Tuesday, January 10, 2012

ಎನ್ ವೈ ಎಫ್ ಸುರಕ್ಷತೆಗೆ 900 ಪೋಲೀಸ್ ಅಧಿಕಾರಿಗಳು:ಸೀಮಂತ್ ಕುಮಾರ್ ಸಿಂಗ್

ಮಂಗಳೂರು,ಜನವರಿ.10:ಪ್ರಥಮ ಬಾರಿಗ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ನಡೆಯುತ್ತಿರುವ 17 ನೇ ರಾಷ್ಟ್ರೀಯ ಯುವಜನೋತ್ಸವ ಸುಗಮ ಸುಸೂತ್ರವಾಗಿ ಜರಗುವಂತೆ ನಗರ ಪೋಲೀಸ್ ಆಯುಕ್ತರ ಕಚೇರಿಯಿಂದ ಎಲ್ಲಾ ವ್ಯವಸ್ಥೆ ಮಾಡಿದ್ದು,ಇದಕ್ಕಾಗಿ 900 ಕ್ಕೂ ಅಧಿಕ ಪೋಲೀಸ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆಯೆಂದು ಮಂಗಳೂರು ನಗರ ಪೋಲೀಸ್ ಆಯುಕ್ತ ಸೀಮಂತ್ ಕುಮಾರ್ ಸಂಗ್ ತಿಳಿಸಿದ್ದಾರೆ.
ಅವರು ಇಂದು ತಮ್ಮ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಾ ಈ ವಿಷಯ ತಿಳಿಸಿದರು.24x7ಹೆಲ್ಪ್ ಲೈನ್ ವ್ಯವಸ್ಥೆ ಮಾಡ ಲಾಗಿದ್ದು, ಪೋಲೀ ಸರು ಜನ ಸ್ನೇಹಿ ಯಾಗಿ ಜನ ರೊಂದಿಗೆ ವ್ಯವ ಹರಿ ಸಲಿದ್ದು,ನಗ ರದ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣ,ರೈಲ್ವೆ ನಿಲ್ದಾಣ,ವಿಮಾನ ನಿಲ್ದಾಣ ದಲ್ಲಿ ಯುಜ ನೋತ್ಸ ವಕ್ಕೆ ಆಗಮಿ ಸುತ್ತಿ ರುವ ಪ್ರತಿ ನಿಧಿ ಗಳಿಗೆ ಸುರ ಕ್ಷತೆ ಹಾಗೂ ಮಾರ್ಗ ದರ್ಶನ ನೀಡ ಲಿದ್ದಾರೆ.ಪ್ರತಿ ನಿಧಿ ಗಳು ವಾಸ್ತವ್ಯ ವಹಿ ಸಿರುವ 22 ವಾ ಸ್ತವ್ಯ ಕೇಂದ್ರ ಗಳಲ್ಲಿ ಸುರ ಕ್ಷತೆಗೆ ಹೆಚ್ಚಿನ ಗಮನ ನೀಡ ಲಾಗಿದ್ದು, ಯಾವುದೇ ಅಹಿ ತಕರ ಘಟನೆ ಗಳು ನಡೆಯ ದಂತೆ ಮುಂಜಾ ಗ್ರತೆ ವಹಿಸ ಲಾಗಿದೆ.ವಾಹನ ದಟ್ಟಣೆ ಯನ್ನು ತಡೆ ಯುವ ಸಲು ವಾಗಿ ಸಂಚಾರ ಪೋಲೀ ಸರು ಸೂಕ್ತ ಕ್ರಮ ವಹಿಸಲಿದ್ದು, ಸಾರ್ವಜನಿಕರು ಈ 5 ದಿನಗಳು ಪೋಲೀಸರೊಂದಿಗೆ ಸಹಕರಿಸಲು ಅವರು ಕೋರಿದ್ದಾರೆ.