Thursday, March 15, 2012

ಮಹಿಳಾ ದೌರ್ಜನ್ಯ ನಿವಾರಣಾ ಸಮಿತಿ ಸದಾ ಕಾರ್ಯತತ್ಪರರಾಗಬೇಕು:ಡಾ.ವಿಜಯಪ್ರಕಾಶ್

ಮಂಗಳೂರು,ಮಾರ್ಚ್.15:ದೂರು ನಿವಾರಣಾ ಸಮಿತಿ ಸಂಘಟನೆಯು ನೆಪ ಮಾತ್ರವಾಗಿರದೆ ಸದಾ ಕಾರ್ಯ ಚಟುವಟಿಕೆಯಿಂದಿರಬೇಕು. ನಾಲ್ಕು ವರ್ಷಗಳಿಂದ ಯಾವುದೇ ದೂರು ದಾಖಲಾಗಿಲ್ಲವೆಂದರೆ, ದೌರ್ಜನ್ಯವಿಲ್ಲ ಎಂಬ ಕಲ್ಪನೆ ಸಲ್ಲದು, ಬದಲಾಗಿ ನಿವಾರಣಾ ಸಮಿತಿಗೆ ದೂರು ಬರುತ್ತಿಲ್ಲ ಎಂಬ ಅಭಿಪ್ರಾಯವನ್ನು ಮಾಡಬಹುದಾಗಿದೆಯೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿವಾಹಣಾಧಿಕಾರಿ ಡಾ.ಕೆ.ಎನ್.ವಿಜಯಪ್ರಕಾಶ್ ತಿಳಿಸಿದ್ದಾರೆ.ಇಂದು ದ.ಕ.ಜಿಲ್ಲಾ ಪಂಚಾ ಯತ್ ನೇತ್ರಾ ವತಿ ಸಭಾಂ ಗಣ ದಲ್ಲಿ ನಡೆದ `` ಉದ್ಯೋ ಗಸ್ಥ ಮಹಿಳೆ ಯರಿಗೆ ಕೆಲ ಸದ ಸ್ಥಳ ದಲ್ಲಿ ಲೈಂಗಿಕ ಕಿರು ಕುಳ ದೌ ರ್ಜನ್ಯ : ದೂರು ನಿವಾ ರಣೆ ಕುರಿತು ಮಾಹಿತಿ ಶಿಬಿರ ದ ಉದ್ಘಾಟ ನೆಯನ್ನು ಮಾಡಿ ಅವರು ಮಾತನಾಡುತ್ತಿದ್ದರು.ಒಂದು ಹೆಕ್ಟೇರ್ ಭೂಮಿಯಲ್ಲಿ ವಾರ್ಷಿಕವಾಗಿ ಮಹಿಳೆಯರ ದುಡಿಮೆ ಮಹನೀಯರಿಗಿಂತ ಮೂರು ಪಟ್ಟು ಹೆಚ್ಚಾಗಿರುತ್ತದೆ. ಉದ್ಯೋಗಸ್ಥ ಮಹಿಳೆಯರು ಆರ್ಥಿಕ ದೃಢತೆ ಹೊಂದಿದ್ದು, ಅವರಿಗೆ ದೊರಕುವ ಸ್ಥಾನಮಾನದ ಹಿನ್ನಲೆಯಲ್ಲಿ ,ವಿವಿಧ ಆಯಾಮಗಳಲ್ಲಿ ಚಿಂತನೆ ಮಾಡಿದರೆ, ಅವರು ದುಡಿಯುವ ಪರಿಸರ ಸುರಕ್ಷಿತವಾಗಿರುವುದು ಆವಶ್ಯವೆಂದು ನುಡಿದರು.ಅಧ್ಯಕ್ಷ ತೆಯನ್ನು ವಹಿ ಸಿದ್ದ ಜಿಲ್ಲಾ ಪಂಚಾ ಯತ್ ಅಧ್ಯಕ್ಷೆ ಶ್ರೀ ಮತಿ ಕೆ.ಟಿ. ಶೈಲಜಾ ಭಟ್ ಅವರು ಮಾತ ನಾಡಿ ಉದ್ಯೋ ಗಸ್ಥ ಮಹಿಳೆ ಯರಿಗೆ ಮಾತ್ರ ವಲ್ಲದೆ ಎಲ್ಲಾ ಮಹಿಳೆ ಯರಿಗೂ ದೌರ್ಜ ನ್ಯದ ಕುರಿತು ಮಾಹಿತಿ ಶಿಬಿರ ಆವಶ್ಯ ವೆಂದು ನುಡಿ ದರು.ಶಾಲಾ ವಿದ್ಯಾ ರ್ಥಿನಿ ಯರ ಮೇಲೂ ದೌರ್ಜ ನ್ಯಗಳು ನಡೆ ಯುತ್ತಿದ್ದು, ಎಲ್ಲಾ ಮಹಿಳೆ ಯರು ಎಲ್ಲಾ ಪರಿಸರದಲ್ಲೂ ದೌರ್ಜನ್ಯವನ್ನು ವಿರೋಧಿಸುವಂತಹ ಮನೋಭಾವವನ್ನು ಬೆಳೆಸಿಕೊಳ್ಳಬೇಕೆಂದು ತಿಳಿಸಿದರು. ಈ ಮಾಹಿತಿ ಶಿಬಿರವು ಉದ್ಯೋಗಸ್ಥ ಮಹಿಳೆಯರನ್ನು ಎಚ್ಚರಿಸುವಂತಹ ಕಾರ್ಯಕ್ರಮವಾಗಿದೆ ಎಂದರು.
ಸಮಾರಂಭದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ರೋಶನಿ ನಿಲಯದ ಪ್ರೊಫೆಸರ್ ಶ್ರೀಮತಿ ವಿನಿತಾ ರೈ ಮತ್ತು ನ್ಯಾಯವಾದಿ ಪಿ.ಪಿ.ಹೆಗ್ಡೆ ಭಾಗವಹಿಸಿ ಮಾತನಾಡಿದರು. ಡೀಡ್ಸ್ ಸಂಸ್ಥೆಯ ಡಾ. ಮರ್ಲಿನ್ ಮಾರ್ಟಿಸ್ ಪ್ರಾಸ್ತವಿಕ ಭಾಷಣ ಮಾಡಿದರು.ಶಿಬಿರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರಾದ ಶ್ರೀಮತಿ ಶಕುಂತಳಾ ಎಲ್ಲರನ್ನು ಸ್ವಾಗತಿಸಿದರು.