Sunday, January 15, 2012

ಯುವಜನತೆಯಲ್ಲಿ ಹೆಚ್ಚಿದೆ ಸಾಹಸ ಕ್ರೀಡೆಯ ಹುಚ್ಚು

8ಸಾವಿರಕ್ಕೂ ಹೆಚ್ಚು ಮಕ್ಕಳು ಹಾಗೂ ಯುವಕರು ಸಾಹಸ ಕ್ರೀಡೆಗಳಲ್ಲಿ ಭಾಗಿ




17ನೇ ರಾಷ್ಟ್ರೀಯ ಯುವಜನೋತ್ಸವದ ಅಂಗವಾಗಿ ನಗರದ ನೆಹರೂ ಮೈದಾನದಲ್ಲಿ ಆಯೋಜಿಸಿರುವ ಸಾಹಸ ಕ್ರೀಡೆಗಳಲ್ಲಿ ಮಕ್ಕಳು ಯುವಕ ಯುವತಿಯರು ಅತ್ಯುತ್ಸಾಹದಿಂದ ಪಾಲ್ಗೊಳ್ಳುತ್ತಿದ್ದು ಇದುವರೆಗೂ 8ಸಾವಿರಕ್ಕೂ ಹೆಚ್ಚು ಜನ ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿದ್ದಾರೆ ಎಂದು ನೋಡಲ್ ಅಧಿಕಾರಿ ಅರ್.ಕೆ.ಕುಂದು ತಿಳಿಸಿದ್ದಾರೆ.

ನೆಹರು ಮೈದಾನದಲ್ಲಿ ನಡೆದ ಸಾಹಸ ಕ್ರೀಡೆಗಳು ಸಾರ್ವಜನಿಕರಿಗೆ ಉಚಿತವಾಗಿದ್ದು, ಇಲ್ಲಿ ನಡೆದ ಜಾರ್ಬಿಂಗ್ ಬಾಲ್, ಬರ್ಮಾ ಬ್ರಿಜ್, ಕೃತಕ ಗೋಡೆ ಹತ್ತುವ ಕ್ರೀಡೆಗಳು ಜನಾಕರ್ಷಣೆ ಪಡೆಯುತ್ತಿವೆ.