Thursday, January 17, 2013

ಯುವಶಕ್ತಿಯನ್ನು ಅರಿತು ಯುವನೀತಿ ಜಾರಿ: ಶಾಲಿನಿ ರಜನೀಶ್

ಮಂಗಳೂರು, ಜನವರಿ.16:- ಯುವಶಕ್ತಿಯ ಮೇಲೆ ಅಪರಿಮಿತ ನಂಬಿಕೆ ಇರಿಸಿರುವ ಯುವರಾಷ್ಟ್ರ ಭಾರತ. ಅದರಲ್ಲೂ ಕರ್ನಾಟಕ ಸರ್ಕಾರ ಯುವಶಕ್ತಿಯನ್ನು ಗುರುತಿಸಿ, ಗೌರವಿಸಿ ಯುವನೀತಿಯನ್ನೇ ರೂಪಿಸಿದೆ ಎಂದು ರಾಜ್ಯ ಸರಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಶಾಲಿನಿ ರಜನೀಶ್ ಹೇಳಿದರು.
ನಗರದ ರಾಮಕೃಷ್ಣ ಆಶ್ರಮ ಮತ್ತು ಆಕಾಶವಾಣಿ ಮಂಗಳೂರು ವತಿಯಿಂದ ವಿವೇಕಾನಂದರ 150ನೆ ಜನ್ಮ ದಿನಾಚರಣೆ ಪ್ರಯುಕ್ತ ಆಯೋಜಿಸಲಾದ ವಿವೇಕ ಸಂಸ್ಮೃತಿ - ಸಪ್ತಾಹದಲ್ಲಿ ಬುಧವಾರ ನಡೆದ `ವಿವೇಕ ಸ್ಫೂರ್ತಿ- ಯುವ ಶಕ್ತಿ' ರಾಜ್ಯ ಮಟ್ಟದ ಯುವ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ನೀತಿ ರೂಪಿಸು ವಷ್ಟೇ ಕಾಳಜಿ ಯಿಂದ ಅನು ಷ್ಠಾನವೂ ಆಗ ಬೇಕಿದೆ; ಜಾಗೃತ ಸಮುದಾ ಯದಿಂದ ಮಾತ್ರ ನೀತಿ ನಿರೂ ಪಣೆಯ ಸಮಗ್ರ ಅನು ಷ್ಠಾನ ಸಾಧ್ಯ ಎಂದ ಅವರು ರಾಷ್ಟ್ರಾ ಭಿವೃದ್ಧಿ ಯಲ್ಲಿ ಪಾಲ್ಗೊ ಳ್ಳುವಿಕೆ ಮುಖ್ಯ ಎಂದರು. ನಮ್ಮ ಸಂಸ್ಕೃತಿ, ಇತಿಹಾಸದ ಬಗ್ಗೆ ನಾವು ಗೌರವ ಹೊಂದಿದ್ದಲ್ಲಿ ಮಾತ್ರವೇ ನಾವು ಮುಂದೆ ಹೋಗಲು ಸಾಧ್ಯ. ಭಾರತ ಸರಕಾರ 1985ರಿಂದ ಪ್ರತೀ ವರ್ಷ ವಿವೇಕಾನಂದರ ಜನ್ಮದಿನ ಜನವರಿ 12ನ್ನು ಯುವ ದಿನವೆಂದು ಆಚರಿಸುತ್ತಿದೆ. ಯುವಶಕ್ತಿಯನ್ನು ಉತ್ತಮ ದಾರಿಯಲ್ಲಿ ಕೊಂಡೊಯ್ಯುವಲ್ಲಿ ಮಾಧ್ಯಮದ ಪಾತ್ರ ಹಾಗೂ ಜವಾಬ್ಧಾರಿಯೂ ಅತೀ ಪ್ರಮುಖ ಎಂದು ಹೇಳಿದ ಅವರು, ಸಮಾಜಪರವಾಗಿ ಯುವಶಕ್ತಿ ನಾಯಕತ್ವ ನೀಡುವಂತಾಗಬೇಕು. ಅತ್ಯಾಚಾರ, ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಬೇಕು ಎಂದು ಹೇಳಿದ ಅವರು, ದಿಲ್ಲಿಯಲ್ಲಿ ಯುವತಿಯ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಯುವಜನತೆ ಸ್ಪಂದಿಸಿದ ರೀತಿಯನ್ನು ಅವರು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳಿಗೆ ವಿವೇಕಾನಂದರ 10 ಘೋಷ ವಾಕ್ಯಗಳನ್ನು ಬೋಧಿಸಿದರು. ಉತ್ತಮ ಕಾರ್ಯಗಳಿಗೆ ಅಡಚಣೆಗಳು ಹಲವು; ಸಾಧಕರು ಈ ಸಂದರ್ಭದಲ್ಲಿ ಸಾಧನೆಯಿಂದ ವಿಮುಖರಾಗದೆ ಗುರಿಯನ್ನು ಮುಖ್ಯವಾಗಿಸಿ ಮುನ್ನುಗ್ಗಬೇಕೆಂದರು. ಅತ್ಯಂತ ಸಾಮಾನ್ಯರು ಸಾಧಿಸಬಹುದು; ಗುರುತಿಸಲ್ಪಡಬಹುದೆಂಬುದಕ್ಕೆ ಮುಂಬಯಿಯ ಡಬ್ಬಾವಾಲ್ ಗಳು ಸಾಕ್ಷಿ ಎಂದರು. ಗುರುಗಳು ವಿದ್ಯಾರ್ಥಿಗಳ ಚಾರಿತ್ರ್ಯ ನಿರ್ಮಾಣಕ್ಕೆ ಹೆಚ್ಚಿನ ಒತ್ತು ನೀಡುವುದರಿಂದ ಬಲಿಷ್ಟ ಯುವ ಭಾರತ್ ನಿರ್ಮಾಣ ಸಾಧ್ಯ ಎಂದರು.
ರಾಮ ಕೃಷ್ಣ ಮಠದ ಜಿತ ಕಾಮಾ ನಂದಜೀ ಮಹಾ ರಾಜ್ ಅಧ್ಯಕ್ಷರು ದಿಕ್ಸೂಚಿ ಭಾಷಣ ದಲ್ಲಿ ತ್ಯಾಗ ಮತ್ತು ಸೇವೆ ಎಲ್ಲ ಮಹ ತ್ಕಾರ್ಯ ಗಳಿಗೆ ಕೇಂದ್ರ ಬಿಂದು. ವಿವೇಕ ಸ್ಫೂರ್ತಿ ಎಲ್ಲೆಡೆ ಹಬ್ಬಿ ಯುವ ಕರ ಬಾಳು ಬೆಳಗಲಿ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಕಾಶವಾಣಿ ಕಾರ್ಯಕ್ರಮ ಮುಖ್ಯಸ್ಥ ಡಾ. ವಸಂತ ಕುಮಾರ್ ಪೆರ್ಲ ವಹಿಸಿದ್ದರು.  ಮುಖ್ಯ ಅತಿಥಿಗಳಾಗಿ ಮನಸ್ ತರಬೇತಿ ಕೇಂದ್ರ ಬೆಂಗಳೂರಿನ ಪ್ರೊ. ಕೆ. ರಘೋತ್ತಮ ರಾವ್, ರಾಮಕೃಷ್ಣ ವಿವೇಕಾನಂದ ಆಶ್ರಮ ರಾಣಿ ಬೆನ್ನೂರಿನ ಅಧ್ಯಕ್ಷ ಪ್ರಕಾಶಾನಂದಜಿ, ಆಕಾಶವಾಣಿ ಉಪ ನಿರ್ದೇಶಕ (ತಾಂತ್ರಿಕ) ಜಿ. ರಮೇಶ್ಚಂದ್ರನ್ ಪಾಲ್ಗೊಂಡರು.
ತಲಪಾಡಿಯ ಶಾರದಾ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಆಕಾಶವಾಣಿ ಕಾರ್ಯಕ್ರಮ ನಿರ್ವಾಹಕ ಸದಾನಂದ ಹೊಳ್ಳ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.  ಆಕಾಶವಾಣಿ ಹಿರಿಯ ಉದ್ಘೋಷಕ ಮುದ್ದು ಮೂಡುಬೆಳ್ಳೆ ಕಾರ್ಯಕ್ರಮ ನಿರೂಪಿಸಿದರು. ಪ್ರಸಾರ ನಿರ್ವಾಹಕ ಕೆ. ಅಶೋಕ ವಂದಿಸಿದರು.