Saturday, January 14, 2012

ಕೆಹ್ವಾ ಮಹಿಮೆ...

ರಾಜ್ಯ - ರಾಷ್ಟ್ರ

ಕೆಹ್ವಾ ಎಂದರೆ ಏನಪ್ಪ ಎಂದು ಯೋಚನೆ ಮಾಡತ್ತಾ ಇದ್ದೀರಾ? ಇದು ವಿಶ್ವದೆಲ್ಲೆಡೆ ಪ್ರಸಿದ್ದಿ ಪಡೆದ ಕಾಶ್ಮೀರ ಟೀ. ಆದರೆ ಇದೀಗ ಕರಾವಳಿಯ ಮಂಗಳೂರಿನಲ್ಲಿ ಕಾಶ್ಮೀರದ ಕೆಹ್ವಾ ಮಂಗಳೂರಿನ ಜನರ ಮನಸೆಳೆದಿದೆ. ಮಂಗಳೂರಿನ ರಾಷ್ಟ್ರೀಯ ಯುವಜನೋತ್ಸವದ ಕರಾವಳಿ ಮೈದಾನದಲ್ಲಿ ವಿವಿಧ ರಾಜ್ಯಗಳ ವಿಶೇಷ ಖಾದ್ಯ ತಿನಿಸುಗಳು ರುಚಿಯನ್ನು ಉಣಬಡಿಸುತ್ತಿದ್ದವು. ಅವುಗಳಲ್ಲಿ ಕಾಶ್ಮೀರದ ಕೆಹ್ವಾ ಟೀ ಅಥವಾ ಸ್ಯಾಫ್ರನ್ ಟೀ ಸ್ಟಾಲ್ ಜನರಿಂದ ತುಂಬಿತ್ತು.


ಒಣಗಿದ ಕೇಸರಿ ಹೂವಿನ ಶಲಾಕೆಗಳಿಂದ ತಯಾರಿಸಿದ ಈ ಟೀ ಮಾಡಲು ಬಲು ಸುಲಭ. ಅಲ್ಲದೇ ಆರೋಗ್ಯಕ್ಕೂ ಹಿತಕರವಾಗಿ ತಮ್ಮ ಜ್ಞಾಪಕ ಶಕ್ತಿಯನ್ನು ವೃದ್ಧಿಸುವ ಕಾರ್ಯವನ್ನು ಈ ಟೀ ಮಾಡುತ್ತದೇ ಎಂದು ಕಾಶ್ಮೀರದ ಮಳಿಗೆಯ ಶಬ್ಬೀರ್ ಅಹಮದ್ ಹೇಳುತ್ತಾರೆ. ಕರ್ನಾಟಕದ ಜನರು ಸಹೃದಯತೆಯರು; ಇಲ್ಲಿನ ವಾತಾವರಣ ಬಹಳ ಚೆನ್ನಾಗಿದೆ ಮಂಗಳೂರಿನ ಕಡಲತೀರವೂ ಮನಸ್ಸನ್ನು ಸೂರೆಗೊಂಡಿದೆ ಎಂದರು.

ಕಾಶ್ಮೀರದ ಕೇಸರಿ ಟೀಯ ಕುರಿತು ಮಂಗಳೂರಿನ ಜನತೆ, ಟೀ ತುಂಬಾ ಸ್ವಾದಿಷ್ಟವಾಗಿದೆ, ಅದಕ್ಕಿಂತ ಹೆಚ್ಚಾಗಿ ಕಾಶ್ಮೀರದವರ ನುಡಿ-ನಡವಳಿಕೆ ಗೌರವಾರ್ಹವಾಗಿದೆ ಸ್ಟಾಲ್ ನಲ್ಲಿರುವ ವಿವಿಧ ರೀತಿಯ ತಿಂಡಿಗಳು ರುಚಿಕರವಾಗಿದೆ ಎಂದು ತಮ್ಮ ಅಭಿಪ್ರಾಯ ಹೇಳಿಕೊಂಡರು.

ಶ್ವೇತ ಎಲ್. ಕೆ