Sunday, December 25, 2011

ಎರಡು ವರ್ಷದೊಳಗೆ ಪಿಯುಸಿಗೆ ಸೆಂಟ್ರಲ್ ಸಿಲೆಬಸ್:ಮುಖ್ಯಮಂತ್ರಿ

ಮಂಗಳೂರು,ಡಿಸೆಂಬರ್.25:ರಾಜ್ಯದಲ್ಲಿ ಪಿಯುಸಿಗೆ ಸೆಂಟ್ರಲ್ ಪಠ್ಯಕ್ರಮವನ್ನು ಮುಂದಿನ ಎರಡು ವರ್ಷದೊಳಗಾಗಿ ಅನುಷ್ಠಾನಕ್ಕೆ ತರಲು ಪ್ರಯತ್ನಿಸಲಾಗುವುದು ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಹೇಳಿದ್ದಾರೆ.ಎ.ಶಾಮರಾವ್ ಪ್ರತಿಷ್ಠಾನದ ಶ್ರೀನಿವಾಸ ಸಮೂಹ ಸಂಸ್ಥೆಯ ವತಿಯಿಂದ ಸುರತ್ಕಲ್ ಮುಕ್ಕದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀನಿವಾಸ ಮಹಾ ವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರ ಹಾಗೂ ಆಸ್ಪತ್ರೆಯನ್ನು ಉದ್ಘಾಟಿಸಿಬಳಿಕ ಸಮಾರಂಭದಲ್ಲಿ ಅವರು ಮಾತನಾಡಿದರು.ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಗೆ ಅನು ಕೂಲ ವಾಗು ವಂತೆ ಪಿಯು ಸಿಯಲ್ಲಿ ಸೆಂ ಟ್ರಲ್ ಸಿಲೆ ಬಸ್ ಅಳ ವಡಿ ಸಿಕೊಳ್ಳು ವಂತೆ ಕೇಂದ್ರ ಈಗಾ ಗಲೇ ಜಿಲ್ಲಾ ರಾಜ್ಯ ಗಳಿಗೆ ಸೂಚನೆ ನೀಡಿದೆ. ಆದರೆ ಕರ್ನಾ ಟಕ ರಾಜ್ಯ ದಲ್ಲಿ ಇದನ್ನು ತಕ್ಷಣ ಅಳ ವಡಿಸಿ ಕೊಳ್ಳು ವುದು ಕಷ್ಟ. ಈ ಹಿನ್ನೆಲೆಯಲ್ಲಿ ಎರಡು ವರ್ಷಗಳ ಕಾಲಾವಕಾಶ ಕೇಳಲಾಗಿದೆ.ಮುಂದಿನ ಎರಡು ವರ್ಷದೊಳಗಾಗಿ ಅನುಷ್ಠಾನಕ್ಕೆ ತರಲು ಪ್ರಯತ್ನಿಸಲಾಗುವುದು ಎಂದರು.
ರಾಜ್ಯ ಸರಕಾರ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದು 2010-11ನೇ ಸಾಲಿನಲ್ಲಿ ಒಟ್ಟು ರೂ.12,284 ಕೋಟಿ ಒದಗಿಸಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ರೂ.2,428 ಕೋಟಿ ಮತ್ತು ವೈದ್ಯಕೀಯ ಶಿಕ್ಷಣಕ್ಕಾಗಿ ರೂ.826 ಕೋಟಿ ನೀಡಿದೆ.ಸರಕಾರದಿಂದಲೇ ಎಲ್ಲಾ ಬದಲಾವಣೆ ಸಾಧ್ಯವಿಲ್ಲ. ಖಾಸಗಿ ಸಂಸ್ಥೆಗಳು ಕೂಡ ಕೈ ಜೋಡಿಸಿದಲ್ಲಿ ರಾಜ್ಯ ಇನ್ನಷ್ಟು ಅಭಿವೃದ್ಧಿ ಕಾಣಲು ಸಾಧ್ಯ ಎಂದ ಮುಖ್ಯಮಂತ್ರಿ ಗಳು ಮೌಲ್ಯಾಧಾರಿತ ಶಿಕ್ಷಣ ಇಂದಿನ ಅಗತ್ಯ ವಾಗಿದ್ದರೂ,ಹೆಚ್ಚಿನ ವಿದ್ಯಾ ಸಂಸ್ಥೆಗಳಲ್ಲಿ ಗುಣಮಟ್ಟದ ಸಮಸ್ಯೆ ಕಂಡು ಬರುತ್ತಿದೆ ಎಂಬ ಕಳವಳ ವ್ಯಕ್ತಪಡಿಸಿ, ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆನೀಡಬೇಕಾಗಿದೆ ಎಂದರು.ಸಮಾ ರಂಭ ದಲ್ಲಿ ಮುಖ್ಯ ಅತಿಥಿ ಗಳಾಗಿ ಮಾತ ನಾಡಿದ ಉನ್ನತ ಶಿಕ್ಷಣ ಸಚಿವ ಡಾ.ವಿ. ಎಸ್.ಆ ಚಾರ್ಯ ಅವರು ಸಮಾ ಜದ ಹಿತ ದೃಷ್ಟಿ ಯಿಂದ ಶಿಕ್ಷಣ ಮತ್ತು ವೈದ್ಯ ಕೀಯ ಕ್ಷೇತ್ರ ದಲ್ಲಿ ತೊಡ ಗಿಸಿ ಕೊಂಡು ಅಭೂತ ಪೂರ್ವ ಕೊಡುಗೆ ನೀಡುವ ಖಾಸಗಿ ಸಂಸ್ಥೆ ಗಳಿಗೆ ಸರ ಕಾರ ಅಗತ್ಯ ನೆರವು ನೀಡಲು ಸಿದ್ಧವಿದೆ ಎಂದರು.
