Friday, January 27, 2012

ನಾಳೆ ಮುಖ್ಯಮಂತ್ರಿಗಳು ದಕ್ಷಿಣ ಕನ್ನಡ ಜಿಲ್ಲೆಗೆ,ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿ

ಮಂಗಳೂರು,ಜನವರಿ.27: ಕರ್ನಾಟಕ ಸರ್ಕಾರದ ಸನ್ಮಾನ್ಯ ಮುಖ್ಯಮಂತ್ರಿಗಳಾದ ಡಿ.ವಿ. ಸದಾನಂದ ಗೌಡರು ದಿನಾಂಕ ನಾಳೇ(28-1-12) ರಂದು ಬೆಳಿಗ್ಗೆ 7.30 ಗಂಟೆಗೆ ಬೆಂಗಳೂರಿನಿಂದ ಹೆಲಿಕ್ಯಾಫ್ಟರ್ ಮೂಲಕ ಹೊರಟು 8.50 ಗಂಟೆಗೆ ಮಂಗಳೂರಿನ ಮೇರಿಹಿಲ್ಸ್ ಹೆಲಿಪ್ಯಾಡ್ ಆಗಮಿಸಿ ಬೆಳಗ್ಲೆ 9.00 ಗಂಟೆಗೆ ಮಂಗಳೂರಿನ ಹೊಗೆಬಜಾರ್ ನಲ್ಲಿ ಆಧುನಿಕ ಮೀನು ಸಂಸ್ಕರಣಾ ಸ್ಥಾವರ ನಿರ್ಮಾಣದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.9.30 ಗಂಟೆಗೆ ನಗರದ ನೆಹರೂ ಮೈದಾ ನದಲ್ಲಿ ಮಂಗ ಳೂರು ಪೋ ಲೀಸ್ ಆಯು ಕ್ತರ ಕಚೇ ರಿಯ ಉದ್ಘಾ ಟನೆ ಯನ್ನು ನೆರ ವೇರಿ ಸುವರು.
10.15 ಗಂಟೆಗೆ ಮಂಗಳೂರು ವಿಶ್ವವಿದ್ಯಾನಿಲಯದ ವಿಜ್ಞಾನ ಸಂಕೀರ್ಣ ಆವರಣದಲ್ಲಿ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ನಾಲ್ಕನೇ ಸಮ್ಮೇಳನ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುವರು.11.45 ಗಂಟೆಗೆ ಕಾವೂರು ಬಿಜೆಎಸ್ ಶಾಲಾ ಹಿಂಭಾಗದ ಅಭಿಮಾನ್ ಗ್ರೀನ್ ಲಾನ್ಸ್ನಲ್ಲಿ ಪರಮ ಪೂಜ್ಯ ಜಗದ್ಗುರು ಪದ್ಮಭೂಷಣ ಶ್ರೀಶ್ರೀಶ್ರೀ ಡಾ.ಬಾಲಗಂಗಾಧರನಾಥ ಮಹಾಸ್ವಾಮಿಗಳವರ 68ನೇ ವರ್ಧಂತ್ಯುತ್ಸವ ಹಾಗೂ ಬಿಜಿಎಸ್ ವಿದ್ಯಾರ್ಥಿ ನಿಲಯದ ಉದ್ಘಾಟನೆ ಮತ್ತು ಬಿಜಿಎಸ್ ಪಿ.ಯು.ಕಾಲೇಜು ಕಟ್ಟಡದ ಶಂಕುಸ್ಥಾಪನೆ ನೆರವೇರಿಸುವರು.
ಮಧ್ಯಾಹ್ನ 1,30 ಗಂಟೆಗೆ ಹೆಲಿಕಾಪ್ಟರ್ ಮೂಲಕ ಕಾರ್ಕಳಕ್ಕೆ ತೆರಳುವರು.ಕಾರ್ಕ ಳದ ಕಾರ್ಯ ಕ್ರಮ ದಲ್ಲಿ ಭಾಗ ವಹಿಸಿ,ಅಪ ರಾಹ್ನ 4 ಗಂ ಟೆಗೆ ಬೆಳ್ತಂ ಗಡಿಯ ಹೆಲಿ ಪ್ಯಾಡಿಗೆ ತೆರ ಳುವರು. 4.15 ಗಂ ಟೆಗೆ ವೇಣೂ ರಿನಲ್ಲಿ ಭಗ ವಾನ್ ಶ್ರೀ ಬಾಹು ಬಲಿ ಸ್ವಾಮಿಯ ಮಹಾ ಮಸ್ತಕಾ ಭಿಷೇಕ ಮಹೋ ತ್ಸವ ಸಮಾ ರಂಭ ಗಳ ಉದ್ಘಾ ಟನೆ ನೆರ ವೇರಿ ಸುವರು.
ಸಂಜೆ 5.25 ಗಂಟೆಗೆ ಹೆಲಿಪ್ಯಾಡ್ನಿಂದ ಪಂಜ ಹೆಲಿಪ್ಯಾಡಿಗೆ ತೆರಳುವರು.ಸಂಜೆ 7 ಗಂಟೆಗೆ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ನವೀಕರಣ ಪುನ: ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶ ಮಹೋತ್ಸವ,ನಾಗಮಂಡಲ ಮತ್ತು ವರ್ಷಾವಧಿ ಜಾತ್ರೋತ್ಸವ ಸಮಾರಂಭದಲ್ಲಿ ಪಾಲ್ಗೊಳ್ಳುವರು.
ರಾತ್ರಿ 8.50 ಗಂಟೆಗೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ಮಾಡುವರು. 9.45 ಗಂಟೆಗೆ ನೆಟ್ಟಣ ರೈಲು ನಿಲ್ದಾಣಕ್ಕೆ ತೆರಳಿ ರೈಲಿನ ಮೂಲಕ ಬೆಂಗಳೂರಿಗೆ ತೆರಳುವರು.