Saturday, December 3, 2011

ಡಿ.5ರಂದು ನಕ್ಸಲ್ ಬಾಧಿತ ಪ್ರದೇಶ ಅಭಿವೃದ್ಧಿ ವರದಿ ಸರ್ಕಾರಕ್ಕೆ ಸಲ್ಲಿಕೆ

ಮಂಗಳೂರು,ಡಿಸೆಂಬರ್.03: ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯ ನಕ್ಸಲ್ ಪೀಡಿತ ಪ್ರದೇಶಗಳ 12 ಗ್ರಾಮಗಳ ಆದ್ಯತಾ ಪಟ್ಟಿಯನ್ನು ನಿನ್ನೆ ಬೆಳ್ತಂಗಡಿ ತಾಲೂಕು ಪಂಚಾಯಿತಿ ಸಭಾ ಭವನದಲ್ಲಿ ನೋಡಲ್ ಅಧಿಕಾರಿಗಳ ನೇತೃತ್ವದಲ್ಲಿ ತಯಾರಿಸಲಾಗಿದ್ದು, ಇಂದು ಅಂತಿಮ ವರದಿ ಸಿದ್ಧಪಡಿಸಿ ಡಿಸೆಂಬರ್ 5ರಂದು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ ಎನ್ ಎಸ್ ಚನ್ನಪ್ಪಗೌಡ ತಿಳಿಸಿದ್ದಾರೆ.
ಮೂಲ ಭೂತ ಸೌಕರ್ಯ ಗಳೊಂ ದಿಗೆ, ತರ ಬೇತಿ ಕಾರ್ಯ ಕ್ರಮ, ಅಂಗನ ವಾಡಿ, ಶಿಕ್ಷಣ ಕಾರ್ಯ ಕ್ರಮ ಗಳನ್ನು ಈ ಪ್ರದೇಶ ಗಳಿಗೆ ಆದ್ಯತೆ ಮೇರಗೆ ನೀಡಲು ನಿರ್ಧರಿಸಲಾಗಿದೆ. ಪ್ರಥಮಾದ್ಯತೆ, ದ್ವಿತೀಯಾಧ್ಯತೆ ಹಾಗೂ ತೃತೀಯಾದ್ಯತೆಗಳ ಪಟ್ಟಿ ನಿನ್ನೆ ರಾತ್ರಿ 11.30ರವರೆಗೆ ನೋಡಲ್ ಅಧಿಕಾರಿಗಳ ನೇತೃತ್ವದಲ್ಲಿ ಸಿದ್ಧಪಡಿಸಲಾಗಿದೆ.ವರದಿಯ ಮಾದರಿ ಯನ್ನು ಮೊದಲೇ ಅಧಿ ಕಾರಿ ಗಳಿಗೆ ತಿಳಿಸ ಲಾಗಿದ್ದು, ಸಭೆ ಯಲ್ಲಿ ಬಹ ಳಷ್ಟು ಅನು ಮಾನ ಗಳು ವ್ಯಕ್ತ ವಾದ್ದ ರಿಂದ ಸಿಇಒ ಡಾ ಕೆ ಎನ್ ವಿಜಯ ಪ್ರಕಾಶ್ ಅವರು ಮಾದರಿಗೆ ಸಂಬಂಧಿಸಿ ಅಧಿ ಕಾರಿ ಗಳಿಗೆ ಪಾಠವನ್ನೂ ಮಾಡಿದರು. ಮೆಸ್ಕಾಂ ನಿಂದ 384 ಮನೆ ಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿ ಸುವು ದಾಗಿ ಮೆಸ್ಕಾಂ ಅಧಿ ಕಾರಿ ತಿಳಿ ಸಿದರು. ಶಿರ್ಲಾಲು, ಅಳದಂ ಗಡಿ, ಇಂದ ಬೆಟ್ಟು, ನಡಾ, ಮಲ ವಂತಿಗೆ, ಲಾಯಿಲಾ, ಸವ ಣೂರು, ನಾವೂರು, ನಾವರ, ಮೇಲಂತಬೆಟ್ಟು, ನಾರಾವಿ, ಮಿತ್ತಬಾಗಿಲು, ಸುಲ್ಕೇರಿ, ಕುತ್ಲೂರು ಗ್ರಾಮಗಳನ್ನು ಆರಿಸಲಾಗಿದೆ.
ಸಭೆಯಲ್ಲಿ ಜಿಲ್ಲಾಧಿಕಾರಿ ಡಾ ಎನ್ ಎಸ್ ಚನ್ನಪ್ಪಗೌಡ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಾಬೂರಾಮ್, ಸಹಾಯಕ ಕಮಿಷನರ್ ಸುಂದರ ಭಟ್, ತಹಸೀಲ್ದಾರ್ ಶ್ರೀಮತಿ ಕುಸುಮಾ, ಯೋಜನಾ ನಿರ್ದೇಶಕರು ಹಾಗೂ ನೋಡಲ್ ಅಧಿಕಾರಿ ಶ್ರೀಮತಿ ಸೀತಮ್ಮ ಸಭೆಯ ನೇತೃತ್ವವಹಿಸಿದ್ದರು.