Tuesday, January 22, 2013

ಗಣರಾಜ್ಯೋತ್ಸವದಂದು 5000 ಮಕ್ಕಳಿಂದ ರಾಷ್ಟ್ರೀಯ ಭಾವೈಕ್ಯತೆ ಬಿಂಬಿಸುವ ನೃತ್ಯ- ಗಾನ ವೈಭವ


ಮಂಗಳೂರು, ಜ.21: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2013 ಜನವರಿ 26ರ ಗಣರಾಜ್ಯೋತ್ಸವ ಅವಿಸ್ಮರಣೀಯವಾಗಲಿದೆ. ಅಂದು ಬೆಳಗ್ಗೆ 9.45ಕ್ಕೆ ನಗರದ 23 ಶಾಲೆಯ ಸುಮಾರು 5000 ಮಕ್ಕಳು ರಾಷ್ಟ್ರೀಯ ಭಾವೈಕ್ಯತೆಯನ್ನು ಪ್ರತಿಬಿಂಬಿಸುವ ನೃತ್ಯ ಗಾನ ಪ್ರದರ್ಶನವನ್ನು ನೀಡಲಿರುವರು.
  ಜಿಲ್ಲಾ ಡಳಿ ತದ ಮಾರ್ಗ ದರ್ಶ ನದಡಿ ಶಿಕ್ಷಣ ಇಲಾಖೆ ಯ ವಿದ್ಯಾಂಗ ಉಪ ನಿರ್ದೇ ಶಕರ ನೇತೃ ತ್ವದಲ್ಲಿ ಕ್ಷೇತ್ರ ಶಿಕ್ಷಣಾ ಧಿಕಾ ರಿಗಳ ಮುಂದಾ ಳತ್ವ ದಲ್ಲಿ ನಗ ರದ ಎಲ್ಲ ಶಾಲೆ ಯವರ ಸಹ ಕಾರ ದೊಂದಿಗೆ ರಾಷ್ಟ್ರ ಭಾಷೆ ಹಿಂದಿ ಹಾಗೂ ರಾಜ್ಯ ಭಾಷೆ ಕನ್ನಡ ಸೇರಿದಂತೆ ದಕ್ಷಿಣ ಭಾರತದ ಭಾಷೆಗಳನ್ನು ಒಳಗೊಂಡ ರಾಷ್ಟ್ರ ಭಾವೈಕ್ಯತೆಯನ್ನು ಸಾರುವ ಸಾಮೂಹಿಕ ಗಾಯನ ಹಾಗೂ ನೃತ್ಯ ವೈಭವವನ್ನು ನಮ್ಮ ಮಕ್ಕಳು ಪ್ರದರ್ಶಿಸಲಿದ್ದಾರೆ.
   ಏಕ ಕಾಲ ದಲ್ಲಿ ವಿವಿಧ ಶಾಲೆಗಳ ವಿದ್ಯಾ ರ್ಥಿಗಳು ಒಂದಾಗಿ  ರಾಷ್ಟ್ರೀ ಯ ಭಾವೈ ಕ್ಯವನ್ನು ಸಾರಲು ಮುಂದಾ ಗಿದ್ದಾರೆ. ಗಣ ರಾಜ್ಯೋ ತ್ಸವದ ದಿನ ದಂದು ನಗ ರದ ನೆಹರೂ ಮೈದಾನ ದಲ್ಲಿ ನಡೆ ಯಲಿ ರುವ  45 ನಿಮಿಷ ಗಳ ಈ ವಿಶೇಷ ಕಾರ್ಯ ಕ್ರಮ ದಲ್ಲಿ 10 ಶಾಲೆ ಗಳ ಸುಮಾರು 2500 ರಷ್ಟು ವಿದ್ಯಾ ರ್ಥಿಗಳು ವಿವಿಧ ಭಾಷೆ ಗಳ ಹಾಡುಗಳನ್ನು ಹಾಡಲಿದ್ದರೆ, ಅದೇ ಸಮಯದಲ್ಲಿ ಹಾಡಿಗೆ ತಕ್ಕಂತೆ ನಗರದ 13 ಶಾಲೆಗಳ ಅಂದಾಜು 2500 ಮಕ್ಕಳು ಹೆಜ್ಜೆ ಹಾಕಲಿದ್ದಾರೆ. ಈ ವಿಶೇಷ ಕಾರ್ಯಕ್ರಮಕ್ಕಾಗಿ ಕಳೆದ ಸುಮಾರು ಒಂದೂವರೆ ತಿಂಗಳಿನಿಂದೀಚೆಗೆ ಶಾಲೆಗಳಲ್ಲಿ ಶಿಕ್ಷಕರ ಮಾರ್ಗದರ್ಶನದಲ್ಲಿ ತಯಾರಿ ನಡೆಸಿರುವ ವಿದ್ಯಾರ್ಥಿಗಳು ನಿನ್ನೆ ಮತ್ತು ಇಂದು ನಗರದ ನೆಹರೂ ಮೈದಾನದಲ್ಲಿ ಪೂರ್ವ ಸಿದ್ಧತೆ ಆರಂಭಿಸಿದ್ದಾರೆ.
