Tuesday, March 13, 2012

ವಿಪತ್ತು ನಿರ್ವಹಣೆಗೆ ಸಜ್ಜಾಗಿ- ಅಮರ್ ನಾರಾಯಣ್

ಮಂಗಳೂರು,ಮಾರ್ಚ್.13:ವಿಪತ್ತು ನಿರ್ವಹಣೆಯನ್ನು ಸಮರ್ಥವಾಗಿ ನಿಭಾಯಿಸಲು ವಿಶ್ವ ಬ್ಯಾಂಕ್ ನೆರವಿನ ರಾಷ್ಟ್ರೀಯ ಚಂಡಮಾರುತ ಅಪಾಯ ಕಡಿಮೆಗೊಳಿಸುವ ಯೋಜನೆಯಡಿ (National cyclone risk mitigation project) ಮೂರು ಕರಾವಳಿ ತೀರದ ದಕ್ಷಿಣ ಕನ್ನಡ,ಉಡುಪಿ ಮತ್ತು ಉತ್ತರಕನ್ನಡ ಜಿಲ್ಲೆಗಳನ್ನು ಸೇರಿಸಲಾಗಿದೆ ಎಂದು ಕಂದಾಯ ಇಲಾಖೆ ವಿಪತ್ತು ನಿರ್ವಹಣೆ ಕಾರ್ಯದರ್ಶಿ ಅಮರ್ ನಾರಾಯಣ್ ಹೇಳಿದರು.ಪರಿಣಾ ಮಕಾರಿ ಯೋಜನೆ ಯನ್ನು ತಳ ಮಟ್ಟ ದಿಂದ ರೂಪಿಸ ಬೇಕೆಂಬ ಸದು ದ್ದೇಶ ದಿಂದ ಮೂರು ಜಿಲ್ಲೆ ಗಳ ಜಿಲ್ಲಾ ಧಿಕಾ ರಿಗಳ ಸಭೆ ಯನ್ನು ಇಂದು ಮಂಗ ಳೂರಿನ ಜಿಲ್ಲಾಧಿ ಕಾರಿ ಗಳ ಕಚೇರಿ ಯಲ್ಲಿಂದು ಆಯೋಜಿಸ ಲಾಗಿತ್ತು. ಸಭೆ ಯನ್ನು ಉದ್ದೇಶಿಸಿ ಮಾತ ನಾಡಿದ ಕಾರ್ಯ ದರ್ಶಿಗಳು, ಮೂರು ಜಿಲ್ಲೆಯ ಜಿಲ್ಲಾಧಿಕಾರಿಗಳಿಂದ ಆಯಾಯ ಜಿಲ್ಲೆಯಲ್ಲಿ ಎದುರಿಸಲಾದ ವಿಪತ್ತು ನಿರ್ವಹಣೆ ಹಾಗೂ ಯೋಜನೆಗಳು ರೂಪಿಸಿರುವ ಬಗ್ಗೆ ಮತ್ತು ಕ್ಷೇತ್ರ ಮಟ್ಟದಲ್ಲಿ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿಯನ್ನು ಪಡೆದರು.
ಈ ಯೋಜನೆಯಡಿ ಮೂರು ಜಿಲ್ಲೆಗಳಿಗೆ ಅಂದಾಜು 34.66 ಕೋಟಿ ರೂ.ಗಳು ಲಭ್ಯವಾಗಲಿದ್ದು ಶೇಕಡ 75 ಕೇಂದ್ರ ಮತ್ತು ರಾಜ್ಯ ಶೇಕಡ 25ರ ಅನುಪಾತದಂತೆ ನೀಡಲಿದೆ. ವಿಪತ್ತಿನ ಬಳಿಕದ ನಿರ್ವಹಣೆಗಿಂತ ವಿಪತ್ತನ್ನು ಎದುರಿಸಲು ಜಿಲ್ಲೆಗಳು ಅಪೇಕ್ಷಿಸುವ ಸೌಲಭ್ಯಗಳ ಕುರಿತೂ ಸಭೆಯಲ್ಲಿ ಚರ್ಚೆ ನಡೆಯಿತು. ವಿವಿಧ ಇಲಾಖೆಗಳು ಹಲವು ಯೋಜನೆಗಳ ಬಗ್ಗೆ ಪ್ರಮುಖವಾಗಿ ಸಮುದ್ರ ಕೊರತೆದ ಬಗ್ಗೆ ಕೈಗೊಂಡಿರುವ ಕ್ರಮಗಳು, ಕೇರಳ ಮಾದರಿಗಳ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು.