Friday, January 6, 2012

ನೆಹರೂ ಮೈದಾನದಿಂದ ಸಾಂಸ್ಕೃತಿಕ ಮೆರವಣಿಗೆ

ಮಂಗಳೂರು,ಜನವರಿ.06: ದಕ್ಷಿಣ ಕನ್ನಡ ಜಿಲ್ಲೆಯ ಕೇಂದ್ರ ಸ್ಥಾನ ಮಂಗಳೂರಿನಲ್ಲಿ 17ನೇ ರಾಷ್ಟ್ರೀಯ ಯುವಜನೋತ್ಸವ 2012ಜನವರಿ 12ರಿಂದ 16ರ ತನಕ ನಡೆಯಲಿದೆ. ಭಾರತ ಸರಕಾರ, ಕರ್ನಾಟಕ ಸರಕಾರ , ನೆಹರು ಯುವಕೇಂದ್ರ ಸಂಘಟನೆ ಮತ್ತು ರಾಷ್ಟ್ರೀಯ ಸೇವಾ ಯೋಜನೆ ಇದರ ಸಂಯುಕ್ತಾಶ್ರಯದಲ್ಲಿ ಈ ಕಾರ್ಯಕ್ರಮ ನಡೆಯಲಿವೆ.ಕಳೆದ ವರ್ಷ ರಾಜಸ್ಥಾನದ ಉದಯ ಪುರದಲ್ಲಿ ಈ ಯುವಜನೋತ್ಸವ ಕಾರ್ಯಕ್ರಮ ನಡೆದಿತ್ತು. ಉದ್ಘಾ ಟನಾ ಸಮಾ ರಂಭ ಜನವರಿ 12ರಂದು ನಡೆ ಯಲಿದ್ದು ಪೂರ್ವ ಭಾವಿ ಯಾಗಿ ಅದ್ಧೂರಿ ಸಾಂಸ್ಕೃತಿಕ ಮೆರ ವಣಿಗೆ ನಡೆಯಲಿವೆ. ಸಾಂಸ್ಕೃತಿಕ ಮೆರ ವಣಿಗೆ ಯಲ್ಲಿ ಸುಮಾರು 50ಕ್ಕೂ ಅಧಿಕ ತಂಡ ಗಳು ಭಾಗ ವಹಿ ಸಲಿದ್ದು, ಕರ್ನಾ ಟಕದ ವಿವಿಧ ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಪರಿಚಯಿಸುವ ಬೃಹತ್ ಸಾಂಸ್ಕೃತಿಕ ಮೆರವಣಿಗೆಯಾಗಿ ಮೂಡಿಬರಲಿವೆ. ಮೆರವಣಿಗೆ ನಗರದ ನೆಹರೂ ಮೈದಾನದಿಂದ ಪ್ರಾರಂಭಗೊಂಡು ಪ್ರಮುಖ ರಸ್ತೆಯಲ್ಲಿ ಸಾಗಿ ಯುವಜನೋತ್ಸವ ಉದ್ಘಾಟನೆಗೊಳ್ಳಲಿರುವ ಮಂಗಳಾ ಸ್ಟೇಡಿಯಂನಲ್ಲಿ ಸಮಾವೇಶಗೊಳ್ಳಲಿದೆ.
