Friday, January 18, 2013

ವಿಶ್ವವಿದ್ಯಾನಿಲಯ ಕಾಲೇಜಿಗೆ ರೂ.38 ಲಕ್ಷದಲ್ಲಿ ಮಹಿಳಾ ವಿಶ್ರಾಂತಿ ಕೊಠಡಿ- ಟಿ.ಸಿ.ಶಿವಶಂಕರಮೂರ್ತಿ

ಮಂಗಳೂರು, ಜನವರಿ.18:-ವಿದ್ಯಾರ್ಥಿಗಳು ಅಧ್ಯಾಪಕರಿಗೆ ಶಿಸ್ತು ಸಂಯಮ ಅಗತ್ಯ,ಹಾಗೇ ಅವರಿಗೆ ಎಲ್ಲಾ ರೀತಿಯ ಪಾಠೋಪಕರಣ,ಪೀಠೋಪಕರಣ ಕೊಠಡಿಗಳು ಸೇರಿ ದಂತೆ ಮೂಲಭೂತ ಸೌಲಭ್ಯಗಳು ಆವಶ್ಯಕತೆ ಇದ್ದು ಮಂಗಳೂರು ವಿಶ್ವವಿದ್ಯಾಲಯದ ಕಾಲೇಜಿನಲ್ಲಿ ಇಂತಹ ಮೂಲ ಸೌಲಭ್ಯಗಳನ್ನು ಒದಗಿಸುತ್ತಿದ್ದು ಮಂಗಳೂರು ವಿ.ವಿ.ಕಾಲೇಜಿನಲ್ಲಿ ರೂ.38 ಲಕ್ಷ ವೆಚ್ಚದಲ್ಲಿ ಮಹಿಳೆಯರ ವಿಶ್ರಾಂತಿ ಕೊಠಡಿ ನಿರ್ಮಿಸಲಾಗುವುದೆಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ.ಟಿ.ಸಿ.ಶಿವಶಂಕರಮೂರ್ತಿ ತಿಳಿಸಿದರು.
           ಅವರು ಇಂದು ವಿಶ್ವ ವಿದ್ಯಾ ನಿಲಯ ಕಾಲೇ ಜಿನಲ್ಲಿ ಬಿಬಿಎಂ ಬ್ಲಾಕ್ ನ ನೂತನ ಕಟ್ಟಡ ಉದ್ಘಾ ಟಿಸಿ ಮಾತ ನಾಡಿದರು. ಗುಣ ಮಟ್ಟದ ಶಿಕ್ಷಣ ಕೊರತೆ ಯಿಂದಾಗಿ ಪ್ರತೀ ವರ್ಷ ಪದವಿ ಆಗುವ ವರಲ್ಲಿ ಶೇಕಡಾ 2 ಮಾತ್ರ ಉದ್ಯೋಗಿ ಗಳಾಗು ತ್ತಾರೆ ಎಂದರು. ರೂ.80 ಲಕ್ಷ ಸಾರ್ವಜನಿಕ ದೇಣಿಗೆಯಿಂದ 8 ಕೊಠಡಿಗಳು ನಿರ್ಮಾಣವಾಗುತ್ತಿದೆ. ವಿಶ್ವ ವಿದ್ಯಾ ನಿಲ ಯದ ವತಿ ಯಿಂದ  ರೂ.1.70 ಕೋಟಿ ವೆಚ್ಚದ ಕಾಮ ಗಾರಿ ಗಳು ಪ್ರಗತಿ ಯಲ್ಲಿವೆ.ಈ ಕಾಲೇಜಿ ನಲ್ಲಿ ಈಗಿರುವ ಸ್ನಾತ ಕೋತ್ತರ ವಿಭಾಗ ಗಳ ಜೊತೆಗೆ  ಇನ್ನೂ ಹೆಚ್ಚಿನ ವಿಷಯ ಗಳಲ್ಲಿ ಸ್ನಾತ ಕೋತ್ತರ ವಿಭಾಗ ಆರಂಭಿ ಸಲಾ ಗುವು ದೆಂದರು.
ಒಟ್ಟಾರೆ 2013 ರ ಜೂನ್ ವೇಳೆಗೆ ಕಾಲೇಜು ಸಂಪೂರ್ಣ ಅಭಿ ವೃದ್ಧಿ ಹೊಂದಿ ಒಂದು  ಹೊಸ ರೀತಿಯಲ್ಲಿ ಕಂಗೊಳಿಸಲಿದೆ ಎಂದರು.ಪ್ರೊ.ಚಿನ್ನಪ್ಪ ಗೌಡ.ಶಿವಶಂಕರಸ್ವಾಮಿ ಉಪಸ್ಥಿತರಿದ್ದರು.ಕಾಲೇಜಿನ ಪ್ರಾಂಶುಪಾಲರಾದ ಲಕ್ಷ್ಮೀನಾರಾಯಣ ಭಟ್  ಎಲ್ಲರನ್ನು ಸ್ವಾಗತಿಸಿದರು.