ಮುಖ್ಯ ಅತಿಥಿಗಳಾಗಿದ್ದ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಜೆ.ಕೃಷ್ಣ ಪಾಲೆಮಾರ್ ಮಾತನಾಡಿ ಗ್ರಾಮೀಣ ಭಾಗದ ಜನತೆಗೆ ನೂತನ ವೈದ್ಯಕೀಯ ಸಂಸ್ಥೆಯಿಂದ ಹೆಚ್ಚಿನ ಅನುಕೂಲವಾಗಲಿದೆ. ನನ್ನ ಕ್ಷೇತ್ರದಲ್ಲಿಯೇ ವೈದ್ಯಕೀಯ ಸಂಸ್ಥೆ ನಿರ್ಮಾಣಗೊಂಡಿರುವುದು ಹೆಮ್ಮೆಯ ವಿಚಾರ. ಉತ್ತಮ ವೈದ್ಯಕೀಯ ಸೇವೆ ಜನತೆಗೆ ದೊರೆಯಲಿ ಎಂದು ಹಾರೈಸಿದರು.ಪೇಜಾವರ ಶ್ರೀಗಳಾದ ವಿಶ್ವೇಶತೀರ್ಥ ಸ್ವಾಮೀಜಿಯವರು ಆಶೀರ್ವಚನ ನೀಡಿ ಶೈಕ್ಷಣಿಕ ಸೇವೆಯಲ್ಲಿ ಶ್ರದ್ಧಾಭಕ್ತಿಯಿಂದ ತೊಡಗಿಕೊಳ್ಳಬೇಕು. ಸರಕಾರವೂ ಹೆಚ್ಚಿನ ಒತ್ತು ನೀಡಬೇಕು ಎಂದು ನುಡಿದ ಸ್ವಾಮೀಜಿ ವೈದ್ಯಕೀಯ ವಿದ್ಯಾರ್ಥಿಗಳು ತಮ್ಮ ಸೇವೆಯ ಮಹತ್ವವನ್ನು ಅರಿತುಕೊಳ್ಳಬೇಕು. ಸಂಪಾದನೆಯೊಂದೇ ಮುಖ್ಯವಾಗದೆ ರೋಗಿಗಳ ಮೇಲೆ ಕರುಣೆಯನ್ನು ಹೊಂದಿರಬೇಕು. ವೈದ್ಯ ಸೇವೆಯನ್ನು ಭಗವಂತನ ಸೇವೆ ಎಂದು ಪರಿಗಣಿಸಬೇಕು ಎಂದರು.
ಎ.ಶಾಮರಾವ್ ಪ್ರತಿಷ್ಠಾನದ ಅಧ್ಯಕ್ಷ ಎ.ರಾಘವೇಂದ್ರ ರಾವ್ ಅಧ್ಯಕ್ಷತೆ ವಹಿಸಿದ್ದರು.ಬಾಳೆಗುರು ಮಠದ ಶ್ರೀ ರಘುವರಭೂಷಣ ತೀರ್ಥ ಸ್ವಾಮೀಜಿ, ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾನಿಲದ ಕುಲಪತಿ ಡಾ.ಶ್ರೀಪ್ರಕಾಶ್ ಕೆ.ಎಸ್., ಎಐಸಿಸಿ ಕಾರ್ಯದರ್ಶಿ ವಿನಯ್ ಕುಮಾರ್ ಸೊರಕೆ, ಇಂಡಿಯನ್ ಓವರ್ಸೀಸ್ ಬ್ಯಾಂಕಿನ ಮುಖ್ಯಸ್ಥ ಎಂ.ನರೇಂದ್ರ, ಬ್ಯಾಂಕ್ ಆಫ್ ಮಹಾರಾಷ್ಟ್ರ ಇದರ ನಿಕಟ ಪೂರ್ವ ಅಧ್ಯಕ್ಷ ಅಲೆನ್ ಪಿರೇರಾ ,ಶ್ರೀನಿವಾಸ ಆಸ್ಪತ್ರೆಯ ಮುಕ್ಕ ಇದರ ಡೀನ್ ಮತ್ತು ವೈದ್ಯಕೀಯ ನಿರ್ದೇಶಕ ಡಾ.ಸಿ.ವಿ.ರಘುವೀರ್ ,ಎ.ಶಾಮರಾವ್ ಪ್ರತಿಷ್ಠಾನದ ಉಪಾಧ್ಯಕ್ಷ ಎ.ಶ್ರೀನಿವಾಸ ರಾವ್ ಸಂಸ್ಥೆಯ ಟ್ರಸ್ಟಿಗಳಾದ ಎ.ವಿಜಯಲಕ್ಷ್ಮೀ ಆರ್.ರಾವ್, ಡಾ.ಉದಯ್ ಕುಮಾರ್ ಮಲ್ಯ, ಪದ್ಮಿನಿ ಕುಮಾರ್, ಎ.ಮಿತ್ರಾ ಎಸ್.ರಾವ್, ಪ್ರಮುಖರಾದ ಶಾಂತಾ ವಿ.ಆಚಾರ್ಯ ಉಪಸ್ಥಿತರಿದ್ದರು.