Tuesday, January 10, 2012

19 ರಾಜ್ಯಗಳ 28 ಜನರಿಗೆ ರಾಷ್ಟ್ರೀಯ ಯುವ ಪ್ರಶಸ್ತಿ

ಮಂಗಳೂರು,ಜನವರಿ.10:ಸಮಾಜ ಹಾಗೂ ದೇಶಕ್ಕೆ ಒಳಿತನ್ನು ಮಾಡಿದ 19 ರಾಜ್ಯಗಳ 28 ಜನರಿಗೆ 2010-11 ನೇ ಸಾಲಿಗಾಗಿ ರಾಷ್ಟ್ರೀಯ ಯುವ ಪುರಸ್ಕಾರಗಳನ್ನು 17ನೇ ರಾಷ್ಟ್ರೀಯ ಯುವಜನೋತ್ಸವ ಸಂದರ್ಭದಲ್ಲಿ ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ಪ್ರದಾನ ಮಾಡಲಾಗುವುದು.ಯುವ ಪ್ರಶಸ್ತಿಗೆ ಬಾಜನರಾದವರಲ್ಲಿ ಆಂಧ್ರ ಪ್ರದೇಶ ,ಹರಿಯಾಣದ ತಲಾ ಮೂರು ಜನರು, ಅಸ್ಸಾಂ,ಜಮ್ಮು ಕಾಶ್ಮೀರ, ರಾಜಾ ಸ್ಥಾನ,ಪಶ್ಚಿಮ ಬಂಗಾಳ, ಮಹಾರಾಷ್ಟ್ರ ರಾಜ್ಯಗಳ ತಲಾ ಇಬ್ಬರಿಗೆ, ಯುವ ಪ್ರಶಸ್ತಿ ನೀಡಲಾಗುತ್ತಿದೆ.ಉಳಿದಂತೆ ಕರ್ನಾಟಕ, ಕೇರಳ, ಮಧ್ಯಪ್ರದೇಶ, ಉತ್ತರಕಾಂಡ, ಮಣಿಪುರ, ಮೇಘಾಲಯ, ತ್ರಿಪುರ, ಪುದುಚೇರಿ, ಒರಿಸ್ಸಾ,ದೆಹಲಿ,ಗೋವಾ ಮತ್ತು ಗುಜರಾತ್ ರಾಜ್ಯಗಳ ತಲಾ ಒಬ್ಬರಿಗೆ ಯುವಪ್ರಶಸ್ತಿ ಲಭಿಸಿದೆ.
ಯುವ ಪುರಸ್ಕಾರ ಪಡೆಯುವವರ ಹೆಸರು ಇಂತಿದೆ. ಶ್ರೀಯುತರುಗಳಾದ ಆಂಧ್ರಪ್ರದೇಶದ ಎಡುನುರಿ ಶಂಕರ್,ಎ.ವೆಂಕಟಲಕ್ಷ್ಮಿ ,ಕೆ.ಎಚ್.ಭಗವಾನ್ ದಾಸ್ ಗೌತಮ್, ಅಸ್ಸಾಂನ ಬಿದ್ಯುತ್ .ದಿಬ್ಯಜ್ಯೋತಿ ದಾಸ್,ದೆಹಲಿಯ ಬಂಟಿ ಸೋಲಂಕಿ,ಗೋವಾದ ಕಾಜಲ್ ಸಿ.ಕರ್ಕೇರಾ,ಗುಜರಾತ್ ನ ರಾಕಿ ದಿನೇಶ್ಚಂದ್ರ ಪಾಂಡ್ಯ,ಹರ್ಯಾಣದ ಮುಸ್ಲಿಂ,ಸೀಮಾ ರಾಣಿ ಸುಭಾಷ್ ,ಜಮ್ಮು ಕಾಶ್ಮೀರಾದ ವಿಜಯಕುಮಾರ್,ರಾಜಾ ಅಬ್ದುಲ್ ವಹೀದ್, ಕರ್ನಾಟಕದ ವೈ,ಚಿನ್ನಪ್ಪ,ಕೇರಳದ ಬಾಬುರಾಜನ್, ಮಧ್ಯಪ್ರದೇಶದ ಸಂತೋಷ್ ತಿವಾರಿ,ಮಹಾರಾಷ್ಟ್ರದ ಅಮಿತ್ ,ನಿಶಾ ವಿತೋಬಾ ಜಾದವ್,ಒರಿಸ್ಸಾದ ಜೋತ್ಸ್ನಾಮಯಿ,ರಾಜಸ್ಥಾನದ ಗಿರಿರಾಜ್ ಕುಮಾರ್,ರಾಮ್ದಯಾಲ್ ,ಉತ್ತರ ಕಾಂಡದ ಪ್ರದೀಪ್ಮಹರಾ ಪಶ್ಚಿಮ ಬಂಗಾಳದ ರೂಪಾಲಿ ಬಿಸ್ವಾಸ್,ರಿಶಬಜೈನ್, ಮಣಿಪುರದ ರಾಜೇಂದ್ರ ಸಿಂಗ್, ಮೇಘಾಲಯದ ಲ್ವಾರಿನಿಯಾಂಗ್,ತ್ರಿಪುರದ ಜೋಯ್ದೀಪ್,ಪಾಂಡಿಚೇರಿಯ ಸಾದಿಶ್ ಸೇರಿರುತ್ತಾರೆ.