನು ಪಡೆದಿದ್ದು, ಈ ಬೃಹತ್ ಮಹೋತ್ಸವವು ಕರಾವಳಿ ಮಂಗಳೂರಿನಲ್ಲಿ ನಡೆಯುತ್ತಿರುವುದು ನಮ್ಮೆಲ್ಲರ ಸೌಭಾಗ್ಯವಾಗಿದ್ದು, ಈ ಮಹೋನ್ನತ ಮಹೋತ್ಸವವು ಅದ್ದೂರಿಯಾಗಿ ಆಚರಿಸುವಲ್ಲಿ ಜಿಲ್ಲೆಯ ಖಾಸಗಿ ಶಾಲಾ ಶಿಕ್ಷಣ ಸಂಸ್ಥೆಗಳು ಇತರೆ ವಾಣಿಜ್ಯ ಸಂಘ ಸಂಸ್ಥೆಗಳುಸಂಪೂರ್ಣ ಸಹಕಾರ ನೀಡುವ ಮೂಲಕ ಹಬ್ಬದ ವಾತಾವರಣವನ್ನು ನಿರ್ಮಾಣ ಮಾಡಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವರಾದ ಜೆ.ಕೃಷ್ಣ ಪಾಲಕೇಮಾರ್ ಕೋರಿದ್ದಾರೆ.
ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಈ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.ರಾಷ್ಟ್ರೀಯ ಯುವಜನೋತ್ಸವ ಅದ್ದೂರಿ ಆಚರಣೆಗೆ ನಾವು ಯಾವುದೇ ಸಂಘಸಂಸ್ಥೆಗಳಿಂದ ಹಣಕಾಸಿನ ನೆರವನ್ನು ಯಾಚಿಸುತ್ತಿಲ್ಲ ಬದಲಾಗಿ ತಮ್ಮತಮ್ಮ ಶಾಲಾಕಾಲೇಜು ಬ್ಯಾಂಕ್ ಕಟ್ಟಡಗಳನ್ನು ಜನವರಿ 11 ರಿಂದ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಿ ಸ್ವಾಗತ ಕಮಾನುಗಳನ್ನು ನಿರ್ಮಿಸುವ ಮೂಲಕ ಮಹೋತ್ಸವ ವಿಜೃಂಭಣೆಯಿಂದ ನಡೆಸಬೇಕೆಂದರು.ಮಂಗಳೂರು ನಗರವನ್ನು ಮದುವಣಗಿತ್ತಿಯಂತೆ ಶೃಂಗರಿಸಲು ಪ್ರಮುಖವೃತ್ತಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಣೆ ಮಾಡಿ ತಳಿರು ತೋರಣಗಳನ್ನು ಕಟ್ಟಬೇಕೆಂದು ಅವರು ತಿಳಿಸಿದರು.ಯಾವುದೇ ಶಾಲಾ ಕಾಲೇಜುಗಳಿಗೆ ಈ ಸಂದರ್ಭದಲ್ಲಿ ರಜೆಯನ್ನು ನೀಡಲಾಗುವುದಿಲ್ಲ ಆದರೆ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಅನುಮತಿ ನೀಡಲಾಗುವುದೆಂದರು. ಈ ಬೃಹತ್ ಯುವಜನೋತ್ಸವ ಕಾರ್ಯಕ್ರಮದಲ್ಲಿ ಜಿಲ್ಲೆಯ ಎಲ್ಲಾ ತಾಲೂಕುಗಳ ಗ್ರಾಮೀಣ ಪ್ರದೇಶಗಳ ಜನ ರು ಬಂದು ಭಾಗವಹಿಸಲು ಅನುಕೂಲವಾಗವುಂತೆ ಉಚಿತ ಬಸ್ ಸೌಲಭ್ಯವನ್ನು ಕಲ್ಪಿಸಲಾಗುತ್ತಿದೆಯೆಂದು ಸಚಿವರು ಈಸಂದರ್ಭದಲ್ಲಿ ತಿಳಿಸಿದರು.
ಸಭೆಯಲ್ಲಿ ವಿಧಾನಸಭೆ ಉಪಾಧ್ಯಕ್ಷರಾದ ಎನ್. ಯೋಗೀಶ್ ಭಟ್,ಶಾಸಕರಾದ ಯು.ಟಿ.ಖಾದರ್ ಸಂಸದರಾದ ನಳಿನ್ ಕುಮಾರ್ ಕಟೀಲ್, ಮೇಯರ್ ಪ್ರವೀಣ್ ಕುಮಾರ್, ನಗರಾಭಿವೃದ್ಧಿ ಪ್ರಾಧಿಕಾರದ ಆದ್ಯಕ್ಷರು,ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ನಾಗರಾಜ ಶೆಟ್ಟಿ, ಜಿಲ್ಲಾಧಿಕಾರಿ ಮತ್ತು ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳು,ಕಾಲೇಜುಗಳ ಪ್ರಾಂಶುಪಾಲರು,ಬ್ಯಾಂಕ್ ಅಧಿಕಾರಿಗಳು ಮುಂತಾದವರು ಉಪಸ್ಥಿತರಿದ್ದರು.