Tuesday, January 15, 2013

'ಮಾರ್ಚ್ ಅಂತ್ಯಕ್ಕೆ ಜಿಲ್ಲೆಗೊಂದು ಸುಸ್ಸಜ್ಜಿತ ಆಯುಷ್ ಆಸ್ಪತ್ರೆ'

ಮಂಗಳೂರು, ಜನವರಿ.15: ಪುರಾತನ ಭಾರತೀಯ ವೈದ್ಯಪದ್ಧತಿ ಇಂದಿಗೂ ಪ್ರಸ್ತುತವಾಗಿದ್ದು, ವೈಜ್ಞಾನಿಕ ಆವಿಷ್ಕಾರಗಳು ಹೆಚ್ಚುತ್ತಿರುವಂತೆ ಜನರಲ್ಲಿ ತಾಳ್ಮೆ ಕಡಿಮೆಯಾಗುತ್ತಿರುವುದರಿಂದ ಈ ವೈದ್ಯ ಪದ್ಧತಿಯ ಬಗ್ಗೆ ಆಸಕ್ತಿ ಕಡಿಮೆಯಾಗುತ್ತಿದೆ ಎಂದು ಶಿಕ್ಷಣ ಹಾಗೂ ಆರೋಗ್ಯ ಸ್ಥಾಯಿಸಮಿತಿ ಅಧ್ಯಕ್ಷರಾದ ಶ್ರೀಮತಿ ಆಶಾ ತಿಮ್ಮಪ್ಪಗೌಡ ಹೇಳಿದರು.
 ಅವರು ಇಂದು ಜಿಲ್ಲಾ ಪಂಚಾ ಯತ್ ಸಭಾಂ ಗಣ ದಲ್ಲಿ ಚಿಕಿತ್ಸಾ ಶಿಬಿರ ಉದ್ಘಾ ಟಿಸಿ ಮಾತ ನಾಡು ತ್ತಿದ್ದರು.ಸಾವ ಯವ ಕೃಷಿ ಮತ್ತು ಆಯು ರ್ವೇದ ಇಂದು ಮತ್ತೆ ಜನ ಪ್ರಿಯ ವಾಗು ತ್ತಿರುವುದಕ್ಕೆ ಅದರಲ್ಲಿರುವ ಜೀವದ್ರವ್ಯವೇ ಕಾರಣ ಎಂದು ಅವರು, ಯಾವುದೇ ಅಡ್ಡ ಪರಿಣಾಮವಿಲ್ಲದ ಗಿಡಮೂಲಿಕೆಗಳಿಂದ ನೀಡುವ ಈ ಔಷಧೀಯ ಪದ್ಧತಿ ಪರಿಣಾಮಕಾರಿ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಡಾ. ಕೆ. ಎನ್ ವಿಜಯಪ್ರಕಾಶ್ ಅವರು, ಆಯುಷ್ ವೈದ್ಯಪದ್ಧತಿಯನ್ನು ಜನಪ್ರಿಯ ಗೊಳಿಸಲು ಅಧಿಕಾರಿಗಳು ಮುಂದಾಗಬೇಕಿದ್ದು, ಅವರೇ ಮಾದರಿಯಾಗಬೇಕಿದೆ ಎಂದು ಸಲಹೆ ಮಾಡಿದರು. ಹ್ಯಾಟ್  ಹಿಲ್ ನಲ್ಲಿ ನಿರ್ಮಾಣ ಹಂತದಲ್ಲಿರುವ 25 ಹಾಸಿಗೆಗಳ ಜಿಲ್ಲಾ ಮಟ್ಟದ ಸುಸಜ್ಜಿತ ಆಯುಷ್ ಆಸ್ಪತ್ರೆ ಸಂಪೂರ್ಣ ವ್ಯವಸ್ಥೆಗಳೊಂದಿಗೆ ಮಾರ್ಚ್ ಅಂತ್ಯಕ್ಕೆ ಸಾರ್ವಜನಿಕರ ಸೇವೆಗೆ ಸಿದ್ಧಗೊಳ್ಳಲಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕೆ.ಎನ್. ವಿಜಯಪ್ರಕಾಶ್ ತಿಳಿಸಿದ್ದಾರೆ.
