ಇಲ್ಲಿನ ಕಾಲೇಜು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಅನುಕೂಲವಾಗುವಂತೆ ಜಿಲ್ಲಾ ವ್ಯಾಪ್ತಿಯ ಸರ್ಕಾರಿ, ಖಾಸಗಿ ಅನುದಾನಿತ ಹಾಗೂ ಖಾಸಗಿ ಕಾಲೇಜುಗಳಿಗೆ 12ರಿಂದ 16ರವರೆಗೆ ಐದು ದಿನಗಳ ವಿಶೇಷ ರಜೆಯನ್ನು ಘೋಷಿಸಲು ಅನುಮತಿ ನೀಡಿ ಸರ್ಕಾರದ ಶಿಕ್ಷಣ ಇಲಾಖೆ (ಉನ್ನತ ಶಿಕ್ಷಣ) ಉಪಕಾರ್ಯದರ್ಶಿ ಕೆ ರಹಮತ್ ಉಲ್ಲಾ ಅವರು ಆದೇಶಿಸಿದ್ದಾರೆ.ಮಂಗಳೂರು ವಿಶ್ವವಿದ್ಯಾಲಯ ಈ ಅವಧಿಯ ವೇಳಾಪಟ್ಟಿಯನ್ನು ವಿದ್ಯಾರ್ಥಿಗಳಿಗೆ ನಷ್ಟವಾಗದಂತೆ ಹೊಂದಾಣಿಕೆ ಮಾಡುವಂತೆಯೂ ಆದೇಶದಲ್ಲಿ ಸೂಚಿಸಿದೆ.