Monday, May 6, 2013

ಮಂಗಳೂರು ನಗರ ಕೆನರಾ ಕಾಲೇಜಿನಲ್ಲಿ ಮತ ಎಣಿಕೆ


ಮಂಗಳೂರು,ಮೇ.06:- ದಕ್ಷಿಣಕನ್ನಡ ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಕಾರ್ಯವು ನಗರದ ಕೊಡಿಯಾಲ್ ಬೈಲ್ ನಲ್ಲಿರುವ ಕೆನರಾ ಪದವಿ ಪೂರ್ವ ಮತ್ತು ಕೆನರಾ ಪದವಿ ಕಾಲೇಜಿನಲ್ಲಿ ಮೇ 8ರಂದು ಬೆಳಿಗ್ಗೆ 8.00 ಗಂಟೆಗೆ ಆರಂಭವಾಗಲಿದೆ.
ಕೆನರಾ ಪದವಿ ಪೂರ್ವ ಕಾಲೇಜಿ ನಲ್ಲಿ ಬೆಳ್ತಂ ಗಡಿ,ಮೂಡ ಬಿದ್ರಿ, ಮಂಗ ಳೂರು ನಗರ ದಕ್ಷಿಣ,ಮಂಗ ಳೂರು ನಗರ ಉತ್ತರ,ಮಂಗ ಳೂರು ಹಾಗೂ ಬಂಟ್ವಾಳ ಕ್ಷೇತ್ರಗಳ ಮತಗಳ ಎಣಿಕೆ ಕಾರ್ಯ ನಡೆಯಲಿದೆ.  ಪುತ್ತೂರು ಮತ್ತು ಸುಳ್ಯ ಕ್ಷೇತ್ರ ಗಳ ಮತಗಳ ಎಣಿಕೆ ಕಾರ್ಯ ಕೆನರಾ ಪದವಿ ಕಾಲೇಜಿ ನಲ್ಲಿ ನಡೆಯ ಲಿದೆ.
ಪ್ರತೀ ಕ್ಷೇತ್ರಕ್ಕೂ 14 ಮೇಜು ಗಳಿದ್ದು ಒಂದೊಂದು ಮೇಜಿಗೆ ಒಬ್ಬರು ಸೂಪರ್ ವೈಸರ್, ಒಬ್ಬರು ಎಣಿಕೆ ಸಹಾಯಕರು,ಒಬ್ಬರು ಮೈಕ್ರೋ ವೀಕ್ಷಕ ಹಾಗೂ ಡಿ ಗ್ರೂಪ್ ನೌಕರರನ್ನು ನಿಯೋಜಿಸಲಾಗಿದೆ.ಒಟ್ಟು 132 ಸೂಪರ್ ವೈಸರ್ ಗಳು,131 ಎಣಿಕಾ ಸಹಾಯಕರು ,121 ಡಿ  ಗ್ರೂಪ್ ನೌಕರರು ಹಾಗೂ 129 ಮೈಕ್ರೋ ವೀಕ್ಷಕರು ಸೇರಿದಂತೆ 513 ಸಿಬ್ಬಂದಿಗಳು ಎಣಿಕೆ ಕಾರ್ಯದಲ್ಲಿ ಭಾಗವಹಿಸುವರು. ಇವರಲ್ಲದೆ 82 ಸಿಬ್ಬಂದಿಗೆ ಭದ್ರತಾ ಕೊಠಡಿ ಸೀಲಿಂಗ್ ಜವಾಬ್ದಾರಿ,ಅನ್ಯ ಕೆಲಸ ಕಾರ್ಯಗಳಿಗೆ 23,ಟ್ಯಾಬುಲೇಶನ್ 30 ಸೇರಿದಂತೆ ಒಟ್ಟಿಗೆ ಸುಮಾರು 820 ಸಿಬ್ಬಂದಿಯನ್ನು ಮತಗಳ ಎಣಿಕಾ ಕಾರ್ಯಕ್ಕೆ ನಿಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹರ್ಷಗುಪ್ತಾ ತಿಳಿಸಿದ್ದಾರೆ.
 (ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮತ ಎಣಿಕಾ ಕಾರ್ಯಕ್ಕೆ ನಿಯೋಜಿಸಿರುವ ಸಿಬ್ಬಂದಿಗಳಿಗೆ ಕೊನೇ ಕ್ಷಣದ ತರಬೇತಿಯನ್ನು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳಾದ ಹರ್ಷಗುಪ್ತಾ ,ಅಪರ ಜಿಲ್ಲಾಧಿಕಾರಿಗಳಾದ ದಯಾನಂದ ಮತ್ತು ಮಹಾನಗರಪಾಲಿಕೆಯ ಆಯುಕ್ತರಾದ  ಹರೀಶ್ ಕುಮಾರ್  ನಡೆಸಿಕೊಟ್ಟರು)