Saturday, January 28, 2012

ಮೀನುಗಾರರ ಹಿತ ರಕ್ಷಣೆಗೆ ಸರ್ಕಾರ ಬದ್ದ: ಡಿ.ವಿ.ಸದಾನಂದಗೌಡ

ಮಂಗಳೂರು,ಜನವರಿ.28:ಕರ್ನಾಟಕ ರಾಜ್ಯದಲ್ಲಿ 5.60 ಲಕ್ಷ ಹೆಕ್ಟೇರ್ ಜಲ ವಿಸ್ತೀರ್ಣದ ಒಳನಾಡು ಹಾಗೂ ಉದ್ದದ ಕರಾವಳಿ ತೀರ ಪ್ರದೇಶ ಹೊಂದಿದ್ದು , ಒಳನಾಡು ಮತ್ತು ಕರಾವಳಿ ಮೀನುಗಾರಿಕೆಗೆ ವಿಪುಲ ಅವಕಾಶವಿದ್ದು, ರಾಜ್ಯದಲ್ಲಿ ಸುಮಾರು ಎರಡುವರೆ ಲಕ್ಷ ಕುಟುಂಬಗಳು ಮೀನುಗಾರಿಕೆಯನ್ನೇ ಜೀವನಾಧಾರವನ್ನಾಗಿಸಿಕೊಂಡಿದ್ದಾರೆ.ಅವರ ಹಿತಕ್ಕಾಗಿ ರಾಜ್ಯ ಸರ್ಕಾರ ಅನೇಕ ಯೋಜನೆಗಳನ್ನು ಹಮ್ಮಿಕೊಂಡು ಸಮರ್ಪಕವಾಗಿ ಅನುಷ್ಠಾನಗೊಳಿಸುತ್ತಿದೆ ಎಂದು ಕರ್ನಾಟಕ ರಾಜ್ಯದ ಸನ್ಮಾನ್ಯ ಮುಖ್ಯಮಂತ್ರಿಗಳಾದ ಡಿ.ವಿ.ಸದಾನಂದಗೌಡ ಅವರು ತಿಳಿಸಿದ್ದಾರೆ.ಅವರು ಇಂದು ಮಂಗ ಳೂರಿ ನಲ್ಲಿ ಕರ್ನಾ ಟಕ ಮೀನು ಗಾರಿಕಾ ಅಭಿ ವೃದ್ದಿ ನಿಗಮ ನಿಯ ಮಿತ ಇದರ ಕೇಂದ್ರ ಕಛೇರಿ ಆವರ ಣದಲ್ಲಿ ನಿರ್ಮಾ ಣವಾ ಗಲಿ ರುವ ಆಧು ನಿಕ ಮೀನು ಸಂಸ್ಕ ರಣಾ ಸ್ಠಾವ ರಕ್ಕೆ ಶಿಲಾ ನ್ಯಾಸ ನೆರ ವೇರಿಸಿ ಮಾತ ನಾಡಿದರು.ಮೀನು ಗಾರಿಕೆ ಇಲಾಖೆಯ ಯೋಜನಾ ಕಾರ್ಯಕ್ರಮಗಳಿಗೆ ಒದಗಿಸಲಾಗುವ ಅನುದಾನವನ್ನು ಕಳೆದ ನಾಲ್ಕು ವರ್ಷಗಳಲ್ಲಿ ಗಣನೀಯವಾಗಿ ಹೆಚ್ಚಿಸಲಾಗಿದ್ದು, 2010-11ನೇ ಸಾಲಿನಲ್ಲಿ 130 ಕೋಟಿ ರೂ.ಗಳ ಅನುದಾನ ನೀಡಲಾಗಿದೆ, 2011-12ನೇ ಸಾಲಿನಲ್ಲಿ ಸಣ್ಣ ಬಂದರುಗಳನ್ನು ಪಿಪಿಪಿ ಆಧಾರದಡಿಯಲ್ಲಿ ನಿರ್ಮಿಸಲು 100 ಕೋಟಿ ರೂ.ಗಳನ್ನು , ಮತ್ಸಾಶ್ರಯ ಯೋಜನೆಯಡಿ 2000 ಮನೆಗಳನ್ನು ನಿರ್ಮಿಸಲು 9 ಕೋಟಿ ರೂ.ಗಳನ್ನು, 2000 ಹೆಕ್ಟೇರ್ ಮೀನು ಕೃಷಿ ಕೊಳಗಳನ್ನು ನಿರ್ಮಿಸಲು 10 ಕೋಟಿ ರೂ.ಗಳನ್ನು ಒದಗಿಸಲಾಗಿದೆ ಎಂದರು.ಇದಲ್ಲದೆ ಸಂಕಷ್ಟ ಪರಿಹಾರ ನಿಧಿಯಿಂದ ಮರಣ ಹೊಂದುವ ಮೀನುಗಾರರ ಅವಲಂಬಿತರಿಗೆ ನೀಡುವ ಪರಿಹಾರ ಮೊತ್ತವನ್ನು 50,000 ರೂ.ಗಳಿಂದ ಒಂದು ಲಕ್ಷ ರೂ.ಗಳಿಗೆ ಹೆಚ್ಚಿಸಲಾಗಿದೆ, ಮೀನು ಮಾರಾಟ, ಮೀನು ಸಂಸ್ಕರಣಾ ಚಟುವಟಿಕೆಗಳಲ್ಲಿ ಪ್ರಮುಖವಾಗಿ ತಮ್ಮನ್ನು ತೊಡಗಿಸಿಕೊಂಡಿರುವ ಮೀನುಗಾರ ಮಹಿಳೆಯರಿಗೆ ಸ್ವಾವಲಂಬನಾ ಯೋಜನೆಯಡಿ 10 ಕೋಟಿ ರೂ. ಅನುದಾನ ಒದಗಿಸಿ 2,000 ಸ್ವಸಹಾಯ ಗುಂಪುಗಳ ಮೂಲಕ ಅವರ ಸಬಲೀಕರಣಕ್ಕೆ ಸರ್ಕಾರ ಮುಂದಾಗಿದೆ. ಈ ಬಾರಿಯ ಬಜೆಟ್ ನಲ್ಲಿ ಇನ್ನೂ ಹೆಚ್ಚಿನ ಅನುದಾನವನ್ನು ಮೀನುಗಾರಿಗೆ ಮೀಸಲಿರಿಸುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.