Saturday, March 17, 2012

ಅಸೈಗೋಳಿಯಲ್ಲಿ ಸೋಲಿಗರ ನೃತ್ಯ

ಮಂಗಳೂರು,ಮಾರ್ಚ್.17 :ವಿವಿಧ ಧರ್ಮ,ಜಾತಿ,ಭಾಷೆ ಸಂಸ್ಕೃತಿಗಳನ್ನು ಹೊಂದಿರುವ ನಮ್ಮ ದೇಶದಲ್ಲಿ ವಿವಿಧ ಸಂಸ್ಕೃತಿಗಳ ವಿನಿಮಯದಿಂದಾಗಿ ಮಾದರಿ ಜೀವನಕ್ಕೆ ನಾಂದಿಯಾಗಲಿದೆ.ಇಂತಹ ಸಂಸ್ಕೃತಿ ವಿನಿಮಯ ಕಾರ್ಯವನ್ನು ರಾಜ್ಯ ವಾರ್ತಾ ಇಲಾಖೆ ಹಮ್ಮಿ ಕೊಂಡಿರುವುದು ಪ್ರಶಂಸನೀಯವಾದುದು ಎಂದು ಮಂಗಳೂರು ತಾಲೂಕು ಕೋಣಾಜೆ ಗ್ರಾಮ ಪಂಚಾಯತ್ನ ಅಧ್ಯಕ್ಷರಾದ ಶೌಕತ್ ಆಲಿ ಅವರು ಹೇಳಿದ್ದಾರೆ.ಅವರು ಶುಕ್ರ ವಾರ ಸಂಜೆ ಮಂಗ ಳೂರು ತಾಲೂ ಕಿನ ಕೋ ಣಾಜೆ ಗ್ರಾಮ ಪಂಚಾ ಯತ್ ವ್ಯಾ ಪ್ತಿಯ ಅಸೈ ಗೋಳಿ ಯಲ್ಲಿ ಮಂಗ ಳೂರಿನ ವಾರ್ತಾ ಇಲಾಖೆ ವತಿ ಯಿಂದ ಸಾಂ ಸ್ಕೃತಿಕ ವಿನಿ ಮಯ ಕಾರ್ಯ ಕ್ರಮ ದನ್ವಯ ಆಯೋ ಜಿಸಿದ್ದ ಚಾಮ ರಾಜ ನಗರ ಜಿಲ್ಲೆಯ ಸೋಲಿ ಗರ ನೃತ್ಯ ಕಾರ್ಯ ಕ್ರಮ ವನ್ನು ತಮಟೆ ಬಾರಿಸಿ ಚಾಲನೆ ಮಾಡಿ ದರು.
ಸಂ ಪೂರ್ಣ ಕಾಡಿ ನಲ್ಲಿಯೇ ತಮ್ಮ ಬದು ಕನ್ನು ರೂಪಿಸಿ ಕೊಂಡಿ ರುವ ಸೋಲಿ ಗರ ಸಂ ಸ್ಕೃತಿ ಆಚಾರ ವಿಚಾ ರಗಳು ಇತರೆ ನಾಗ ರೀಕ ಸಮಾ ಜಕ್ಕೆ ಮಾದರಿ ಯಾಗಿದೆ ಯೆಂದರು.ಸಮಾ ರಂಭ ದಲ್ಲಿ ಕೋ ಣಾಜೆ ಗ್ರಾಮ ಪಂಚಾ ಯತ್ ಅಭಿ ವೃದ್ದಿ ಅಧಿ ಕಾರಿ ಶ್ರೀಮತಿ ಸಾವಿತ್ರಿ,ಕಾರ್ಯ ದರ್ಶಿ ಅಬೂ ಬಕರ್ ಹಾಗೂ ಪಂಚಾ ಯತ್ ಸದ ಸ್ಯರು ಹಾಜ ರಿದ್ದರು.ಕಾರ್ಯ ಕ್ರಮದ ಕುರಿತು ವಾರ್ತಾ ಇಲಾಖೆಯ ವಾರ್ತಾ ಸಹಾಯಕರಾದ ಬಿ.ಆರ್. ಚಂದ್ರಶೇಖರ ಆಜಾದ್ ಪರಿಚಯ ಮಾಡಿದರು.