Thursday, December 1, 2011

ಯುವಜನತೆಯಲ್ಲಿ ಏಡ್ಸ್ ಬಗ್ಗೆ ಅರಿವು ಅಗತ್ಯ : ಡಾ. ವಿಜಯಪ್ರಕಾಶ್

ಮಂಗಳೂರು,ಡಿಸೆಂಬರ್.01: ಸಾಮಾಜಿಕ ಮೌಲ್ಯಗಳು ಮತ್ತು ನೈತಿಕತೆಯಿಂದ ವಿಮುಖರಾಗದೆ ಉತ್ತಮ ನಾಗರೀಕರಾಗಿ ಸಾಮಾಜಿಕ ಹೊಣೆ ಅರಿತು ಇಂದಿನ ಯುವ ಜನಾಂಗ ಬಾಳಿದರೆ ಪ್ರಸಕ್ತ ಸಾಲಿನ ಘೋಷ ವಾಕ್ಯ 'ಸೊನ್ನೆಗೆ ತನ್ನಿ ಹೊಸ ಹೆಚ್ ಐ ವಿ ಸೋಂಕುಗಳನ್ನು, ಕಳಂಕ ತಾರತಮ್ಯವನ್ನು, ಏಡ್ಸ್ ಸಂಬಂಧಿತ ಸಾವುಗಳನ್ನು' ಎಂಬ ಮಹದಾಶಯ ಸಕಾರಗೊಳಿಸಲು ಸಾಧ್ಯ ಎಂದು ದ.ಕ.ಜಿ.ಪಂ. ಸಿ ಇ ಒ ಡಾ. ಕೆ ಎನ್ ವಿಜಯಪ್ರಕಾಶ್ ಅವರು ಹೇಳಿದರು.

ಅವ ರಿಂದು ಸ್ಕೂಲ್ ಆಫ್ ಸೋಶಿ ಯಲ್ ವಕ್ಸ್ ನಗ ರದ ರೋಶನಿ ನಿಲ ಯದಲ್ಲಿ ಆಯೋ ಜಿಸ ಲಾದ ವಿಶ್ವ ಏಡ್ಸ್ ದಿನ ಕಾರ್ಯ ಕ್ರಮ ಮತ್ತು ಒಂದೇ ಹೆಜ್ಜೆ ಜಾ ಗೃತಿ ಆಂದೋ ಲನ ವನ್ನು ಉದ್ಘಾ ಟಿಸಿ ಮಾತ ನಾಡು ತ್ತಿದ್ದರು. ಯುವ ಜನಾಂಗ ವನ್ನು ಹೊಂದಿ ರುವ ಬೃಹತ್ ರಾಷ್ಟ್ರ ನಮ್ಮ ದಾಗಿದ್ದು, ವಿದ್ಯಾ ರ್ಥಿಗಳು ಪಠ್ಯ, ಪಠ್ಯೇ ತರ ಚಟು ವಟಿಕೆ ಗಳು, ವ್ಯಕ್ತಿತ್ವ ವಿಕ ಸನ, ನಮ್ಮತನದೊಂದಿಗೆ ಗೌರವಯುತ ಸ್ಥಾನಮಾನ ಪಡೆಯಲು ಆಕಾಂಕ್ಷೆ, ಗುರಿಯೊಂದಿಗೆ ಮುಂದುವರಿದರೆ ಏಡ್ಸ್ ನಿಯಂತ್ರಣ ಖಂಡಿತ ಸಾಧ್ಯ ಎಂದು ಪ್ರತಿಪಾದಿಸಿದರು.
