Friday, January 25, 2013

ನೆಹರೂ ಮೈದಾನ- ವಾಹನಗಳ ಸಂಚಾರದಲ್ಲಿ ಬದಲಾವಣೆ

ಮಂಗಳೂರು, ಜನವರಿ. 25: ದಿನಾಂಕ 26-1-13 ರಂದು(ನಾಳೆ) ಮಂಗಳೂರು ನಗರದ ನೆಹರೂ ಮೈದಾನದಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ದಿನಾಚರಣೆಯ ಸಂದರ್ಭದಲ್ಲಿ ಸಾರ್ವಜನಿಕ ಹಿತದೃಷ್ಠಿಯಿಂದ ವಾಹನಗಳ ಸುಗಮ ಸಂಚಾರಕ್ಕೆ  ರಸ್ತೆಯಲ್ಲಿ  ವಾಹನ ಸಂಚಾರದಲ್ಲಿ ತಾತ್ಕಾಲಿಕವಾಗಿ ಮಾರ್ಪಾಡು ಮಾಡಿ ಮಂಗಳೂರು ನಗರದ ಪೋಲೀಸ್ ಆಯುಕ್ತರು ಹಾಗೂ ಅಡಿಷನಲ್ ಡಿಸ್ಟ್ರಿಕ್ಟ್ ಮ್ಯಾಜಿಸ್ಟ್ರೇಟ್ ಆಗಿರುವ  ಮನೀಷ್ ಖರ್ಬೀಕರ್ ನಿಯಮದಂತೆ 26-1-13 ರಂದು ಬೆಳಿಗ್ಗೆ 6.30 ಗಂಟೆಯಿಂದ ಕಾರ್ಯಕ್ರಮ ಮುಗಿಯುವವರೆಗೆ ಸಂಚಾರದಲ್ಲಿ ತಾತ್ಕಾಲಿಕ ಮಾರ್ಪಾಡು ಮಾಡಿ ಬದಲಿ ವ್ಯವಸ್ಥೆಗೆ ಆದೇಶಿಸಿರುತ್ತಾರೆ.
      ಎ.ಬಿ.ಶೆಟ್ಟಿ ವೃತ್ತದಿಂದ  ಹ್ಯಾಮಿಲ್ಟನ್ ವೃತ್ತದ ವರೆಗೆ ಹಾಗೂ ವಿರುದ್ಧ ದಿಕ್ಕಿನಲ್ಲಿ ಕಾರ್ಯಕ್ರಮಕ್ಕೆ ಸಂಬಂಧಿಸಿದ ವಿಐಪಿ ವಾಹನಗಳು ಹಾಗೂ ಇಲಾಖಾ ವಾಹನ ಹೊರತು ಪಡಿಸಿ,ಇತರ ವಾಹನಗಳ ಪ್ರವೇಶ ಯಾ ಪಾರ್ಕಿಂಗ್  ಸಂಪೂರ್ಣ ನಿಷೇಧಿಸಲಾಗಿದೆ. ಎ.ಬಿ.ಶೆಟ್ಟಿ ವೃತ್ತದಿಂದ ಫುಟ್ಬಾಲ್ ಮೈದಾನದ ತನಕ ಯು.ಪಿ. ಮಲ್ಯ ರಸ್ತೆಯಲ್ಲಿ ಮೈದಾನದ ಬದಿ ಎಲ್ಲಾ ತೆರನಾದ ವಾಹನಗಳ ನಿಲುಗಡೆಯನ್ನು ನಿಷೇಧಿಸಲಾಗಿದೆ.
          ಪಾರ್ಕಿಂಗ್ ವ್ಯವಸ್ಥೆಗೆ ಸಂಬಂಧಿಸಿದಂತೆ  ಸಾರ್ವಜನಿಕರು ತಮ್ಮ ವಾಹನಗಳನ್ನು ಕ್ರಮವಾಗಿ ಗೇಟ್ವೇ ಹೋಟೇಲ್ ರಸ್ತೆಯ ಎಡ ಭಾಗ ,ಪಾಂಡೇಶ್ವರ ರಸ್ತೆಯ ಒಂದು ಬದಿ,ಅಂಚೆ ಕಚೇರಿ ರಸ್ತೆಯ ಒಂದು ಬದಿಯಲ್ಲಿ ಪಾರ್ಕ್  ಮಾಡುವುದು.ಶಾಲಾ ವಿದ್ಯಾರ್ಥಿಗಳನ್ನು ಕರೆದೊಯ್ಯುವ ಎಲ್ಲಾ ವಾಹನಗಳನ್ನು ರೊಜಾರಿಯೋ ರಸ್ತೆಯ ಎಡಭಾಗದಲ್ಲಿ ನಿಲುಗಡೆ ಮಾಡುವುದು.
     ಎ.ಬಿ.ಶೆಟ್ಟಿ ವೃತ್ತದಿಂದ ಹ್ಯಾಮಿಲ್ಟನ್ ವೃತ್ತದ ವರೆಗೆ ಹೋಗುವ ವಾಹನಗಳು ನೆಹರೂ ವೃತ್ತ ರೊಸಾರಿಯೋ ಆಗಿ ಸಂಚರಿಸುವುದು. ಅದೇ ರೀತಿ ಹ್ಯಾಮಿಲ್ಟನ್ ವೃತ್ತದಿಂದ ಎ.ಬಿ.ಶೆಟ್ಟಿ ವೃತ್ತದ ಕಡೆಗೆ ಸಂಚರಿಸುವ ವಾಹನಗಳು ರೊಸಾರಿಯೋ ಆಗಿ ನೆಹರೂ ವೃತ್ತದ ಮೂಲಕ ಸಂಚರಿಸುವುದು.ಸಂಚಾರ ವ್ಯವಸ್ಥೆ ಬಗ್ಗೆ ಆವಶ್ಯವಿರುವ ಸೂಚನಾ ಫಲಕ ಮತ್ತು ಸಂಚಾರ ನಿಯಂತ್ರಣ ಸಿಬ್ಬಂದಿಗಳನ್ನು ನೇಮಕಗೊಳಿಸಲಾಗುವುದೆಂದು ಅವರು ತಿಳಿಸಿರುತ್ತಾರೆ.