Thursday, March 8, 2012

ಮಹಿಳೆಯಿಂದ ಮಕ್ಕಳಿಗೆ ಉತ್ತಮ ಸಂಸ್ಕಾರ:ಶೈಲಜಾ ಭಟ್

ಮಂಗಳೂರು,ಮಾರ್ಚ್.08:ಆರೋಗ್ಯವಂತ ಸಮಾಜದ ನಿರ್ಮಾಣಕ್ಕಾಗಿ ಮಹಿಳೆಯರು ತಮ್ಮ ಮಕ್ಕಳಲ್ಲಿ ಉತ್ತಮ ಸಂಸ್ಕಾರಗಳನ್ನು ಬೆಳೆಸಬೇಕೆಂದು ದ.ಕ.ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಶೈಲಜಾ ಭಟ್ ಅವರು ಕರೆ ನೀಡಿದ್ದಾರೆ.

ಅವರು ದಕ್ಷಿಣ ಕನ್ನಡ ಜಿಲ್ಲಾ ಪಂಚಾ ಯತ್ ಮಹಿಳಾ ಮತ್ತು ಮಕ್ಕಳ ಅಭಿ ವೃದ್ಧಿ ಇಲಾಖೆ,ಜಿಲ್ಲಾ ಕಾನೂನು ಸೇವೆ ಗಳ ಪ್ರಾಧಿ ಕಾರ, ಮಂಗ ಳೂರು ಹಾಗೂ ತಾಲೂಕು ಸ್ತ್ರೀ ಶಕ್ತಿ ಗುಂಪು ಗಳ ಒಕ್ಕೂ ಟಗಳು ,ಜಿಲ್ಲಾ ಮಹಿಳಾ ಮಂಡ ಲಗಳ ಒಕ್ಕೂಟ(ರಿ) ಮಂಗ ಳೂರು ಹಾಗೂ ಕರ್ನಾ ಟಕ ರಾಜ್ಯ ಮಹಿಳಾ ಆ ಯೋಗ, ಬೆಂಗ ಳೂರು ಇವರ ವತಿ ಯಿಂದ ಇಂದು ಮಂಗ ಳೂರು ಪುರ ಭವನದಲ್ಲಿ ಎರ್ಪಡಿಸಿದ್ದ ವಿಶ್ವ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿ ಗಳಾಗಿ ಆಗ ಮಿಸಿದ್ದ ಪ್ರಧಾನ ನ್ಯಾಯಿಕ ದಂಡಾ ಧಿಕಾ ರಿಗ ಳಾದ ಆರ್. ವಿ.ಪಾಟೀಲ್ ಅವರು ಮಾತ ನಾಡಿ ಇಂದು ಮಹಿಳೆ ಅಬಲೆ ಯಲ್ಲ ಸಬಲೆ ಭಾರತ ದೇಶ ದಲ್ಲಿ ಮಹಿಳೆ ಯಾವತ್ತೂ ಕುಟುಂ ಬದ ಪ್ರಮುಖ ಸದಸ್ಯೆ ಯಾಗಿ ತನ್ನ ಜೀವನ ರೂಪಿಸಿ ದವಳು.ಹಾಗಾಗಿ ನಮ್ಮ ದೇಶ ದಲ್ಲಿ ಮಹಿಳೆ ಪುರುಷ ನಷ್ಟೇ ಸಮಾನ ವಾದ ಜೀವನ ಸಾಗಿ ಸುತ್ತಿ ದ್ದಾಳೆ. ನಮ್ಮ ದೇಶ ದಲ್ಲಿ ಮಹಿ ಳೆಗೆ ಶಾಸನಾತ್ಮಕ ರಕ್ಷಣೆ ಇದೆ. ಮಹಿಳೆ ಇಂತಹ ಕಾರ್ಯಗಳನ್ನೇ ಮಾಡಬೇಕು ಎಂಬ ಶಾಸನ ಬದ್ದ ಕಟ್ಟುಪಾಡುಗಳಿಲ್ಲ. ಆದರೂ ಮಹಿಳೆಗೆ ಒಂದು ರೀತಿಯ ಭಾವನಾತ್ಮಕ ಭದ್ರತೆಯ ಕೊರತೆ ಕಾಡುತ್ತಿದೆ. ಆದ್ದರಿಂದ ಸಮಾಜ ಮಹಿಳೆಯನ್ನು ನೋಡುವ ಮನೋಭಾವ ಬದಲಾಗಬೇಕು ಎಂದರು.
ರಾಜ್ಯ ಬಾಲಭವನ ಅಧ್ಯಕ್ಷೆ ಶ್ರೀಮತಿ ಸುಲೋಚನಾ ಭಟ್ ಅವರು ಮಾತನಾಡಿ ಸಂಸಾರದ ಬಂಡಿ ಸುಗಮವಾಗಿ ಸಾಗಲು ಮಹಿಳೆ ತನಗೆ ಸಿಕ್ಕಿರುವ ಸ್ವಾತಂತ್ರ್ಯವನ್ನು ಸ್ವೇಚ್ಛಾಚಾರಕ್ಕೆ ಬಳಸದೆ ಗಂಡಹೆಂಡತಿ ಅನ್ಯೋನ್ಯತೆಯಿಂದ ಒಂದಾಗಿ ಬಾಳಬೇಕೆಂದರು.
ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಬಿ.ನಾಗರಾಜ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಧನಲಕ್ಷ್ಮಿ ಜನಾರ್ಧನ ಗೌಡ, ಮಹಾನಗರಪಾಲಿಕೆ ಉಪಮೇಯರ್ ಶ್ರೀಮತಿ ಅಮಿತ್ ಕಲಾ,ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಕೆ.ಎನ್.ವಿಜಯಪ್ರಕಾಶ್ ಮುಂತಾದವರು ಭಾಗವಹಿಸಿದ್ದರು.
ಅತ್ಯುತ್ತಮ ಮಹಿಳಾ ಮಂಡಲಗಳಿಗೆ ಜಿಲ್ಲಾ ಮಟ್ಟದ ಪುರಸ್ಕಾರಗಳನ್ನು ನೀಡಲಾಯಿತು.