Sunday, January 15, 2012

ಬೇಡಿಕೆಯ ಬಿದ್ರಿ ಕಲೆ

ಆ ಕಡು ಕಪ್ಪು ಬಣ್ಣದ ವಿವಿಧ ಆಕಾರಗಳ ಮೇಲೆ ಕೆತ್ತಿದ ಬೆಳ್ಳಿ ಚಿತ್ತಾರಗಳು ಚಿತ್ತಾಕರ್ಷಕ.ಕರಕುಶಲತೆಯ ಆ ಸೂಕ್ಷ್ಮ ಕೆತ್ತನೆ ಒಂದಷ್ಟು ಕೂಡಾ ತಪ್ಪು ಹುಡುಕಲಾರದಂತಹ ಸೂಕ್ಷ್ಮ ಕಲೆ...ನಾಜೂಕುತನ.ದೇಶ -ವಿದೇಶಗಳಲ್ಲೂ ಇದಕ್ಕೆ ಭಾರೀ ಬೇಡಿಕೆ...ಗಿಫ್ಟ್ ನೀಡಲು, ಅಲಂಕಾರಿಕೆಯಾಗಿ ಪ್ರದರ್ಶಿಸಲು , ಒಟ್ಟಿನಲ್ಲಿ ಒಪ್ಪ ಓರಣವಾಗಿ ಶೋಕೇಸ್ ನಲ್ಲಿ ಜೋಡಿಸಿಡಲೂ ಇವು ಸೈ...

ಈ ಸುಂದರ ಬಿದ್ರಿ ಕರಕುಶಲ ವಸ್ತುಗಳನ್ನು ಕೊಳ್ಳುವ ಭಾಗ್ಯ ಇದೀಗ ನಮ್ಮ ಮಂಗಳೂರಿನವರದ್ದು. ನಗರದಲ್ಲಿ ನಡೆಯುತ್ತಿರುವ 17ನೇ ರಾಷ್ಟ್ರೀಯ ಯುವಜನೋತ್ಸವದ ಅಂಗವಾಗಿ ಏರ್ಪಡಿಸಿದ ವಸ್ತು ಪ್ರರ್ದಶನದ ಸ್ಟಾಲ್ ಇದೀಗ ಹಲವು ವೈವಿಧ್ಯಮಯ ಮಳಿಗೆಗಳಿಂದ ಪ್ರಸಿದ್ಧಿ ಪಡೆಯುತ್ತಿದೆ. ಬಿದರ್ ಬಿದ್ರಿ ಯುವಕ ಮಂಡಲವು ಈ ಸ್ಟಾಲನ್ನು ಇಲ್ಲಿ ತೆರೆದಿದ್ದು ,ಮಂಗಳೂರಿನ ಜನತೆ ಬಹಳ ಇಷ್ಟ ಪಟ್ಟು ಈ ಬಿದ್ರಿ ಕರಕುಶಲ ವಸ್ತುಗಳನ್ನು ಕೊಳ್ಳುತ್ತಿದ್ದಾರೆ.ಬಹಳ ಬೇಡಿಕೆ ಈಭಾಗದಲ್ಲಿದೆ ಎಂಬುದು ಮಾರಟಗಾರ ಒಬೈದುಲಾಹ್ ಖಾನ್ ಅಭಿಪ್ರಾಯ.
ಸುಮಾರು 6000 ವರ್ಷಗಳ ಇತಿಹಾಸ ಈ ಬಿದ್ರಿ ಕಲೆಗಿದೆ.ಪರ್ಶಿಯನ್ ಕಲೆಯಾಗಿದ್ದು,ಕರ್ನಾಟಕದಲ್ಲಿ ಬಹುಮಾನಿ ಸುಲ್ತಾನರ ಕಾಲದಲ್ಲಿ ಉತ್ತಮ ಪ್ರೋತ್ಸಾಹಕ್ಕೆ ಪಾತ್ರವಾಯಿತು. ಆಸ್ಟ್ರೇಲಿಯಾ, ಇಂಗ್ಲೇಂಡ್, ಯು.ಎಸ್ .ಎ ,ಮಲೇಷಿಯಾಗಳಿಗೆ ಅಧಿಕ ಪ್ರಮಾಣದಲ್ಲಿ ಇವುಗಳು ರಪ್ತಾಗುತ್ತಿವೆ.
ನವೀನ್.ಕೆ