      ಈ ಆಸ್ಪತ್ರೆ ಯು 15 ಆಯು ರ್ವೇದಿಕ್ ಹಾಗೂ 10 ಹೋಮಿ ಯೋಪತಿ ವಿಭಾ ಗದ ಹಾಸಿಗೆ ಗಳನ್ನು ಹೊಂದ ಲಿದೆ ಎಂದರು. ಇದ ರೊಂದಿಗೆ ಜಿಲ್ಲೆಯ ಐದು ತಾಲೂಕು ಗಳ ಲ್ಲಿಯೂ ತಾಲೂಕು ಮಟ್ಟದ ಆಸ್ಪತ್ರೆ ಹಾಗೂ ಈ ಆಸ್ಪತ್ರೆ ಗಳಿಗೆ ನುರಿತ ವೈ ದ್ಯರು ಸೇರಿ ದಂತೆ 17 ಸಿಬ್ಬಂದಿ ಗಳ ಪ್ರಸ್ತಾ ವನೆ ಯನ್ನು ಕೂಡಾ ಸರ ಕಾರಕ್ಕೆ ಸಲ್ಲಿ ಸಲಾ ಗಿದೆ ಎಂದು ಅವರು ಈ ಸಂದರ್ಭ ತಿಳಿಸಿದರು.
ಪಾರಂಪರಿಕ ಚಿಕಿತ್ಸಾ ಪದ್ಧತಿಯನ್ನು ಪ್ರೋತ್ಸಾಹಿಸಿ, ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಪ್ರತಿ ತಾಲೂಕಿನಲ್ಲಿಯೂ ಗಿಡಮೂಲಿಕೆಗಳನ್ನೊಳಗೊಂಡ ಔಷಧೀಯ ವನವನ್ನು ಬೆಳೆಸಲು ಪ್ರತಿ ತಾಲೂಕಿನಲ್ಲಿಯೂ ತಲಾ ಒಂದು ಎಕರೆಯಂತೆ ಭೂಮಿಯನ್ನು ಆಯುಷ್ ವಿಭಾಗಕ್ಕೆ ಹಸ್ತಾಂತರಿಸುವಂತೆಯೂ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಆಯುಷ್ ಚಿಕಿತ್ಸಾ ಪದ್ಧತಿ ಕುರಿತಂತೆ ಪ್ರಾಥಮಿಕ ಶಾಲೆಗಳಲ್ಲಿ ಮಾಹಿತಿ ನೀಡುವ ಕಾರ್ಯಕ್ರಮಗಳನ್ನು ಕೂಡಾ ಹಮ್ಮಿಕೊಳ್ಳಲಾಗುತ್ತಿದೆ. ಈ ಮೂಲಕ ತುಳುನಾಡಿನ ಸಂಸ್ಕೃತಿಯಿಂದ ಕೂಡಿದ ಪರಿಣಾಮಕಾರಿ ವೈದ್ಯಪದ್ಧತಿಯನ್ನು ಪ್ರಚಾರ ಪಡಿಸುವ ಕೆಲಸವನ್ನು ನಡೆಸಲಾಗುತ್ತಿದೆ. ಈ ಜವಾಬ್ದಾರಿ ಜಿಲ್ಲಾ ಪಂಚಾಯತ್ ನ ಎಲ್ಲರ ಮೇಲಿದೆ ಎಂದವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ರಿತೇಶ್ ಶೆಟ್ಟಿ ಹಾಗೂ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕರ್ನಾಟಕ ಆಯುರ್ವೇದ ಕಾಲೇಜಿನ ಪ್ರಾಂಶುಪಾಲ ಮುರಳೀಧರ ಅತ್ತಾವರ ಅವರು ಆಯುರ್ವೇದ ಪದ್ಧತಿಯ ಮಹತ್ವದ ಬಗ್ಗೆ ಮಾತನಾಡಿದರು. 
ಕಾರ್ಯಕ್ರಮದಲ್ಲಿ ಜಿಲ್ಲಾಪಂಚಾಯತ್ ಸದಸ್ಯರಾದ ಯಶವಂತಿ ಆಳ್ವ, ಕುಮಾರಿ, ಉಪ ಕಾರ್ಯದರ್ಶಿ ಶಿವರಾಮೇ ಗೌಡ, ತಾಲೂಕು ಪಂಚಾಯತ್ ಸದಸ್ಯ ದಯಾನಂದ ಉಪಸ್ಥಿತರಿದ್ದರು.
ಆಯುಷ್ ಆಧಿಕಾರಿ ಡಾ ಸದಾಶಿವಾನಂದ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ದೇವದಾಸ್ ಸ್ವಾಗತಿಸಿದರು. ಡಾ. ಶ್ಯಾಮರಾವ್ ಕಾರ್ಯಕ್ರಮ ನಿರೂಪಿಸಿದರು.  ಸಹನಾ ರೈ ವಂದಿಸಿದರು.