ರಾಜ್ಯದ ಸಣ್ಣ ಬಂದ ರುಗ ಳನ್ನು ಪರಿ ಣಿತ ಖಾಸಗೀ ಸಂಸ್ಥೆ ಗಳ ಸಹ ಭಾಗಿ ತ್ವದಲ್ಲಿ ನಿರ್ಮಿ ಸಲು 2011-12ನೇ ಸಾಲಿನ ಆಯವ್ಯ ಯದಲ್ಲಿ 100 ಕೋಟಿ ರೂ,ಗಳನ್ನು ಮೀಸ ಲಿಡ ಲಾಗಿದೆ, ಕರಾ ವಳಿ ಮೀನು ಗಾರ ರಿಗೆ ಮೂಲ ಭೂತ ಸೌಕರ್ಯ ಒದಗಿ ಸಲು ರೂ.57.60 ಕೋಟಿ ಅಂದಾಜು ವೆಚ್ಚದ ಮಲ್ಪೆ 3ನೇ ಹಂತದ ಕಾಮ ಗಾರಿ ಗಳನ್ನು ಪ್ರಾ ರಂಭಿ ಸಲಾಗಿದೆ, ಬೈಂ ದೂರಿನ ಕೊಡೇ ರಿಯಲ್ಲಿ 30 ಕೋಟಿ ರೂ. ಅಂ ದಾಜು ವೆಚ್ಚ ದಲ್ಲಿ ಮೀನು ಗಾರಿಕೆ ಇಳಿದಾಣ ಕೇಂದ್ರವನ್ನು ಸ್ಥಾಪಿಸಲು 10 ಕೋಟಿ ರೂ.ಗಳ ಅನುದಾನ ಒದಗಿಸಲಾಗಿದೆ, ಗಂಗೊಳ್ಳಿ ಮೀನುಗಾರಿಕೆ ಬಂದರಿನಲ್ಲಿ 300 ಲಕ್ಷ ರೂ.ವೆಚ್ಚದಲ್ಲಿ 63 ಮೀಟರ್ ಉದ್ದದ ತಡೆಗೋಡೆ ನಿರ್ಮಾಣ ಕೈಗೊಳ್ಳಲಾಗಿದೆ, ಕರಾವಳಿ ಕೊಂಡಿ ರಸ್ತೆಗಳ ನಿರ್ಮಾಣ ಮತ್ತು ನಿರ್ವಹಣೆಗಾಗಿ ಒಟ್ಟು 5 ಕೋಟಿ ರೂ. ಅನುದಾನ ನೀಡಲಾಗಿದೆ ಎಂದು ಮಾನ್ಯ ಮುಖ್ಯಮಂತ್ರಿಗಳು ತಿಳಿಸಿದ್ದಾರೆ.
ಸಮಾರಂಭದ ಅಧ್ಯಕ್ಷತೆಯನ್ನು ವಿಧಾನಸಭಾ ಉಪಸಭಾಪತಿಗಳಾದ ಎನ್.ಯೋಗೀಶ್ ಭಟ್ ಅವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಹಾಗೂ ಜೀವಿಶಾಸ್ತ್ರ, ಪರಿಸರ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಕೃಷ್ಣ ಜೆ.ಪಾಲೆಮಾರ್, ಮೀನುಗಾರಿಕೆ, ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವರಾದ ಆನಂದ ವಿ ಆಸ್ನೋಟಿಕರ್ , ಸಂಸದರಾದ ನಳಿನ್ ಕುಮಾರ್ ಕಟೀಲ್,ಶಾಸಕರಾದ ಬಿ.ರಮಾನಾಥ ರೈ,ಯು.ಟಿ.ಖಾದರ್,ವಿಧಾನ ಪರಿಷತ್ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್, ಮೇಯರ್ ಪ್ರವೀಣ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ. ನಾಗರಾಜ ಶೆಟ್ಟಿ,ಮೀನುಗಾರಿಕಾ ಅಭಿವೃದ್ದಿ ನಿಗಮದ ಅಧ್ಯಕ್ಷ ನಿತಿನ್ ಕುಮಾರ್, ಅಲ್ಪ ಸಂಖ್ಯಾತರ ಅಭಿವೃದ್ದಿ ನಿಗಮದ ಅಧ್ಯಕ್ಷ ಅಮೂಬಕ್ಕರ್, ಸೇರಿದಂತೆ ಅನೇಕ ಮಹನೀಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.