Thursday, December 15, 2011

ನೂತನ ಐಜಿಪಿ ಪ್ರತಾಪ್ ರೆಡ್ಡಿ ಅಧಿಕಾರ ಸ್ವೀಕಾರ;ಪಾರದರ್ಶಕ ಮತ್ತು ದಕ್ಷ ಆಡಳಿತಕ್ಕೆ ಒತ್ತು

ಮಂಗಳೂರು,ಡಿಸೆಂಬರ್.16:ಪಶ್ಚಿಮ ವಲಯದ ನೂತನ ಪೋಲಿಸ್ ಮಹಾ ನಿರೀಕ್ಷಕರಾಗಿ ಪ್ರತಾಪ್ ರೆಡ್ಡಿ ಅವರು ಬುಧವಾರ ನಿರ್ಗಮನ ಐಜಿಪಿ ಅಲೋಕ್ ಮೋಹನ್ ಅವರಿಂದ ಮಂಗಳೂರಿನ ಕಚೇರಿಯಲ್ಲಿ ಅಧಿಕಾರ ಸ್ವೀಕರಿದರು. ಪೋಲಿಸ್ ಆಯುಕ್ತರಾದ ಸೀಮಂತ್ ಕುಮಾರ್ ಸಿಂಗ್, ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿ ಲಾಬೂ ರಾಮ್ ಅವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕರಾವಳಿ ಸೂಕ್ಷ್ಮ ಪ್ರದೇಶ. ಜನತೆ ಮತ್ತು ಇಲಾಖೆಯ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಮೂಲಕ ಪಾರದರ್ಶಕ ಮತ್ತು ದಕ್ಷ ಆಡಳಿತಕ್ಕೆ ಒತ್ತು ನೀಡುವುದಕ್ಕೆ ಮೊದಲ ಆದ್ಯತೆ ಎಂದರು.ಕರಾವಳಿಯ ಈ ಭಾಗ ನನಗೆ ಹೊಸತ ಲ್ಲ ವಾದರೂ ಅನೇಕ ಬದಲಾ ವಣೆಗ ಳನ್ನು ಕಳೆದ 15 ವರ್ಷ ಗಳಿಂದ ಕಂಡಿದೆ. 1994ರಲ್ಲಿ ಕಾರ್ಕಳ ದಲ್ಲಿ ಎಎಸ್ಪಿ ಯಾಗಿ ಕರ್ತವ್ಯ ನಿರ್ವ ಹಿಸಿದ್ದೇನೆ. ಇದೀಗ ಎರಡನೆಯ ಬಾರಿಗೆ ಕರಾವಳಿಗೆ ಆಗಮಿ ಸುತ್ತಿದ್ದೇನೆ. ಇತರ ಪ್ರದೇಶ ಗಳಿಗಿಂತ ಕರಾವಳಿ ತುಸು ಭಿನ್ನ ಪ್ರದೇಶ. ಕೋಮುಗಲಭೆ, ನಕ್ಸಲ್ ಪೀಡೆ, ಭೂಗತ ಚಟುವ ಟಿಕೆ ಗಳಿಗೆ ಇಲ್ಲಿ ತಡೆ ಒಡ್ಡ ಬೇಕಾ ಗಿದೆ.ಎದುರಾಗುವ ಸವಾಲು ಗಳನ್ನು ದಿಟ್ಟವಾಗಿ ಎದುರಿಸ ಲಾಗುವುದು. ಅಲ್ಲದೆ ಶಾಂತಿ ಕಾಯ್ದು ಕೊಳ್ಳವಲ್ಲಿ ಯಾವ ರೀತಿ ಕಾರ್ಯೋ ನ್ಮುಖವಾ ಗಬೇಕೆಂಬ ನಿಟ್ಟಿನಲ್ಲಿ ಪೊಲೀಸ್ ಇಲಾಖೆಗಳಿಗೆ ನಿರ್ದೇಶನ ನೀಡಲಾಗುವುದು. ಸಾರ್ವಜನಿಕರ ಸಹಕಾರ, ಸ್ಥಳೀಯ ಪೊಲೀಸರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೊಂದಾಣಿಕೆಯಿಂದ ಕೆಲಸ ಮಾಡುವತ್ತ ಒತ್ತು ನೀಡಲಾಗುವುದು ಎಂದರು.