     ಮಕ್ಕಳಲ್ಲಿ ರಾಷ್ಟ್ರೀಯ ಭಾವೈಕ್ಯದ ಮಹತ್ವವನ್ನು ತಿಳಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಜಿಲ್ಲಾಡಳಿತ, ಪ್ರಾದೇಶಿಕ ಸಾರಿಗೆ ಇಲಾಖೆ ಹಾಗೂ ಶಿಕ್ಷಣ ಸಂಸ್ಥೆಗಳ ಸಹಕಾರದಲ್ಲಿ ಆಯೋಜಿಸಿದೆ ಎಂದು ದ.ಕ. ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ರಾದ ಮೋಸೆಸ್ ಜಯಶೇಖರ್ ತಿಳಿಸಿದ್ದಾರೆ.
ಸರಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ವಿಶೇಷ'' ಎಂದು ಅವರು ಹೇಳುತ್ತಾರೆ. ನಾನು ಕೊಳ್ಳೇಗಾಲದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿದ್ದಾಗ ಖ್ಯಾತ ಸಂಗೀತಗಾರ ಸಿ. ಅಶ್ವಥ್ ಅವರು ಈ ರೀತಿಯ ಸಂಗೀತ ಕಾರ್ಯಕ್ರಮ ನಡೆಸುತ್ತಿದ್ದರು. ಅವರ ಹಳೆಯ ಸಿಡಿಗಳನ್ನು ವೀಕ್ಷಿಸಿ, ಚಿತ್ರಿಸಿ ಇಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಕಾರ್ಯಕ್ರಮ ವಿಶೇಷವಾಗಿ ಮೂಡಿಬರುವ ನಿರೀಕ್ಷೆ ಇದೆ'' ಎನ್ನುತ್ತಾರೆ ಅವರು.
ಕಾರ್ಯಕ್ರಮವನ್ನು ಯಶಸ್ಸುಗೊಳಿಸಲು ಪಣತೊಟ್ಟಿರುವವರಲ್ಲಿ ಮಂಗಳೂರು (ನಗರ)ಉತ್ತರ ವಲಯ ಶಿಕ್ಷಣಾಧಿಕಾರಿ ವೈ. ಶಿವರಾಮಯ್ಯ, ಅಭಿಪ್ರಾಯ ವ್ಯಕ್ತಪಡಿಸುತ್ತಾ, ಒಂದೂವರೆ ತಿಂಗಳಿಂದ ಈ ಸಂಬಂಧ ಸಮಾನ ಮನಸ್ಕರು ಕಾರ್ಯತಂತ್ರ ರೂಪಿಸಿದ್ದು, ನಗರದ ಆಸುಪಾಸಿನ ಶಾಲೆಗಳನ್ನು ಈ ಕಾರ್ಯಕ್ರಮಕ್ಕೆ ಆಯ್ದುಕೊಳ್ಳಲಾಗಿದ್ದು, ಅವರಿಗೆ ವಿವಿಧ ಭಾಷೆಯ 10 ಹಾಡುಗಳನ್ನು ನೀಡಲಾಗಿದೆ. ಶಾಲಾ ಶಿಕ್ಷಕರ ಸಹಕಾರದಲ್ಲಿ ಈ ವಿಶೇಷ ಕಾರ್ಯಕ್ರಮ ನಡೆಯುತ್ತಿದೆ. ಈ ಕಾರ್ಯಕ್ರಮಕ್ಕೆ ಮಕ್ಕಳನ್ನು ಸಂಘಟಿಸುವ ಕೆಲಸ ತುಸು ಕಷ್ಟಮಯವಾಗಿದ್ದರೂ ಶಾಲೆಗಳ ಸಹಕಾರ, ಹಾಗೂ ವಿವಿಧ ಇಲಾಖೆಗಳ ಸಹಭಾಗಿತ್ವದಲ್ಲಿ ಸಿದ್ಧತೆ ನಡೆಯುತ್ತಿದೆ. ಹಾಡು ಹಾಗೂ ನೃತ್ಯಕ್ಕೆ ಅಂತಿಮ ರೂಪು ರೇಷೆ ನೀಡಿರುವವರು ಶಾಲಾ ಶಿಕ್ಷಕರು. ಸರಳವಾಗಿಯಾದರೂ ವಿಶೇಷವಾಗಿ ಗಣರಾಜ್ಯೋತ್ಸವ ಆಚರಿಸುವ ಮೂಲಕ ಮಕ್ಕಳನ್ನು ಆಕರ್ಷಿಸುವುದು ಹಾಗೂ ಗಣರಾಜ್ಯೋತ್ಸವದ ಮಹತ್ವವನ್ನು ಸಾರುವುದು ಕಾರ್ಯಕ್ರಮದ ಉದ್ದೇಶ'' ಎಂದು ಅಭಿಪ್ರಾಯಿಸಿದ್ದಾರೆ. ಮೈಸೂರು ಕೊಳ್ಳೇಗಾಲದಿಂದ ನಿವೃತ್ತ ದೈಹಿಕ ಶಿಕ್ಷಕ ಬಾಲಕೃಷ್ಣ 73ರ ಹರೆಯದವರು ಅವರು ಆಗಮಿಸಿದ್ದು ಯಾವುದೇ ಫಲಾಪೇಕ್ಷೆ ಇಲ್ಲದೆ ಈ ಕಾರ್ಯಕ್ರಮದಲ್ಲಿ ತಮ್ಮ ಅನುಭವ ಧಾರೆಯನ್ನು ಎರೆದಿದ್ದಾರೆ.ಇದು ವರೆಗೆ 70 ಸಾವಿರಕ್ಕೂ ಅಧಿಕ ಮಕ್ಕಳಿಗೆ ದೇಶಭಕ್ತಿ ಹಾಡುಗಳನ್ನು, ಮತ್ತು ನೃತ್ಯಗಳನ್ನು ಕಲಿಸುವ ಮೂಲಕ ಮಕ್ಕಳಲ್ಲಿ ದೇಶಭಕ್ತಿಯನ್ನು ಜಾಗೃತಿಸುವ ಪ್ರಯತ್ನವನ್ನು ಮಾಡಿದ್ದಾರೆ. ಇಂತಹ ಸಹೃದಯರಿಂದ ನಮ್ಮ ಇಲಾಖೆಯ ಕಾರ್ಯಕ್ರಮಗಳು ಯಶಸ್ವಿಯಾಗಲಿವೆ ಎಂದಿದ್ದಾರೆ.
``ಸಾರೇ ಜ ಹಾಂಸೇ ಅಚ್ಚಾ...., ಒಂದೇ ಒಂದೇ ನಾವೆ ಲ್ಲರೂ ಒಂದೇ..., ಪಾಪು ಲ್ಲಾರು, ಪಿಲ್ಲ ಲ್ಲಾರು... ಮೊದ ಲಾದ ವಿವಿಧ ಭಾಷೆ ಗಳ ದೇಶ ಭಕ್ತಿ ಹಾಡು ಗಳ ಜೊತೆಗೆ ಏಳು ನಿಮಿಷ ಗಳ ಅವಧಿ ಯಲ್ಲಿ ನಾಡ ಗೀತೆ ಯಾದ ಜೈ ಭಾರತ ಜನ ನಿಯ ತನು ಜಾತೆ ಕೂಡಾ ಈ ಕಾರ್ಯ ಕ್ರಮ ದಲ್ಲಿ ವೈ ವಿಧ್ಯಮ ಯವಾಗಿ ಮೂಡಿ ಬರ ಲಿದೆ'' ಎಂದು ಶಿವ ರಾಮಯ್ಯ ತಿಳಿಸಿದ್ದಾರೆ.
ನೆಹರೂ ಮೈದಾನ ಗಣರಾಜ್ಯೋತ್ಷವದಂದು ರಂಗು ರಂಗಾಗಿ ಕಾಣಲಿದೆ. ನಮ್ಮ ಮಕ್ಕಳ ಪ್ರತಿಭೆ ಮಿಂಚಲಿದೆ. ಶಿಕ್ಷಕರ ಶ್ರಮ ಅಭಿನಂದನೀಯ.