30129 ವಿದ್ಯಾರ್ಥಿಗಳಲ್ಲಿ 25736 ವಿದ್ಯಾರ್ಥಿಗಳು ಫ್ರೆಶರ್ಸ್,
ಖಾಸಗಿ ನೋಂದಾಯಿತ 2644 ಮತ್ತು ಪುನರಾವರ್ತಿತ 1749 ವಿದ್ಯಾರ್ಥಿಗಳಿದ್ದಾರೆ. ಹಿರಿಯ ಪ್ರಾಚಾರ್ಯರುಗಳನ್ನು ಮುಖ್ಯ ಅಧೀಕ್ಷಕರನ್ನಾಗಿ ನೇಮಿಸಲಾಗಿದೆ. ಪರೀಕ್ಷೆಗಳನ್ನು ಸುಸೂತ್ರವಾಗಿ ನಡೆಸಲು ಪದವಿಪೂರ್ವ ಶಿಕ್ಷಣ ಇಲಾಖೆ ಕ್ರಮಕೈಗೊಂಡಿದೆ. ಜಿಲ್ಲಾ ಜಾಗೃತದಳ ಮತ್ತು ತಾಲೂಕು ಜಾಗೃತದಳಗಳನ್ನು ಪದವಿಪೂರ್ವ ಶಿಕ್ಷಣ ಇಲಾಖೆ ನೇಮಕ ಮಾಡಿದ್ದು, ಜಿಲ್ಲಾಧಿಕಾರಿಗಳು ಜಿಲ್ಲಾ ಮಟ್ಟದ ಮತ್ತು ತಾಲೂಕು ಮಟ್ಟದ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಿರುತ್ತಾರೆ.
ಪರೀಕ್ಷೆ ನಡೆಯುವ ಕೇಂದ್ರಗಳಿಂದ 200 ಮೀಟರ್ ವ್ಯಾಪ್ತಿಗೆ ಸೆಕ್ಷನ್ 144 ಜಾರಿಗೊಳಿಸಲಾಗಿದ್ದು, ಈ ವ್ಯಾಪ್ತಿಯಲ್ಲಿ ಜೆರಾಕ್ಸ್ ಅಂಗಡಿಗಳನ್ನು ಮುಚ್ಚುವ ಬಗ್ಗೆ ಆದೇಶ ನೀಡಲಾಗುವುದು. ಪರೀಕ್ಷೆಗಳು ಸುಸೂತ್ರವಾಗಿ ನಡೆಯಲು ಎಲ್ಲರ ಸಹಕಾರವನ್ನು ಕೋರಲಾಗಿದೆ.