Friday, September 16, 2011

ಗ್ರಾಮೀಣ ಕ್ರೀಡಾ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಿ;ಈಶ್ವರ ಕಟೀಲ್

ಮಂಗಳೂರು,ಸೆಪ್ಟೆಂಬರ್.16:ಗ್ರಾಮೀಣ ಪ್ರದೇಶಗಳಲ್ಲಿರುವ ಕ್ರೀಡಾಪಟುಗಳಿಗೆ ಉತ್ತಮ ಪ್ರೋತ್ಸಾಹ ನೀಡುವ ಮೂಲಕ ಭಾರತ ದೇಶ ಕ್ರೀಡಾ ರಂಗದಲ್ಲಿ ಹೆಚ್ಚು ಸಾಧನೆ ತೋರುವಂತೆ ಹಾಗೂ ಪದಕಗಳನ್ನು ಗಳಿಸುವಂತೆ ಮಾಡಬೇಕಾದ ಕೆಲಸ ಸರ್ಕಾರ ಹಾಗೂ ಸಂಘ ಸಂಸ್ಥೆಗಳದ್ದು ಎಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಈಶ್ವರ ಕಟೀಲ್ ಅವರು ತಿಳಿಸಿದ್ದಾರೆ.
ಅವರು ಇಂದು ಜಿಲ್ಲಾ ಡಳಿತ,ಜಿಲ್ಲಾ ಪಂಚಾ ಯತ್,ಭಾರ ತೀಯ ಕ್ರೀಡಾ ಪ್ರಾಧಿಕಾರ ಹಾಗೂ ಪಂಚಾಯತ್ ಯುವ ಖೇಲ್ ಔರ್ ಕ್ರೀಡಾ ಅಭಿಯಾನ(ಪೈಕಾ) ಇವರ ಸಂಯುಕ್ತಾಶ್ರಯದಲ್ಲಿ ಮಂಗಳಾ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ದಸರಾ/ಮಹಿಳಾ ಮತ್ತು ಪೈಕಾ ಗ್ರಾಮೀಣ ಕ್ರೀಡಾಕೂಟ 2011-12 ನ್ನು ಉದ್ಘಾಟಿಸಿ ಮಾತನಾಡಿದರು.
ಮಂಗಳಾ ಕ್ರೀಡಾಂಗಣವನ್ನು ಸುಸಜ್ಜಿತಗೊಳಿಸಲು ಅನುದಾನ ನೀಡುವಂತೆ ಮಾನ್ಯ ಮುಖ್ಯ ಮಂತ್ರಿಗಳನ್ನು ಕೋರಿದ್ದು,ಅವರು ಎಲ್ಲಾ ಅಗತ್ಯ ನೆರವು ನೀಡುವ ಭರವಸೆ ನೀಡಿದ್ದಾರೆಂದು ಈಶ್ವರ ಕಟೀಲ್ ತಿಳಿಸಿದರು.

ಮುಖ್ಯ ಅತಿಥಿ ಗಳಾಗಿ ಆಗ ಮಿಸಿದ್ದ ಜಿಲ್ಲಾ ಪಂಚಾ ಯತ್ ಮುಖ್ಯ ಕಾರ್ಯ ನಿರ್ವ ಹಣಾ ಧಿಕಾರಿ ಡಾ.ವಿಜಯ ಪ್ರಕಾಶ್ ಅವರು ಮಾತ ನಾಡಿ ಗ್ರಾಮೀಣ ಕ್ರೀಡಾ ಪಟು ಗಳನ್ನು ಉತ್ತೇ ಜಿಸುವ ಮೂಲಕ ಅವರು ಕ್ರೀಡಾ ಸಾಮರ್ಥ್ಯ ಇಮ್ಮಡಿ ಗೊಳಿಸಿ ಅವರು ರಾ ಷ್ಟ್ರೀಯ ಅಂತರ್ ರಾ ಷ್ಟ್ರೀಯ ಕ್ರೀಡಾ ಪಟು ಗಳಾಗಿ ಹೊರ ಹೊಮ್ಮಲು ಸಮಗ್ರ ವ್ಯವಸ್ಥೆ ಕಲ್ಪಿಸುವ ಹೊಣೆ ಸಮಾ ಜದ್ದು ಎಂದರು.ಕೇವಲ ದಸರಾ ಕ್ರೀಡಾ ಕೂಟಕ್ಕೆ ಮಾತ್ರ ಗ್ರಾಮೀಣ ಕ್ರೀಡಾ ಪಟು ಗಳನ್ನು ಹುರಿ ದುಂಬಿ ಸದೆ ಎಲ್ಲಾ ರೀತಿ ಯಿಂದಲೂ ನಿರಂತರ ಪ್ರೋತ್ಸಾಹ ಅವರಿಗೆ ದೊರಕು ವಂತಾ ಗಬೇ ಕೆಂದರು.
ಸಮಾ ರಂಭದ ಅಧ್ಯ ಕ್ಷತೆ ಯನ್ನು ಜಿಲ್ಲಾ ಪಂಚಾ ಯತ್ ಸದಸ್ಯರಾದ ಜನಾರ್ಧನ ಗೌಡ ವಹಿಸಿದ್ದರು.
ಜಿಲ್ಲಾ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರಾದ ಪಾಶ್ರ್ವನಾಥ ಅವರು ಸ್ವಾಗತಿಸಿದರು. ರಾಷ್ಟ್ರೀಯ ಕ್ರೀಡಾಪಟು ಶ್ರೀಮತಿ ಸೀಮಾ ಪ್ರಿಯದರ್ಶಿನಿ ಅವರು ಕ್ರೀಡಾ ಪ್ರತಿಜ್ಞೆ ಬೋಧಿಸಿದರು. ಇಲಾಖೆಯ ಪಾಂಡುರಂಗ ಗೌಡ ವಂದಿಸಿದರು.