ಮಳೆ ಗಾಲ ದಲ್ಲಿ ನೆರೆ ಯನ್ನು ಎದು ರಿಸಲು ದಕ್ಷಿಣ ಕನ್ನಡ ಜಿಲ್ಲೆಗೆ ದೋಣಿ ಮತ್ತು ಮರ ಕೊಯ್ಯುವ ಯಂತ್ರದ ಅಗತ್ಯ ವಿದೆ ಎಂದ ದ.ಕ. ಜಿಲ್ಲಾ ಧಿಕಾ ರಿಗಳು, ಮಳೆ ಗಾಲ ದಲ್ಲಿ ಮೀನು ಗಾರರು ಎದು ರಿಸುವ ಸಮಸ್ಯೆ ಗಳು ಮತ್ತು ಕೊಂಕಣ ರೈಲ್ವೇ ಮಾರ್ಗ ದಲ್ಲಾ ಗುವ ಭೂ ಕುಸಿ ತದ ಬಗ್ಗೆ ಸಭಾ ಧ್ಯಕ್ಷರ ಗಮನ ಸೆಳೆದರು. ಮೂರು ಜಿಲ್ಲೆಗಳಿಗೆ ಕ್ರಮವಾಗಿ ಮೂರು ದೋಣಿಗಳನ್ನು ಮಂಜೂರು ಮಾಡುವುದಾಗಿ ಹೇಳಿದ ಅಮರ್ ನಾರಾಯಣ್ ಅವರು, ವಿಪತ್ತು ನಿರ್ವಹಣಾ ವಿಭಾಗದಿಂದ 30 ಜಿಲ್ಲೆಗಳಿಗೂ ಅನುದಾನವನ್ನು ಬಿಡುಗಡೆ ಮಾಡಲಾಗಿದ್ದು, ಹಣದ ಸದುಪಯೋಗದ ಜೊತೆಗೆ ಅಗತ್ಯಗಳ ಪಟ್ಟಿಯನ್ನೂ ನೀಡಿ ಎಂದರು.
ಈ ಸಂಬಂಧ ಸಂಪನ್ಮೂಲ ವ್ಯಕ್ತಿಗಳು ಪವರ್ ಪಾಯಿಂಟ್ ಪ್ರಸಂಟೇಷನ್ ಮೂಲಕ ಯೋಜನೆಯ ಬಗ್ಗೆ ಮಾಹಿತಿ ನೀಡಿದರು. ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಸಂಭವಿಸುವ ಕೃತಕ ನೆರೆಯ ಬಗ್ಗೆಯೂ ಚರ್ಚೆ ನಡೆಯಿತು. ಕಳೆದ ಸಾಲಿನಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿ ಇಂತಹ ಅವಘಡಗಳ ಬಗ್ಗೆ ಕೈಗೊಂಡ ಮುನ್ನೆಚ್ಚರಿಕೆಯಿಂದಾಗಿ ಹೆಚ್ಚಿನ ಅವಘಡ ಸಂಭವಿಸಿಲ್ಲ. ಪ್ರಸಕ್ತ ಸಾಲಿನಲ್ಲಿ ಅವಘಡ ಸಂಭವಿಸಿದ ಪ್ರದೇಶಗಳಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವುದಾಗಿ ಪಾಲಿಕೆ ಆಯುಕ್ತರಾದ ಡಾ. ಹರೀಶ್ ಕುಮಾರ್ ಹೇಳಿದರು.
