ಅವ ರಿಂದು ಕಿನ್ನಿ ಗೋಳಿ ಮತ್ತು ಬಂಟ್ವಾಳ ಮೀನು ಮಾರು ಕಟ್ಟೆ ಕಟ್ಡಡಕ್ಕೆ ಶಿಲಾ ನ್ಯಾಸ ಮಾಡಿ ಮಾತನಾ ಡುತ್ತಿದ್ದರು. ದಕ್ಷಿಣ ಕನ್ನಡ ಮತ್ತು ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆ ಗಳಲ್ಲಿ ನಿರ್ಮಾಣ ಮತ್ತು ನವೀ ಕರಣ ಗೊಳ್ಳ ಲಿರುವ ಮಾರು ಕಟ್ಟೆಗಳ ಮಾಹಿತಿ ನೀಡಿದ ಅವರು, ಸುಮಾರು 129 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ ಎಂದರು.
ಕರಾ ವಳಿ ಅಭಿ ವೃದ್ಧಿ ಪ್ರಾಧಿ ಕಾರದ ಮಹತ್ವ ಕಾಂಕ್ಷಿ ಯೋಜ ನೆಯಾದ ಮಹಿಳಾ ಮೀನು ಮಾರಾ ಟಗಾ ರರ ಮೀನು ಮಾರು ಕಟ್ಟೆ ಗಳನ್ನು ಕರಾ ವಳಿಯ ಮೂರು ಜಿಲ್ಲೆ ಗಳಲ್ಲಿ ಸು ಸಜ್ಜಿತ ವಾಗಿ ನಿರ್ಮಾಣ ಮಾಡಲು ಮಹ ತ್ವದ ಹೆಜ್ಚೆ ಯನ್ನು ಇಡ ಲಾಗಿದೆ ಎಂದರು. ಉಪಸಭಾಧ್ಯಕ್ಷರಾದ ಎನ್ ಯೋಗೀಶ್ ಭಟ್, ಜಿಲ್ಲಾ ಉಸ್ತುವಾರಿ ಸಚಿವರಾದ ಕೃಷ್ಣ ಜೆ ಪಾಲೆಮಾರ್ಸಂಸದರಾದ ನಳಿನ್ ಕುಮಾರ್ ಕಟೀಲ್, ಬಂಟ್ವಾಳ ಶಾಸಕ ರಮಾನಾಥ ರೈ, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಕೆ ಟಿ ಶೈಲಜ ಭಟ್ ಉಪಸ್ಥಿತರಿದ್ದರು.
ಶಾಸಕರಾದ ಅಭಯಚಂದ್ರ ಜೈನ್ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಮೀನುಗಾರಿಕಾ ಅಭಿವೃದ್ಧಿ ನಿಗಮದ ನಿತಿನ್ ಕುಮಾರ್, ತಾ.ಪಂ. ಅಧ್ಯಕ್ಷರಾದ ಭವ್ಯ ಗಂಗಾಧರ್, ಜಿಲ್ಲಾ ಪಂಚಾಯತ್ ಸದಸ್ಯರಾದ ಈಶ್ವರ್ ಕಟೀಲ್, ಕಿನ್ನಿಗೋಳಿ ಗ್ರಾಮ ಪಂಚಾಯತ್ ಅಧ್ಯಕ್ಷ ದೇವ ಪ್ರಸಾದ್ ಪುನರೂರು ಸೇರಿದಂತೆ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ಪಾಲ್ಗೊಂಡಿದ್ದರು.