Thursday, September 8, 2011

ಕಲಿಕಾ ಸಮಾಜದಿಂದ ಅಭಿವೃದ್ಧಿ ಸಾಧ್ಯ; ಟಿ ಶೈಲಜಾ ಭಟ್

ಮಂಗಳೂರು,ಸೆಪ್ಟೆಂಬರ್.08: ಮಹಿಳೆಯೊಬ್ಬರು ಕಲಿತರೆ ಕುಟುಂಬವೇ ಸಾಕ್ಷರ ಕುಟುಂಬವಾಗಲಿದೆ.ಇದರಿಂದ ಕಲಿತವರಿಂದ ಸಮಾಜದ ಅಭಿವೃದ್ಧಿ ಸಾಧ್ಯ ಎಂದು ದಕ್ಷಿಣಕನ್ನಡ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಕೆ.ಟಿ ಶೈಲಜಾ ಭಟ್ ಅವರು ತಿಳಿಸಿದ್ದಾರೆ.ಅವರು ಇಂದು ಲೋಕ ಶಿಕ್ಷಣ ನಿರ್ದೇ ಶನಾ ಲಯ ಬೆಂಗ ಳೂರು,ಜಿಲ್ಲಾ ನಿರಂ ತರ ಶಿಕ್ಷಣ ಸಂಘ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಪಂಚಾ ಯತ್ ಮಂಗ ಳೂರು,ನವ ಸಾಕ್ಷ ರರ ವೇದಿಕೆ ,ಜಿಲ್ಲಾ ಸಾಕ್ಷ ರತಾ ಸಮಿತಿ ಹಾಗೂ ಇನ್ನೂ ಹಲ ವಾರು ಸ್ವಯಂ ಸೇವಾ ಸಂಸ್ಥೆ ಗಳ ಆಶ್ರಯ ದಲ್ಲಿ ದ.ಕ. ಜಿಲ್ಲಾ ಪಂಚಾ ಯತ್ ನೇತ್ರಾ ವತಿ ಸಭಾಂಗಣದಲ್ಲಿ ಆಯೋಜಿಸಿದ್ದ ಅಂತರ್ ರಾಷ್ಟ್ರೀಯ ಸಾಕ್ಷರತಾ ದಿನಾಚರಣೆ-2011 ಹಾಗೂ ಸಂಪೂರ್ಣ ಸಾಕ್ಷರ ಸ್ವಚ್ಛ ಮಾದರಿ ಗ್ರಾಮ ನಿರ್ಮಾಣ ಸಂಕಲ್ಪ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಮ್ಮ ಸಮಾಜದಲ್ಲಿ ಮಹಿಳೆಯರ ಸಾಕ್ಷರತೆ ಬಗ್ಗೆ ನಾವು ಹೆಚ್ಚಿನ ಗಮನ ಹರಿಸಬೇಕಿದೆ.ಕುಟುಂಬದಲ್ಲಿ ಕಲಿತ ಮಹಿಳೆಯರಿದ್ದರೆ ಇಡೀ ಕುಟುಂಬವೇ ಸಾಕ್ಷರ ಕುಟುಂಬವಾಗುತ್ತದೆ. ಸಾಕ್ಷರಸ್ಥರಾಗಿ ಪರಿಸರ ಸ್ವಚ್ಛತೆಗೆ ಗಮನ ಹರಿಸಿ ಪ್ಲಾಸ್ಟಿಕ್ ಮುಕ್ತ ಪರಿಸರ ಮಾಡೋಣ ಎಂದು ಕರೆಯಿತ್ತರು.ಜಿಲ್ಲಾ ಪಂಚಾ ಯತ್ ಮುಖ್ಯ ಕಾರ್ಯ ನಿರ್ವ ಹಣಾ ಧಿಕಾರಿ ಡಾ.ವಿಜಯ ಪ್ರಕಾಶ್ ಅವರು ಮಾತ ನಾಡಿ ಸಾಕ್ಷ ರತೆ ಸ್ವಚ್ಛತೆ ಮತ್ತು ಉದ್ಯೋಗ ಭರ ವಸೆ ಯೋಜನೆ ಜಿಲ್ಲೆಯ ಗ್ರಾ ಮೀಣ ಜನ ರನ್ನು ಸಂಪೂರ್ಣ ಸ್ವಾವ ಲಂಬಿ ಗಳನ್ನಾ ಗಿಸಲಿದೆ.ಆದ್ದ ರಿಂದ ಅಧಿ ಕಾರಿ ಗಳು ಪ್ರಾಮಾಣಿ ಕತೆಯಿಂದ ಜಿಲ್ಲೆಯಲ್ಲಿ ಸಾಕ್ಷರತೆ ಪ್ರಮಾಣ ಶೇಕಡಾ 100 ರಷ್ಟು ಸಾಧಿಸಲು ಸಂಪೂರ್ಣ ಸ್ವಚ್ಛ ಜಿಲ್ಲೆಯಾಗಿಸಲು ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಭರವಸೆ ಯೋಜನೆಗಳ ಪ್ರಾಮಾಣಿಕ ಅನುಷ್ಠಾನಕ್ಕೆ ಮುಂದಾದರೆ ಮಾತ್ರ ಜಿಲ್ಲೆ ದೇಶದಲ್ಲೇ ಮಾದರಿ ಜಿಲ್ಲೆಯಾಗಲಿದೆ ಎಂದರು.