ಕಳೆದ ವರ್ಷದ ದಿನಾಚರಣೆಯಂದು ಹೆಚ್ ಐ ವಿ ಸೋಂಕಿತರಿಗೆ ಮತ್ತು ಲೈಂಗಿಕ ಕಾರ್ಯಕರ್ತೆಯರಿಗೆ ವಿವಿಧ ಯೋಜನೆಗಳಡಿ ಸವಲತ್ತು ಒದಗಿಸಲು ಜಿಲ್ಲಾಡಳಿತ ಮುಂದಾಗಿದ್ದು, ಈಗಾಗಲೇ 52 ಜನರಿಂದ ಅರ್ಜಿ ಸ್ವೀಕರಿಸಲಾಗಿದೆ. ಲೈಂಗಿಕ ಕಾರ್ಯಕರ್ತೆಯರ ಪುನರ್ ವಸತಿಗಾಗಿ 200ಕ್ಕೂ ಹೆಚ್ಚು ಜನರನ್ನು ಗುರುತಿಸಲಾಗಿದ್ದು ವಸತಿ ಯೋಜನೆ ಹಾಗೂ ಇವರನ್ನು ಸ್ವಾವಲಂಬಿಗಳನ್ನಾಗಿಸುವಲ್ಲಿ ರಚನಾತ್ಮಕ ಯೋಜನೆಗಳನ್ನು ರೂಪಿಸಲಾಗಿದೆ ಎಂಬ ಮಾಹಿತಿಯನ್ನು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ನೀಡಿದರು.
ಆಟೋ ಚಾಲಕರಲ್ಲಿ ಈ ಬಗ್ಗೆ ಮಾಹಿತಿ ಹಾಗೂ ಅರಿವು ಮೂಡಿಸಲು ಸಾಂಕೇತಿಕವಾಗಿ ಹಿರಿಯ ಆಟೋ ಚಾಲಕರಾದ ಮೋಂತು ಲೋಬೋ ಅವರಿಗೆ ಕರಪತ್ರ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಸೋಫಿಯಾ ಫೆರ್ನಾಂಡಿಸ್ ಅವರು, ಯಶಸ್ವಿ ಜೀವನದ ಗುಟ್ಟುಗಳನ್ನು ವಿದ್ಯಾರ್ಥಿಗಳಿಗೆ ಹೇಳಿದರಲ್ಲದೆ, ಜೀವನವನ್ನು ಗೌರವಯುತವಾಗಿ ರೂಪಿಸುವುದರಿಂದ ಯುವಶಕ್ತಿ, ಸದೃಢ ದೇಶ ನಿರ್ಮಾಣ ಸಾಧ್ಯ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ. ಕಿಶೋರ್ ಕುಮಾರ್ ಅವರು, ಪ್ರಪಂಚದಲ್ಲಿ 33.3 ಮಿಲಿಯನ್ ಹೆಚ್ ಐ ವಿ ಸೋಂಕಿತರಿದ್ದಾರೆ. ಭಾರತದಲ್ಲಿ 2.3 ಮಿಲಿಯನ್ ಹಾಗೂ ಕರ್ನಾಟಕದಲ್ಲಿ 2.5 ಲಕ್ಷ ಜನರು ಹೆಚ್ ಐ ವಿ ಸೋಂಕಿತರಿದ್ದಾರೆಂಬ ಮಾಹಿತಿ ನೀಡಿದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 275 ಗರ್ಭಿಣಿಯರು ಮತ್ತು 5177 ಇತರರನ್ನೊಳಗೊಂಡಂತೆ 5,452 ಮಂದಿ ಸೋಂಕಿತರು ಪತ್ತೆಯಾಗಿದ್ದಾರೆ. ಈ ವರ್ಷ ಜನವರಿ 2011ರಿಂದ ಅಕ್ಟೋಬರ್ 2011ರವರೆಗೆ 36 ಮಂದಿ ಗರ್ಭಿಣಿಯವರು ಮತ್ತು 732 ಮಂದಿ ಇತರರು ಒಟ್ಟು 768 ಮಂದಿ ಪಾಸಿಟಿವ್ ಪತ್ತೆಯಾಗಿರುತ್ತಾರೆ. 732 ಮಂದಿಯಲ್ಲಿ 464 ಪುರುಷರು ಮತ್ತು 262 ಮಹಿಳೆಯರು ಇವರಲ್ಲಿ 31 ಮಂದಿ 15 ವರ್ಷದ ಕೆಳಗಿನ ಮಕ್ಕಳಿದ್ದಾರೆ. 2006ರಿಂದ 2011ರವರೆಗೆ ಎ ಆರ್ ಟಿ ಕೇಂದ್ರದಲ್ಲಿ 1819 ಪುರುಷರು ಮತ್ತು 1080 ಮಹಿಳೆಯರಿಗೆ ಮತ್ತು 252 ಮಂದಿ 15 ವರ್ಷದ ಕೆಳಗಿನ ಮಕ್ಕಳನ್ನೊಳಗೊಂಡಂತೆ 3151 ಜನರು ಚಿಕಿತ್ಸೆ ಪಡೆದಿದ್ದಾರೆಂಬ ಮಾಹಿತಿಯನ್ನು ನೀಡಿದರು.