ವಿಪತ್ತು ನಿರ್ವಹಣಾ ವಿಭಾಗದಿಂದ ಅನುದಾನ ಬಿಡುಗಡೆ ಮಾಡುವ ಸಂದರ್ಭದಲ್ಲಿ ತುರ್ತು ರಕ್ಷಣಾ ಸಾಮಗ್ರಿ ಖರೀದಿಗೆ ಯಾವುದೇ ನಿಬಂಧನೆ ಇರುವುದಿಲ್ಲ. ಈ ಸಲಕರಣೆಗಳ ನಿರ್ವಹಣೆಗೆ ಕೆ ಎಸ್ ಆರ್ ಪಿ, ಸ್ಥಳಿಯ ಪೋಲಿಸ್ ಅಥವಾ ಗೃಹರಕ್ಷಕ ದಳದವರಿಗೆ ವಹಿಸಿಕೊಡಬಹುದಾಗಿದ್ದು, ನಿರ್ಧಾರ ಜಿಲ್ಲಾಧಿಕಾರಿಗಳ ವಿವೇಚನೆಗೆ ಬಿಟ್ಟಿದೆ ಎಂದರು.ಸಭೆ ಯಲ್ಲಿ ಉಪ ಸ್ಥಿತ ರಿದ್ದ ನೌಕಾ ದಳದ ಕಮಾಂ ಡೆಂಟ್ ಅರಣ್ ಅವರು ಮಾತ ನಾಡಿ, ಮಳೆ ಗಾಲ ದಲ್ಲಿ ಸಮುದ್ರ ದಲ್ಲಿ ಹಾಗೂ ನದಿ ಗಳಲ್ಲಿ ಸಂಭ ವಿಸುವ ಜೀವ ಹಾನಿ ಮತ್ತು ಆಸ್ತಿ ನಾಶದ ಬಗ್ಗೆ ಹಾಗೂ ಅದನ್ನು ನಿಭಾ ಯಿಸುವ ಬಗ್ಗೆ ಯೂ ಮಾಹಿತಿ ನೀಡಿ ದರು. ಮೀನು ಗಾರಿಕಾ ಇಲಾಖೆ ಉಪ ನಿರ್ದೇ ಶಕರು ಮಳೆ ಗಾಲ ದಲ್ಲಿ ಸಂವ ಹನದ ಕೊರತೆ ಯಿಂದಾ ಗುವ ವಿಳಂ ಬದ ಕುರಿತು ಹಾಗೂ ಹೈ ಪವರ್ ಕಮ್ಯು ನಿಕೇಷನ್ ಫ್ರೀ ಕೆನ್ಸಿಯ ಅಗತ್ಯ ವನ್ನು ಪ್ರತಿ ಪಾದಿಸಿದರು.
ಉಡುಪಿ ಜಿಲ್ಲಾಧಿಕಾರಿ ಡಾ ಎಂ ಟಿ ರೇಜು ಅವರು ಮಾತನಾಡಿ, ವಿಪತ್ತು ನಿರ್ವಹಣೆ ಸಂಬಂಧ ಸಮಗ್ರ ವರದಿ ತಯಾರಿಕೆ ಸಂದರ್ಭದಲ್ಲಿ ತಾವು ಎದುರಿಸಿದ ಸವಾಲುಗಳನ್ನು ಸಭಾಧ್ಯಕ್ಷರ ಗಮನಕ್ಕೆ ತಂದರಲ್ಲದೆ, ಈ ವರದಿಯ ಸಂದರ್ಭದಲ್ಲಿ ಅತ್ಯಂತ ಸೂಕ್ಷ್ಮ ವಿಷಯಗಳ ಬಗ್ಗೆಯೂ ಮಾಹಿತಿ ಅಗತ್ಯ ಎಂದರು.ಉತ್ತರ ಕನ್ನಡ ದಲ್ಲಾ ಗುವ ವಿಪತ್ತು ಗಳ ಮಾಹಿ ತಿಯನ್ನು ಅಲ್ಲಿನ ಜಿಲ್ಲಾ ಧಿಕಾರಿ ಶ್ರೀ ಮತಿ ಇಮ್ಕಾಂ ಗ್ಲಾ ಜಮೀರ್ ಅವರು ನೀಡಿ ದರು. ಯೋಜನೆ ಯನ್ನು ರೂಪಿ ಸುವಾಗ ಸ್ಥಳೀ ಯರ ಪಾಲ್ಗೊ ಳ್ಳುವಿಕೆ ಹಾಗೂ ಅವರ ಅನು ಭವ ವನ್ನು ದಾಖ ಲಿಸಿ ಎಂದು ಅಮರ್ ನಾರಾಯಣ್ ಹೇಳಿದರು. ಒಂದು ತಿಂಗಳೊಳಗೆ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳು ಸಮಗ್ರ ಮಾಹಿತಿಯನ್ನು ನೀಡುವಂತೆ ಅವರು ಹೇಳಿದರು.
ಉಡುಪಿ ಸಿಇಒ ಪ್ರಭಾಕರ ಶರ್ಮಾ, ದಕ್ಷಿಣ ಕನ್ನಡ ಜಿಲ್ಲೆಯ ಅಪರ ಜಿಲ್ಲಾಧಿಕಾರಿ ಕೆ ಎ ದಯಾನಂದ ಅವರನ್ನೊಳಗೊಂಡಂತೆ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.