ಜಿಲ್ಲಾ ನವಸಾಕ್ಷರರ ಅಭಿವೃದ್ಧಿ ಸಂಸ್ಥೆ ಅಧ್ಯಕ್ಷ್ಯೆ ಹಾಗೂ ಬನ್ನೂರು ಗ್ರಾಮ ಪಂಚಾಯತ್ ಅದ್ಯಕ್ಷ್ಯೆ ಸೇಸಮ್ಮ ಮಾತನಾಡಿ ಮೊದಲು ನಮ್ಮ ಮನೆ ಸ್ವಚ್ಚ ಮಾಡಿ ನಂತರ ಇತರರಿಗೆ ಸ್ವಚ್ಚತೆ ಬಗ್ಗೆ ತಿಳಿಸಬೇಕೆಂದರು.ಗ್ರಾಮ ಪಂಚಾಯತ್ ಗಳಿಂದ ಸಾಕ್ಷರತಾ ಕಾರ್ಯಕ್ರಮಗಳಿಗೆ ರೂ.25ಸಾವಿರ ಅನುದಾನವನ್ನು ದೊರಕಿಸುವುದಾಗಿ ತಿಳಿಸಿದರು.
ಒಂಬುಡ್ಸ್ ಮನ್ ಶೀನ ಶೆಟ್ಟಿ ಅವರು ಮಾತನಾಡಿ ಅಕ್ಟೋಬರ್ 2 ರ ಗಾಂಧಿಜಯಂತಿಯಂದು ಜಿಲ್ಲೆಯನ್ನು ಸಂಪೂರ್ಣ ಸಾಕ್ಷರತಾ,ಸ್ವಚ್ಛ ಹಾಗೂ ಬೃಷ್ಠಾಚಾರ ಮುಕ್ತ ಜಿಲ್ಲೆಯನ್ನಾಗಿಸುವ ಬಗ್ಗೆ ಹಲವು ಗ್ರಾಮ ಪಂಚಾಯತ್ ಗಳು ಪ್ರಮಾಣ ಪತ್ರ ಸ್ವೀಕರಿಸಿದೆ ಎಂದರು. ಇದಕ್ಕಾಗಿ ಗ್ರಾಮ ಪಂಚಾಯತ್ ಗಳೊಂದಿಗೆ ನವಸಾಕ್ಷರ ಸ್ವಯಂ ಸೇವಕರು ಸ್ವಚ್ಛತಾ ಸೈನಿಕರು ಪ್ರತೀ ಮನೆ ಸಾಕ್ಷರ ಮನೆಯಾಗಿಸಿ ಸ್ಚಚ್ಛ ಮನೆಯನ್ನಾಗಿಸಿ ಸಮೃದ್ಧ ಮಾದರಿ ಮನೆಗಳಾಗಿಸುವಲ್ಲಿ ಕಾರ್ಯೋನ್ಮುಖರಾಗುವಂತೆ ತಿಳಿಸಿದರು.
ನವಸಾಕ್ಷರರಾದ ಶ್ರೀಮತಿ ಯಶೋಧ,ಹುಸೇನ್,ನಾರಾಯಣ,ಕಾಂತಾ ಪೂಜಾರಿಮುಂತಾದವರು ಮಾತನಾಡಿದರು.ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀಮತಿ ಮಮತಾ ಹಾಗೂ ಶ್ರೀಕರೀ ಅವರು ಮಾತನಾಡಿದರು.ವಯಸ್ಕರ ಶಿಕ್ಷಣಾಧಿಕಾರಿ ಮಲ್ಲೇಶಪ್ಪ ವಂದಿಸಿದರು.