Wednesday, December 21, 2011

ಯುವಜನೋತ್ಸವ ಪೂರ್ವಸಿದ್ಧತೆ ಕುಮಾರ್ ನಾಯಕ್ ರಿಂದ ಪರಿಶೀಲನೆ

ಮಂಗಳೂರು,ಡಿಸೆಂಬರ್.21:ಮಂಗಳೂರಿನಲ್ಲಿ ಜನವರಿ 12ರಿಂದ 16ರವರೆಗೆ ನಡೆಯಲಿರುವ 17 ನೇ ರಾಷ್ಟ್ರೀಯ ಯುವಜನೋತ್ಸವದ ಉದ್ಘಾಟನಾ ಮತ್ತು ಸಮಾರೋಪ ಸಮಾರಂಭದ ಉಸ್ತುವಾರಿ ವಹಿಸಿರುವ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ಕುಮಾರ್ ನಾಯಕ್ ಅವರು ಐದು ದಿನಗಳ ಸಂಭ್ರಮದ ನಿಮಿಷ ನಿಮಿಷದ ಕಾರ್ಯಕ್ರಮ ಪಟ್ಟಿಯನ್ನು ತಯಾರಿಸಲು ಸೂಚಿಸಿದರು.ಉದ್ಘಾ ಟನಾ ಸಮಾ ರಂಭವು ಉಳಿದ ದಿನ ಗಳಲ್ಲಿ ನಡೆ ಯುವ ಸಂಭ್ರ ಮದ ಮುಖ ವಾಣಿ ಯಾಗ ಲಿದ್ದು, ಅತ್ಯಂತ ಸು ವ್ಯವ ಸ್ಥಿತವೂ ಅರ್ಥ ಪೂರ್ಣವೂ ಆಗಿರ ಬೇಕೆಂಬ ಆಶಯ ವನ್ನು ಅವರು ವ್ಯಕ್ತ ಪಡಿಸಿದರು. ಇಂದು ಜಿಲ್ಲಾ ಧಿಕಾರಿಗಳ ಕಚೇರಿಯಲ್ಲಿ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಉದ್ಘಾಟನಾ ಸಮಾರಂಭ, ನೆಹರೂ ಮೈದಾನದಿಂದ ಮಂಗಳಾ ಕ್ರೀಡಾಂಗಣದವರೆಗೆ ನಡೆಯಲಿರುವ ಮೆರವಣಿಗೆ ಹಾಗೂ ಕಾರ್ಯಕ್ರಮಗಳ ಮಾಹಿತಿಯನ್ನು ಪಡೆದರಲ್ಲದೆ ಈ ಬಗ್ಗೆ ನೀಡಿದ ಸಲಹೆಗಳ ಅನುಷ್ಠಾನಕ್ಕೆ ಆದ್ಯತೆ ನೀಡಿ ಮುಂದಿನ ಸಭೆಯಲ್ಲಿ ಪ್ರಗತಿ ವರದಿ ಬೇಕೆಂದು ಎಲ್ಲ ಸಮಿತಿಗಳಿಗೆ ಸೂಚಿಸಿದರು.
ನಗರ ದಲ್ಲಿ ಕಾರ್ಯ ಕ್ರಮ ಗಳು ನಡೆ ಯಲಿ ರುವ ಸ್ಥಳ ಗಳನ್ನು ಭೇಟಿ ನೀಡಿ ಪರಿ ಶೀಲಿ ಸಿದ ಅವರು, ಆತಿಥೇ ಯಕ್ಕೆ ಹೆಸ ರಾಗಿ ರುವ ನಗರ ದಲ್ಲಿ ಅತಿಥಿ ಗಳ ತಂಗು ವಿಕೆ ಹಾಗೂ ಭೇಟಿ ಸ್ಮರಣೀ ಯವಾ ಗಿರಬೇ ಕೆಂದರು. ದೇಶದ ವಿವಿಧ ಮೂಲೆ ಗಳಿಂದ ಆಗಮಿ ಸುವ ಸ್ಪರ್ಧಾ ರ್ಥಿಗಳು ಹಾಗೂ ವೀಕ್ಷಕರು ಮತ್ತು ಗಣ್ಯರಿಗೆ ಯಾವುದೇ ತೊಂದರೆ ಯಾಗದ ರೀತಿ ಯಲ್ಲಿ ವ್ಯವಸ್ಥೆ ಗಳಿರ ಬೇಕು. ಆಹಾರ ಮತ್ತು ವಾಸ್ತವ್ಯಕ್ಕೆ, ಶುಚಿತ್ವಕ್ಕೆ ಹೆಚ್ಚಿನ ಮಹತ್ವ ನೀಡಬೇಕು. ಮುಖ್ಯವಾಗಿ ಊಟದ ಸಂದರ್ಭದಲ್ಲಿ ನೂಕು ನುಗ್ಗಲುಗಳಾಗಬಾರದು ಎಂದ ಅವರು, ಸಮಿತಿಗಳ ನಡುವೆ ಸಂವಹನದ ಕೊರತೆಯುಂಟಾಗಬಾರದು ಎಂದರು.