Saturday, March 31, 2012

ಶ್ರೀಸಾಮಾನ್ಯನಿಗೆ 'ಸಕಾಲ' ದಿ0ದ ನೆಮ್ಮದಿ

ಮಂಗಳೂರು,ಮಾರ್ಚ್.31:ಕರ್ನಾಟಕ ಸರ್ಕಾರದ ಮಹತ್ವಾಕಾ0ಕ್ಷಿ ಯೋಜನೆ ಕರ್ನಾಟಕ ನಾಗರೀಕರಿಗೆ ಸೇವೆಗಳ ಖಾತರಿ ಅಧಿನಿಯಮ 2011 ರಿ0ದಾಗಿ ರಾಜ್ಯದ ಶ್ರೀಸಾಮಾನ್ಯ ಇನ್ನು ತನ್ನ ಕೆಲಸಕಾರ್ಯಗಳಿಗಾಗಿ ಸಮಯ, ಹಣವನ್ನು ಅನಾವಶ್ಯವಾಗಿ ವೆಚ್ಚ ಮಾಡದೆ ಸರ್ಕಾರಿ ಕಛೇರಿಗಳ ಕೆಲಸಗಳನ್ನು ಸಕಾಲ ನೆರವಿನಿ0ದ ಸೂಕ್ತ ಸಮಯದೊಳಗೆ ಪಡೆಯಬಹುದಾಗಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಮಾಹಿತಿ ನೀಡಲು ಬೀದಿ ನಾಟಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ರಾಜ್ಯ ವಾರ್ತಾ ಇಲಾಖೆ ವತಿಯಿ0ದ 'ಸಕಾಲ' ಕರ್ನಾಟಕ ನಾಗರೀಕ ಸೇವೆಗಳ ಅಧಿನಿಯಮ 2011 ರ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸುವ ಬೀದಿ ನಾಟಕ ಪ್ರದರ್ಶನಕ್ಕೆ ಪುತ್ತೂರು ತಾಲ್ಲೂಕು ಕಬಕ ಗ್ರಾಮಪ0ಚಾಯತ್ ಅಧ್ಯಕ್ಷರಾದ ಕೆ ಶಾಬಾಹು ಮತ್ತು ನರಿಮೊಗರು ಗ್ರಾಮ ಪ0ಚಾಯತ್ ಅಧ್ಯಕ್ಷೆ ಶ್ರೀಮತಿ ನಳಿನಿ ಮು0ಡೋಡಿ ಶುಕ್ರವಾರದಂದು ಚಾಲನೆ ನೀಡಿದರು.ಉಪ್ಪಿನ0ಗಡಿ ಗ್ರಾಮ ಪ0ಚಾಯತ್ ಕಾರ್ಯ ದರ್ಶಿ ಜೆರಾಲ್ಡ್ ಮಸ್ಕರೇನಸ್ ಉಪ್ಪಿನ0ಗಡಿ ಬಸ್ ನಿಲ್ದಾಣದಲ್ಲಿ ಸಕಾಲ ಬೀದಿನಾಟಕಕ್ಕೆ ಚಾಲನೆ ನೀಡಿದರು.
ಕಬಕ ಗ್ರಾಮದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಕಬಕ ಗ್ರಾಮ ಪ0ಚಾಯತ್ ಸಧಸ್ಯರಾದ ಶ್ರೀಮತಿ ಸು0ದರಿ ಗಿರಿದರ್, ವಿಠಲಗೌಡ, ಬಾಲಕೃಷ್ಣ ಗೌಡ, ಮತ್ತು ಸುಬ್ಬಣ್ಣ, ಗ್ರಾಮ ಪ0ಚಾಯತ್ ಅಭಿವೃದ್ದಿ ಅಧಿಕಾರಿ ದಯಾನ0ದ ಗೌಡ, ನರಿಮೊಗರು ಗ್ರಾಮಪ0ಚಾಯತ್ ಅಭಿವೃದ್ದಿ ಅಧಿಕಾರಿ ಸುಬಾಷ್ ಚ0ದ್ರ. ಹಾಗು ವಾರ್ತಾ ಸಹಾಯಕರಾದ ಬಿ ಆರ್ ಚ0ದ್ರಶೇಖರ್ ಆಝಾದ್ ಉಪಸ್ಥಿತರಿದ್ದರು. ಬೆ0ಗಳೂರಿನ ಸಿರಿವಾರ ಕಲ್ಚರಲ್ ಅಕಾಡೆಮಿ ಕಲಾವಿದರಿ0ದ ಬೀದಿನಾಟಕ ಪ್ರದರ್ಶಿಸಲಾಯಿತು. ಏಪ್ರಿಲ್ 1 ರಂದು ಪುತ್ತೂರು ತಾಲ್ಲೂಕಿನ ರಾಮಕು0ಜ, ಕಡಬ ಮತ್ತು ಬಿಳಿನೆಲೆ ಗ್ರಾಮಪ0ಚಾಯತ್ ವ್ಯಾಪ್ತಿಯಲ್ಲಿ 'ಸಕಾಲ' ಜಾಗೃತಿ ಬೀದಿನಾಟಕ ಪ್ರದರ್ಶಿಸಲಾಗುವುದು.