ಸಂಪನ್ಮೂಲ ವ್ಯಕ್ತಿಯಾದ ಡಾ. ರಶ್ಮಿ ಸಹ ಪ್ರಾಧ್ಯಾಪಕರು, ಸಮುದಾಯ ಆರೋಗ್ಯ ವಿಭಾಗ, ಕೆ ಎಸ್ ಹೆಗ್ಡೆ ಮೆಡಿಕಲ್ ಅಕಾಡೆಮಿ ದೇರಳಕಟ್ಟೆ ಇವರು, ಏಡ್ಸ್ ಬಗ್ಗೆ ಸಾಕಷ್ಟು ಮಾಹಿತಿ ಎಲ್ಲರಿಗೂ ಇದೆಯಾದರೂ ಅರಿವು ಮೂಡಿಸಬೇಕಾದ ಅಗತ್ಯವನ್ನು ಪ್ರತಿಪಾದಿಸಿದರು. ಸೋಂಕಿತರನ್ನು ಸಾಮಾಜಿಕವಾಗಿ ನಿರ್ಲಕ್ಷಿಸಿದೆ ಅವರಿಗೆ ಬದುಕಲು ಸಮಾನ ಹಕ್ಕು ನೀಡಬೇಕೆಂದರು. ಸಾಮಾಜಿಕ ವ್ಯವಸ್ಥೆಯ ಮೇಲೆ ಹಾಗೂ ಯುವ ಶಕ್ತಿಯ ಮೇಲೆ ಹೆಚ್ಚಿನ ಪರಿಣಾಮ ಬೀರುವ ರೋಗ ಏಡ್ಸ್; ಹಾಗಾಗಿ ಯುವಶಕ್ತಿಯಲ್ಲಿ ಈ ಬಗ್ಗೆ ಶಿಕ್ಷಣ, ಜಾಗೃತಿ ಮತ್ತು ಅರಿವು ಮೂಡಿಸಬೇಕಿದೆ ಎಂದರು. ಬಳಿಕ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧನೆ ನಡೆಯಿತು.
ಪೂರ್ವಾಹ್ನ ಶಾಂತಿ ನಿಲಯ ಮೈದಾನದಿಂದ ಮಂಗಳೂರು ವಕೀಲರ ಸಂಘದ ಅಧ್ಯಕ್ಷರಾದ ಎಸ್.ಪಿ. ಚೆಂಗಪ್ಪ ಅವರು ಜಾಗೃತಿ ಜಾಥಾ ಉದ್ಘಾಟಿಸಿದರು. ಲೇಡಿಗೋಶನ್ ಆರ್ ಎಂ ಒ ಡಾ. ಗೀತಾಂಜಲಿ, ಡಾ. ಜಾನ್, ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ವಿನೀತ ರೈ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಮಂಗಳೂರು ವಕೀಲರ ಸಂಘ, ಸ್ಕೂಲ್ ಆಫ್ ಸೋಶಿಯಲ್ ವಕ್ಸ್ ರೋಶನಿ ನಿಲಯ, ಅಥೆನಾ ಇನ್ಸ್ಟಿಟ್ಯೂಟ್ ಆಫ್ ನರ್ಸಿಂಗ್ ಸಯನ್ಸ್, ಮಂಗಳೂರು ವಿವಿ ವ್ಯಾಪ್ತಿಯ ಎಲ್ಲ ರೆಡ್ ರಿಬ್ಬನ್ ಕ್ಲಬ್, ಕಾಲೇಜುಗಳು ಮತ್ತು ಜಿಲ್ಲಾ ಮಟ್ಟದ ಕೆಸ್ಸಾಪ್ಸ್ ಸಿಬ್ಬಂದಿ, ಎನ್ ಜಿ ಒ ಸಂಸ್ಢಯಗಳ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಘಟಕದ ನೇತೃತ್ವದಲ್ಲಿ ಇಂದಿನ ಕಾರ್ಯಕ್ರಮ ನಡೆಯಿತು.