Saturday, March 3, 2012

ಎಪ್ರಿಲ್ ನಲ್ಲಿ ಕಂಕನಾಡಿಯಲ್ಲಿ ಪ್ರೀಪೇಯ್ಡ್ ಆಟೋ ಕೌಂಟರ್:ಜಿಲ್ಲಾಧಿಕಾರಿ

ಮಂಗಳೂರು,ಮಾರ್ಚ್.03: ನಗರದಲ್ಲಿ ಪ್ರಸ್ತುತ ಎರಡು ಪ್ರೀಪೇಯ್ಡ್ ಆಟೋ ಕೌಂಟರ್ ಗಳನ್ನು ಆರಂಭಿಸಲಾಗಿದ್ದು, ಎಪ್ರಿಲ್ ಅಂತ್ಯದೊಳಗೆ ಕಂಕನಾಡಿ ಜಂಕ್ಷನ್ ರೈಲ್ವೇ ನಿಲ್ದಾಣದಲ್ಲಿ ಪ್ರೀಪೇಯ್ಡ್ ಆಟೋ ಕೌಂಟರ್ ತೆರೆಯಲಾಗುವುದು ಎಂದು ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷ ಹಾಗೂ ಜಿಲ್ಲಾಧಿಕಾರಿ ಡಾ ಎನ್.ಎಸ್. ಚನ್ನಪ್ಪ ಗೌಡ ತಿಳಿಸಿದ್ದಾರೆ.ಜಿಲ್ಲಾ ಧಿಕಾರಿ ಕಛೇರಿ ಸಭಾಂ ಗಣ ದಲ್ಲಿ ಇಂದು ನಡೆದ ಪ್ರಾಧಿ ಕಾರದ ಸಭೆಯ ಬಳಿಕ ಅವರು ಸುದ್ದಿ ಗಾರರ ಪ್ರಶ್ನೆ ಯೊಂ ದಕ್ಕೆ ಈ ಪ್ರತಿ ಕ್ರಿಯೆ ನೀಡಿ ದ್ದಾರೆ.ಮಂಗ ಳೂರು ಸೆಂಟ್ರಲ್ ರೈಲ್ವೇ ನಿಲ್ದಾಣದ ಪ್ರೀ ಪೇಯ್ಡ್ ಆಟೋ ಕೌಂಟರ್ ಉತ್ತಮ ವಾಗಿ ಕಾರ್ಯ ನಿರ್ವ ಹಿಸು ತ್ತಿದ್ದು, ಕೆಎಸ್ ಆರ್ಟಿ ಸಿ ಬಳಿಯ ಕೌಂಟರ್ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಈ ನಡುವೆ, ಕಂಕ ನಾಡಿ ರೈಲ್ವೇ ಜಂಕ್ಷನ್ ನಲ್ಲಿ ತಡ ರಾತ್ರಿ ಯಿಂದ ಬೆಳಗ್ಗಿನ ಹೊತ್ತು ರೈಲುಗಳಲ್ಲಿ ಬಂದಿಳಿಯುವ ಪ್ರಯಾಣಿಕರಿಗೆ ತಮ್ಮ ಮುಂದಿನ ಪ್ರಯಾಣಕ್ಕೆ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿ ಪ್ರೀಪೇಯ್ಡ್ ಕೌಂಟರ್ ತೆರೆಯಲು ನಿರ್ಧರಿಸಲಾಗಿದೆ ಎಂದರು.
ಈ ಬಗ್ಗೆ ರೈಲ್ವೇ, ಪೊಲೀಸ್ ಹಾಗೂ ಆಟೋ ಮಾಲಕರ ಸಭೆಯನ್ನು ಕೈಗೊಂಡು ಶೀಘ್ರದಲ್ಲೇ ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಉಪಸ್ಥಿತರಿದ್ದ ಆರ್ ಟಿ ಒ ಮಲ್ಲಿಕಾರ್ಜುನ ತಿಳಿಸಿದರು.

ವಿಮಾನ ನಿಲ್ದಾಣಕ್ಕೆ ಬಸ್ಸು ಸೇವೆ ಪುನರಾರಂಭಕ್ಕೆ ಚಿಂತನೆ:
ಮಂಗಳೂರಿನ ವಿಮಾನ ನಿಲ್ದಾಣ ಮತ್ತು ಕೆಎಸ್ಆರ್ ಟಿಸಿ ನಡುವೆ ಆರಂಭಿಸಲಾಗಿದ್ದ ವೋಲ್ವೋ ಬಸ್ ಸಂಚಾರ ಸ್ಥಗಿತಗೊಂಡಿರುವ ಕುರಿತಂತೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಪ್ರಯಾಣಿಕರ ನೀರಸ ಪ್ರತಿಕ್ರಿಯಿಂದಾಗಿ ವೋಲ್ವೋ ಬಸ್ ಸಂಚಾರ ಸ್ಥಗಿತಗೊಂಡಿದೆ. ಇದೀಗ ಇಲ್ಲಿಗೆ ಪ್ರಸ್ತುತ ಕಟೀಲು, ಕಿನ್ನಿಗೋಳಿ ಅಥವಾ ಬಜಪೆ ನಡುವೆ ಸಂಚರಿಸುವ ಒಂದೆರಡು ಬಸ್ಸುಗಳನ್ನು ವಿಮಾನ ನಿಲ್ದಾಣದವರೆಗೆ ಸಂಚರಿಸಲು ಅನುವು ಮಾಡಿಕೊಟ್ಟು ಜನರಿಗೆ ಪ್ರಯೋಜನವಾಗುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವ ಚಿಂತನೆ ಇದೆ ಎಂದವರು ತಿಳಿಸಿದರು.