Friday, January 11, 2013

ಎಲ್ಲಾ ಇಲಾಖೆಗಳ ಭೌತಿಕ ಆರ್ಥಿಕ ವರದಿ ಕಡ್ಡಾಯ: ಕೊರಗಪ್ಪ ನಾಯ್ಕ್

ಮಂಗಳೂರು, ಜನವರಿ 11: ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಕಾರ್ಯಾಚರಿಸುತ್ತಿರುವ  ವಿವಿಧ ಇಲಾಖೆಗಳಲ್ಲಿ ಅನುಷ್ಠಾನವಾಗುತ್ತಿರುವ ವಿವಿಧ ಜನಪರ ಕಾರ್ಯಕ್ರಮಗಳ ಭೌತಕ ಮತ್ತು ಆರ್ಥಿಕ ಪ್ರಗತಿ ವರದಿಗಳನ್ನು ತಪ್ಪದೆ 2013 ರ ಫೆಬ್ರವರಿ ಮಾಹೆಯ ಕೆಡಿಪಿ ಸಭೆಗೆ ಹಾಜರು ಪಡಿಸಬೇಕು.ತಪ್ಪಿದಲ್ಲಿ ಅಂತಹವರ ವಿರುದ್ಧ ಕ್ರಮ ಜರುಗಿಸುವುದಾಗಿ ದ.ಕ.ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಕೊರಗಪ್ಪ ನಾಯ್ಕ ಎಚ್ಚರಿಕೆ ನೀಡಿದ್ದಾರೆ.ಅವರು ಇಂದು ಜಿಲ್ಲಾ ಪಂಚಾಯತ್ ನೇತ್ರಾವತಿ ಸಭಾಂಗಣದಲ್ಲಿ ನಡೆದ ಕೆಡಿಪಿ ಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
               ಬೇಸಿಗೆ ಸಮೀಪು ಸುತ್ತಿ ದ್ದಂತೆ ಗ್ರಾಮಾಂ ತರ ಪ್ರದೇಶ ಗಳಲ್ಲಿ ಕುಡಿ ಯುವ ನೀರಿಗೆ ಸಮಸ್ಯೆ ತಲೆ ದೋರ ದಂತೆ ಎಲ್ಲಾ ವ್ಯವಸ್ಥೆ ಗಳನ್ನು ಮಾಡು ವಂತೆ ಹಾಗೂ ಒಂದು ಬೋರ್ ವೆಲ್ ಕೊಳವೆಗಳ ಸಂಪರ್ಕವನ್ನು ಮತ್ತೊಂದು ಬೋರ್ ವೆಲ್ ಸಂಪರ್ಕಗಳಿಗೆ ಹೊಂದಿಸಿದ್ದರೆ ಒಂದು ಕೆಟ್ಟರೂ ಮತ್ತೊಂದರಲ್ಲಿ ನೀರು ಸರಬರಾಜಿಗೆ ಅಬಾಧಿತವಾಗಿರುತ್ತದೆಎಂದು ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ತಿಳಿಸಿದ್ದಾರೆ. ಎಲ್ಲಾ ತಾಲೂಕುಗಳಲ್ಲಿ ಕುಡಿಯುವ ನೀರಿನ ಬಗ್ಗೆ ತಿಳಿಯಲುಯ ಹೆಲ್ಪ್ ಲೈನ್ ಆರಂಭಿಸಲು ಅವರು ತಿಳಿಸಿದರು.
ಪಶು ಸಂಗೋ ಪನೆ,ತೋಟ ಗಾರಿಕೆ,ಕೃಷಿ ಇಲಾಖೆ ಗಳು ತಮಗೆ ನಿಗಧಿ ಪಡಿ ಸಿರುವ ಗುರಿ ಯನ್ನು ಕಾಲ ಮಿತಿ ಯೊಳಗೆ ಪೂರೈಸು ವಂತೆ  ಅವರು ಸೂಚಿಸಿ ದರು. ಶಾಲಾ ಕಾಲೇಜು    ಮಕ್ಕಳಿಗೆ ಸಾರ್ವಜನಿಕರಿಗೆ ತೊಂದರೆ ಆಗದಂತೆ ಎಲ್ಲಾ ಮಾರ್ಗಗಳಲ್ಲಿ ಕೆಎಸ್ ಆರ್ ಟಿಸಿ ಬಸ್ಸುಗಳನ್ನು ಓಡಿಸುವಂತೆ ಅಧ್ಯಕ್ಷರು ಕೆಎಸ್ ಆರ್ ಟಿಸಿ ಅಧಿಕಾರಿಗಳಿಗೆ ಸೂಚಿಸಿದರು.
ಇಂದಿನ ಸಭೆಯಲ್ಲಿ ಉಪಾಧ್ಯಕ್ಷರಾದ ರಿತೇಶ್ ಶೆಟ್ಟಿ ಸ್ಥಾಯಿ ಸಮಿತಿಗಳ ಅಧ್ಯಕ್ಷರು ಉಪಸ್ಥಿತರಿದ್ದರು.