Thursday, January 24, 2013

ಬಾಲಕಾರ್ಮಿಕ ಕಾಯಿದೆ-ಕಾರ್ಯಾಗಾರ


ಮಂಗಳೂರು, ಜನವರಿ. 24 :-14 ವರ್ಷದ ಒಳಗಿನ ಮಕ್ಕಳನ್ನು ಅಪಾಯಕಾರಿ ಮತ್ತು ಇತರೆ ಸಂಸ್ಥೆಗಳಲ್ಲಿ ದುಡಿಸುವುದು ಶಿಕ್ಷಾರ್ಹ ಅಪರಾಧವಾಗಿದ್ದು ,ಕಾನೂನಿನ ಪ್ರಕಾರ ಅಪರಾಧಿಗಳಿಗೆ ರೂ.20,000/-ದಂಡ ಮತ್ತು ಮೂರು ತಿಂಗಳ ಜೈಲು ಶಿಕ್ಷೆಯನ್ನು ನೀಡಬಹುದಾಗಿದೆಯೆಂದು ಮಂಗಳೂರು ವಿಭಾಗದ ಸಹಾಯಕ ಕಾರ್ಮಿಕ ಆಯುಕ್ತರಾದ  ಡಿ.ಜಿ.ನಾಗೇಶ್ ತಿಳಿಸಿದರು.
 ಅವರು ಇತ್ತೀಚೆಗೆ ಮಂಗಳೂರು ತಾಲೂಕು ಪಂಚಾಯತ್ ಸಭಾಂಗಣದಲ್ಲಿ  ಕಾರ್ಮಿಕ ಇಲಾಖೆ,ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸಂಘ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯವರ ಸಹಯೋಗದಲ್ಲಿ ಏರ್ಪಡಿಸಿದ  ಕಾರ್ಯಾಗರದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡುತ್ತಿದ್ದರು.
ಪತ್ತೆ ಹಚ್ಚಲಾದ ಬಾಲಕಾರ್ಮಿಕರನ್ನು ಮಂಗಳಾ ಸೇವಾ ಸಮಿತಿ ಟ್ರಸ್ಟ್ ಮಂಗಳೂರಿನ ಕುತ್ತಾರ್ಪದವುನಲ್ಲಿ ಆರಂಭಿಸಲಾದ ವಿಶೇಷ ವಸತಿ ಶಾಲೆಯಲ್ಲಿ   ಎಲ್ಲಾ ವ್ಯವಸ್ಥೆಯನ್ನು ಮಾಡಲಾಗುವುದೆಂದು ಅವರು ತಿಳಿಸಿದರು.
ಮಕ್ಕಳ ರಕ್ಷಣಾ ಘಟಕ ಇದರ ಮಕ್ಕಳ ಕಲ್ಯಾಣ ಅಧಿಕಾರಿ ಶ್ರೀಮತಿ ಗ್ರೇಸಿ ಗೊನ್ಸಾಲೀಸ್ ಬಾಲ ನ್ಯಾಯ ಕಾಯ್ದೆಯ ಬಗ್ಗೆ ಮಾತನಾಡುತ್ತಾ 18 ವರ್ಷದೊಳಗಿನ ಮಕ್ಕಳು ಬಾಲಾಪರಾಧಿಗಳು ಅಂತಹ ಸಂಕಷ್ಟದಲ್ಲಿರುವ ಮಕ್ಕಳಿಗೆ ಬಾಲ ನ್ಯಾಯ ಕಾಯ್ದೆಯ ಮೂಲಕ ರಕ್ಷಣೆ ನೀಡಲಾಗುವುದೆಂದು ತಿಳಿಸಿದರು. ವೇದಿಕೆಯಲ್ಲಿ ಶಿಶು ಯೋಜನಾಧಿಕಾರಿ ಶ್ಯಾಮಲ,ಕಾರ್ಮಿಕ ಅಧಿಕಾರಿಗಳಾದ ಎಂ.ಆನಂದಮೂರ್ತಿ, ಮಹೇಶ್ ಇವರು ಉಪಸ್ಥಿತರಿದ್ದರು. ಬೆಳ್ತಂಗಡಿ ವೃತ್ತದ ಕಾರ್ಮಿಕ ನಿರೀಕ್ಷಕರಾದ ಎನ್.ಎಸ್.ರಾಮಮೂರ್ತಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.