ಮೆರವಣಿಗೆಯಲ್ಲಿ ಭಾಗವಹಿಸಲಿರುವ ತಂಡಗಳು: ಶಂಖ ಶ್ರೀನಿವಾಸ್ ಮತ್ತು ತಂಡ ಪೂಂಜಾಲಕಟ್ಟೆ-100ಮಂದಿ, ಕಲಾವಿದರು, ಕೊಂಬು ಹರೀಶ್ ಮತ್ತು ತಂಡ ಮೂಡುಬಿದ್ರಿ - 40 ಮಂದಿ ಕಲಾವಿದರು, ಚೆಂಡೆ ಹರೀಶ್ ಮತ್ತು ತಂಡ ಮೂಡುಬಿದ್ರಿ - 63 ಮಂದಿ ಕಲಾವಿದರು, ಕೊರಗರ ದೋಲು (ಕಿನ್ನಿಗೋಳಿ) ಗೋಪಾಲ ಮತ್ತು ತಂಡ ಕಿನ್ನಿಗೋಳಿ- 25 ಕಲಾವಿದರು, ಹುಲಿ ಸುಕೇಶ್ ಮತ್ತು ತಂಡ ಮಂಗಳೂರು ಚಿಲಿಂಬಿ ಪ್ರೆಂಡ್ಸ್, ಕೀಲು ಕುದುರೆ ಕಲ್ಲಡ್ಕ ರಮೇಶ್ ಮತ್ತು ಬಳಗ- 25 ಮಂದಿ ಕಲಾವಿದರು, ಕರಗ ನೃತ್ಯ ಕಲ್ಲಡ್ಕ ರಮೇಶ್ ಮತ್ತು ಬಳಗ - 25 ಮಂದಿ ಕಲಾವಿದರು, ಯಕ್ಷಗಾನ (ತೆಂಕುತಿಟ್ಟು) ರಂಜಿತ್ ಮತ್ತು ತಂಡ, ಕಾರ್ಕಳ - 23 ಮಂದಿ ಕಲಾವಿದರು, ಡೊಳ್ಳು ಕುಣಿತ ಬೂದಿಯಪ್ಪ ಮತ್ತು ತಂಡ ಶಿವಮೊಗ್ಗ - 23 ಮಂದಿ ಕಲಾವಿದರು, ವೀರಭದ್ರ ಕುಣಿತ ಮಹದೇವ ಮತ್ತು ತಂಡ ತುಮಕೂರು ಜಿಲ್ಲೆ - 25 ಮಂದಿ ಕಲಾವಿದರು, ಆಟಿ ಕಳೆಂಜ 25 ಮಂದಿ ಕಲಾವಿದರು, ಕಂಸಾಳೆ ಸತೀಶ್ ಮತ್ತು ತಂಡ, ಮೈಸೂರು 25 ಮಂದಿ ಕಲಾವಿದರು, ಗೊಂಬೆಗಳು ಕಲ್ಲಡ್ಕ ರಮೇಶ್ ಮತ್ತು ಬಳಗ - 25 ಮಂದಿ ಕಲಾವಿದರು, ಗಿಡ್ಡ ಮನುಷ್ಯರು ಕಲ್ಲಡ್ಕ ರಮೇಶ್ ಮತ್ತು ಬಳಗ - 25 ಮಂದಿ ಕಲಾವಿದರು, ಯಕ್ಷಗಾನ (ಬಡಗು ತಿಟ್ಟು) ರಂಜಿತ್ ಮತ್ತು ತಂಡ, ಕಾರ್ಕಳ -20 ಮಂದಿ ಕಲಾವಿದರು , ಕೇರಳ ಚೆಂಡೆ 25 ಮಂದಿ ಕಲಾವಿದರು, ಕಂಗೀಲು ಕುಣಿತ ರಮೇಶ್ ಕಲ್ಮಾಡಿ ಮತ್ತು ಬಳಗ, ಉಡುಪಿ - 27 ಮಂದಿ ಕಲಾವಿದರು, ಕೊರಗರ ದೋಲು (ಕುಂದಾಪುರ) ಗಣೇಶ್ ಮತ್ತು ತಂಡ, ಕುಂದಾಪುರ - 25 ಮಂದಿ ಕಲಾವಿದರು, ಪೂಜಾಕುಣಿತ ದೇವರಾಜ್ ಮತ್ತ ತಂಡ, ಮಂಡ್ಯ - 28 ಮಂದಿ ಕಲಾವಿದರು , ಹಾಲಕ್ಕಿ ಕುಣಿತ (ಸುಗ್ಗಿ ಕುಣಿತ) ಗಣಪ ಗೌಡ ಮತ್ತು ತಂಡ, ಹೊನ್ನಾವರ - 23 ಮಂದಿ ಕಲಾವಿದರು, ಗೊರವರ ಕುಣಿತ ಮರಿಗೌಡ ಚಾಮರಾಜನಗರ ಜಿಲ್ಲೆ - 25 ಮಂದಿ ಕಲಾವಿದರು, ವೀರಗಾಸೆ ಶ್ರೀಧರ ಮತ್ತು ತಂಡ, ಚಿಕ್ಕಮಗಳೂರು - 25 ಮಂದಿ ಕಲಾವಿದರು , ನಂದೀಧ್ವಜ ಅನಿಲ್ ಮತ್ತು ತಂಡ, ಮಂಡ್ಯ - 25 ಮಂದಿ ಕಲಾವಿದರು ತಾಲಿಮು ಬಲ್ಪದವು ಕಾಸರಗೋಡು-30 ಮಂದಿ , 25 ಪಟದ ಕುಣಿತ ಪುಚ್ಚೇಗೌಡ ಮತ್ತು ತಂಡ ಮೇಲುಕೋಟೆ ಪಾಂಡವಪುರ - 25 ಮಂದಿ, ತಾಸೆ ಜಗದೀಶ್ ಮತ್ತು ತಂಡ ಚಿತ್ರಾಪುರ - 22 ಮಂದಿ, 27 ಕೊಡೆ 17 ಜನ , ಬಿ.ದುರ್ಗಾ ಬ್ಯಾಂಡ್ ಸೆಟ್ ಚಿತ್ರದುರ್ಗ (ಲೋಕೇಶ್ ಮತ್ತು ತಂಡ) -20 ಮಂದಿ, 29 ಅಳಿಕೆ ಬ್ಯಾಂಡ್ ಸೆಟ್ 45 ಮಂದಿ ,30 ಹೊನ್ನಾವರ ಬ್ಯಾಂಡ್ ಸೆಟ್ ಜೇಮ್ಸ್ ಮತ್ತು ತಂಡ, ಹೊನ್ನಾವರ - 17 ಮಂದಿ, 31 ಪೋಲೀಸ್ ಬ್ಯಾಂಡ್ ಸೆಟ್ 45 ಮಂದಿ ,32 ದುಡಿ ಕುಣಿತ ಯದುಪತಿಗೌಡ ಮತ್ತು ತಂಡ ಬೆಳ್ತಂಗಡಿ - 25 ಮಂದಿ, ಪುರವಂತಿಕೆ ಯೋಗೇಂದ್ರ ಮತ್ತು ತಂಡ, ಹಾವೇರಿ - 25 ಮಂದಿ ,34 ಗುಮ್ಟೆ ಕುಣಿತ 20 ಮಂದಿ ,35 ದಪ್ಪು ಹುಸೇನ್ ಕಾಟಿಪಳ್ಳ ಮತ್ತು ತಂಡ - 22 ಮಂದಿ , 36 ಶಾರ್ದೂಲ ಕೃಷ್ಣ ಮತ್ತು ತಂಡ ಬಂಟ್ವಾಳ - 20 ಮಂದಿ , ಮರಗಾಲು ಕುಣಿತ ರವೀಂದ್ರ ಮತ್ತು ತಂಡ ಚಿತ್ರದುರ್ಗ- 30 ಮಂದಿ , ಸೈನಿಕರು 50 ಮಂದಿ ಕಲಾವಿದರು, ಕೇರಳ ಮಹಿಳಾ ಚೆಂಡೆ ಪ್ರಕಾಶ್- 18 ಮಂದಿ ಕಲಾವಿದರು , ಸೃಷ್ಟಿ ಆರ್ಟ್ಸ್ , ಬೆಂಗಳೂರು ಜಗ್ಗಲಿಗೆ ಮೇಳ ,ಜಂ-ಜಂ ,ಲಂಬಾಣಿ , ಕೊಡವ ನೃತ್ಯ ಈ ತಂಡಗಳು ಮೆರವಣಿಗೆಯ ಮೆರುಗು ಹೆಚ್ಚಿಸಲಿವೆ.