ಪುರ ಭವನ ದಲ್ಲಿ ಇಂದು ನಡೆದ ದಕ್ಷಿಣ ಕನ್ನಡ ಜಿಲ್ಲಾ ಪಂಚಾ ಯತ್, ಸಾರ್ವ ಜನಿಕ ಶಿಕ್ಷಣ ಇಲಾಖೆ ಮಂಗ ಳೂರು, ದ.ಕ.ಜಿಲ್ಲಾ ಮಟ್ಟದ ಶಿಕ್ಷ ಕರ ದಿನಾ ಚರಣೆ ಸಮಿತಿ ಮತ್ತು ಮಂಗಳೂರು ನಗರ ವಲಯ ಶಿಕ್ಷಕರ ದಿನಾಚರಣೆ ಸಮಿತಿ ಇದರ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಅನು ದಾನಿತ ಶಾಲಾ ಶಿಕ್ಷಕ ರನ್ನು ಅದೇ ಶಾಲೆ ಯಲ್ಲಿ ಮುಂದು ವರಿಸ ಬೇಕು. ಯಾವುದೇ ಕಾರಣ ಕ್ಕೂ ಬದ ಲಾವಣೆ ಮಾಡು ವುದು ಬೇಡ. ಎಂದ ಸಚಿ ವರು ಶಿಕ್ಷ ಕರ ಬಹು ತೇಕ ಸಮಸ್ಯೆ ಯನ್ನು ಸರ ಕಾರ ಬಗೆ ಹರಿ ಸಿದೆ.ಪ್ರಾಥ ಮಿಕ, ಪ್ರೌಢ, ಪದವಿ ಪೂರ್ವ ಹಾಗೂ ಪದವಿ ಕಾಲೇಜು ಗಳಿಗೆ ಸಂಬಂ ಧಿಸಿ ಸುಮಾರು 45 ಸಾವಿರ ಹೊಸ ಶಿಕ್ಷ ಕರ ನೇಮ ಕಾತಿ ನಮ್ಮ ಸರ್ಕಾ ರದ ಅವಧಿ ಯಲ್ಲಿ ನಡೆ ದಿದೆ.ಶಿಕ್ಷಣ ಇಲಾಖೆಯ ಕುಂದು ಕೊರತೆ ಗಳನ್ನು ಹಂತ ಹಂತವಾಗಿ ಸರಿಪಡಿಸಲಾಗುತ್ತಿದೆ ಎಂದರು.ಶಿಕ್ಷಕರು ಜವಾಬ್ದಾರಿಯುತ ಸ್ಥಾನದಲ್ಲಿರುವವರು.ಆದರೆ ಕೆಲವೊಂದು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಪ್ರತಿಭಟನೆಗಿಳಿಯುವ ಕೆಲಸವನ್ನು ಶಿಕ್ಷಕರು ಮಾಡಬಾರದು. ಶಿಕ್ಷಕರಿಗೆ ಅದು ಭೂಷಣವಲ್ಲ. ಶಿಕ್ಷಕರಿಗೆ ತೊಂದರೆ ಆಗದಂತೆ ನೋಡಿಕೊಳ್ಳಲಾಗುವುದು ಎಂದರು.ಶಿಕ್ಷಕರ ವೇತನ ಪಾವತಿ ಇನ್ನುಮುಂದೆ ಪ್ರತಿ ತಿಂಗಳ 1ನೇ ತಾರೀಖಿನೊಳಗೆ ವೇತನ ಖಾತೆಗೆ ಜಮೆ ಆಗುವಂತೆ ಒತ್ತು ನೀಡಲಾಗುವುದು ಎಂದರು.ವಿಧಾನ ಸಭಾ ಉಪ ಸಭಾಧ್ಯಕ್ಷ ಎನ್.ಯೋಗೀಶ್ ಭಟ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.ವಿಧಾನ ಪರಿಷತ್ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್, ಶಾಸಕ ಯು.ಟಿ.ಖಾದರ್, ಜಿ.ಪಂ. ಸಿಇಒ ಡಾ.ಕೆ.ಎನ್.ವಿಜಯ ಪ್ರಕಾಶ್, ಅಧ್ಯಕ್ಷೆ ಕೆ.ಟಿ.ಶೈಲಜಾ ಭಟ್, ಉಪಾಧ್ಯಕ್ಷೆ ಧನಲಕ್ಷ್ಮೀ ಜನಾರ್ಧನ್, ಉಪಮೇಯರ್ ಗೀತಾ ನಾಯಕ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್.ಪ್ರದೀಪ್ ಕುಮಾರ್ ಕಲ್ಕೂರ, ಜಿ.ಪಂ.ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಈಶ್ವರ ಕಟೀಲ್ ಮುಖ್ಯ ಅತಿಥಿಗಳಾಗಿದ್ದರು.