ಅಂಕಿ ಅಂಶಗಳ ಮೂಲಕ ಪೊಲೀಸ್ ಇಲಾಖೆಯ ಸಾಧನೆ ಯನ್ನು ಅಳೆಯ ಲಾಗದು. ವಿಭಿನ್ನ ರೀತಿ ಯಲ್ಲಿ ಕಳ್ಳತನ, ದರೋಡೆ ಯಂತಹ ಪ್ರಕರ ಣಗಳು ನಡೆ ಯುತ್ತವೆ. ಇದನ್ನು ಪತ್ತೆ ಹಚ್ಚುವಲ್ಲಿ ಕೂಡ ಪೊಲೀಸರು ಸಜ್ಜಾ ಗಿರಬೇಕಾ ಗುತ್ತದೆ. ಅತ್ಯಂತ ಜವಾ ಬ್ದಾರಿಯು ತವಾಗಿ ಕರ್ತವ್ಯ ನಿರ್ವಹಿ ಸುವುದಲ್ಲದೆ ಆಧುನಿಕ ಮಾಹಿತಿ ತಂತ್ರಜ್ಞಾನವನ್ನು ಸಮರ್ಪಕ ರೀತಿಯಲ್ಲಿ ಬಳಸಿಕೊಳ್ಳಲಾಗುವುದು ಎಂದು ಪ್ರತಾಪ್ ರೆಡ್ಡಿ ಹೇಳಿದರು.
ಐಜಿಪಿ ಪ್ರತಾಪ್ ರೆಡ್ಡಿ ಅವರ ಸ್ಥೂಲ ಪರಿಚಯ:ಮೂಲತಃ ಆಂಧ್ರ ಪ್ರದೇಶದ ಗುಂಟೂರಿನವರಾದ ಪ್ರತಾಪ್ ರೆಡ್ಡಿಯವರು 1991ರ ಬ್ಯಾಚಿನ ಐಪಿಎಸ್ ಅಧಿಕಾರಿ. ಅರಸೀಕೆರೆಯಲ್ಲಿ ಎಎಸ್ಪಿಯಾಗಿ ವೃತ್ತಿ ಜೀವನ ಆರಂಭಿಸಿದ ಇವರು ಬಳಿಕ ಕಾರ್ಕಳದಲ್ಲಿ ಎಎಸ್ಪಿಯಾಗಿದ್ದರು. ಬಿಜಾಪುರ, ಗುಲ್ಬರ್ಗದಲ್ಲಿ ಎಸ್ಪಿಯಾಗಿ ಸೇವೆ ಸಲ್ಲಿಕೆ. ಸಿಬಿಐ ಅಧಿಕಾರಿಯಾಗಿಯೂ ಆಗಿಯೂ ಕರ್ತವ್ಯ ನಿಭಾಯಿಸಿದ್ದಾರೆ.
ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವಾ ದಳದಲ್ಲಿ ಎಡಿಜಿಯಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಅಲ್ಲದೆ ನ್ಯಾಶನಲ್ ಅಸೋಸಿಯೇಶನ್ ಆಫ್ ಸಾಫ್ಟ್ ವೆರ್ ಅಂಡ್ ಸರ್ವಿಸಸ್ ಕಂಪೆನೀಸ್ ಇದರ ಹಿರಿಯ ನಿರ್ದೇಶಕರಾಗಿ ಫೆಬ್ರವರಿ 2009ರಿಂದ ಆಗಸ್ಟ್ 2011ರವರೆಗೆ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ.ಪೊಲೀಸ್ ಇಲಾಖೆಯಲ್ಲಿನ ದಕ್ಷ ಸೇವೆಗೆ ಮುಖ್ಯಮಂತ್ರಿ, ರಾಷ್ಟ್ರಪತಿಯವರ ಪದಕಗಳ ಗೌರವವೂ ಇವರಿಗೆ ದೊರೆತಿದೆ.