ಇದೇ ಸಂದರ್ಭ 2010-11ನೇ ಸಾಲಿನ ರಾಜ್ಯ ಪ್ರಶಸ್ತಿ ಪುರ ಸ್ಕೃತ ಪುತ್ತೂರು ನವೋ ದಯ ಪ್ರೌಢ ಶಾಲೆಯ ಶಿಕ್ಷಕ ದಯಾ ನಂದ ರೈ ಮತ್ತು 2011-12ನೇ ಸಾಲಿನ ಜಿಲ್ಲಾ ಪ್ರಶಸ್ತಿ ಪುರ ಸ್ಕೃತ ರಾದ 12 ಮಂದಿ ಶಿಕ್ಷಕ ಶಿಕ್ಷಿಕ ಯರನ್ನು ಸನ್ಮಾ ನಿಸ ಲಾಯಿತು. ಅಲ್ಲದೆ ಮಂಗ ಳೂರು ನಗರ ವ್ಯಾಪ್ತಿಯ ನಿವೃತ್ತ ಅಧ್ಯಾಪ ಕರನ್ನು ಮತ್ತು ಶೇ.100 ಫಲಿತಾಂಶ ಪಡೆದ ಪ್ರೌಢ ಶಾಲೆ ಗಳನ್ನು ಗೌರವಿ ಸಲಾಯಿತು. 2011-12 ನೇ ಸಾಲಿನ ಜಿಲ್ಲಾ ಪ್ರಶಸ್ತಿ ಪುರಸ್ಕೃತ ಶಿಕ್ಷಕರ ವಿವರ ಇಂತಿದೆ.ಪುತ್ತೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೆಳ್ಳಿಪ್ಪಾಡಿಯ ಮುಖ್ಯ ಶಿಕ್ಷಕಿ,ಶ್ರೀಮತಿ ಯಶೋಧ.ಕೆ.ಎನ್.,
ಸುಳ್ಯ ಕೋಟೆ ಮುಂಡಗಾರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಶ್ರೀ ಶುಭಾಶ್ಚಂದ್ರ ರೈ.ಬಿ.
ಮಂಗಳೂರು ಕಂದಾವರ ಪೊಂಪೈ ಅ.ಹಿರಿಯ ಪ್ರಾಥಮಿಕ ಶಾಲೆಯ ಸಹಾಯಕ ಶಿಕ್ಷಕಶ್ರೀ ಇಮಾಕುಲಾತ್ ನಜ್ರೆತ್,
ಮೂಡಬಿದ್ರೆ ಕೋಟೆ ಬಾಗಿಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಶ್ರೀ ಸುಧಾಕರ ಸಾಲ್ಯಾನ್ ಬಿ.
ಮಂಗಳೂರು ನಗರ ವಲಯ ನೀರೇಸ್ವಾಲ್ಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಮುಖ್ಯ ಶಿಕ್ಷಕಿ ಶ್ರೀಮತಿ ರವಿಕಲಾ ಶೆಟ್ಟಿ,
ಬಂಟ್ವಾಳ ತಾಲೂಕು ಸಾಲೆತ್ತೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹಾಯಕ ಶಿಕ್ಷಕಿ ಶ್ರೀಮತಿ ವಿಜಯಾ ಶೆಟ್ಟಿ,
ಬೆಳ್ತಂಗಡಿ ತಾಲೂಕು ತಣ್ಣೀರು ಪಂತಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಮುಖ್ಯ ಶಿಕ್ಷಕ ಶ್ರೀ ತಿರುಮಲೇಶ್ವರ ಭಟ್ ಪಿ.

ಪ್ರೌಢಶಾಲೆ ವಿಭಾಗ:-
ಮೂಡಬಿದ್ರೆ ವಲಯ ತಾಕೊಡೆ ಆದರ್ಶ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಝೀಟಾ ಡಾಯಸ್ ,
ಪುತ್ತೂರು ಬೆಟ್ಟಂಪಾಡಿ ನವೋದಯ ಪ್ರೌಢಶಾಲೆ ಚಿತ್ರಕಲಾ ಶಿಕ್ಷಕರು ಶ್ರೀ ಗೋಪಾಲಕೃಷ್ಣ ಐ.
ಬೆಳ್ತಂಗಡಿ ಕೊಯ್ಯಹೂರು,ಸಕರ್ಾರಿ ಪ್ರೌಢಶಾಲೆ ಸಹಾಯಕ ಶಿಕ್ಷಕ ಶ್ರೀ ರಾಧಾಕೃಷ್ಣ .ಟಿ.
ಸುಳ್ಯ ಅರಂತೋಡು ನೆಹರು ಸ್ಮಾರಕ ಪದವಿಪೂರ್ವ ಕಾಲೇಜು ಸಹಯಕ ಶಿಕ್ಷಕಶ್ರೀ ಆನಂದ ವೈ.ಎ.
ಮಂಗಳೂರು ನಗರ ವಲಯ ಬಲ್ಮಠ ಸರಕಾರಿ ಪದವಿಪೂರ್ವ ಕಾಲೇಜಿನ ಸಹಾಯಕ ಶಿಕ್ಷಕ ಶ್ರೀಮತಿ ವಿನೋದಇವರುಗಳು ಶಿಕ್ಷಕ ಪ್ರಶಸ್ತಿಯನ್ನು ಪಡೆದಿರುತ್ತಾರೆ.