Saturday, February 23, 2013

ಮಾರ್ಚ್ 19ರಂದು ಜನನ ಪೂರ್ವ ಲಿಂಗ ನಿರ್ಣಯ ಕಾರ್ಯಾಗಾರ

ಮಂಗಳೂರು, ಫೆಬ್ರವರಿ.23:- ಜನನ ಪೂರ್ವ ಲಿಂಗ ನಿರ್ಣಯ ತಡೆ ಕಾಯಿದೆ 1994ರ ಅನ್ವಯ ನೋಂದಾವಣೆಗೊಂಡಿರುವ ವೈದ್ಯಕೀಯ ಸಂಸ್ಥೆಗಳವರಿಗಾಗಿ 2013 ಮಾರ್ಚ್ 19ರಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಛೇರಿಯಲ್ಲಿ ಒಂದು ದಿನದ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ಓ.ಆರ್.ಶ್ರೀರಂಗಪ್ಪ ಅವರು ತಿಳಿಸಿದ್ದಾರೆ.
     ಅವರು ಇಂದು ತಮ್ಮ ಕಛೇರಿಯಲ್ಲಿ ನಡೆದ ಜನನ ಪೂರ್ವ ಲಿಂಗ ನಿರ್ಣಯ (ನಿರ್ಬಂಧ ಮತ್ತು ದುರ್ಬಳಕೆ) ತಡೆ ಕಾಯಿದೆ 1994ರ ಜಿಲ್ಲಾ ಮಟ್ಟದ ಸಲಹಾ ಸಮಿತಿಯ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
     2012-13 ನೇ ಸಾಲಿನಲ್ಲಿ ಹೊಸದಾಗಿ ನೋಂದಣಿಯಾದ ಸಂಸ್ಥೆಗಳೆಂದರೆ ಫಳ್ನೀರ್ ನ ಎ.ಅರ್.ಎಂ.ಸಿ ಐ.ವಿ.ಎಫ್, ಆನಂದ್ ಡಯಾಗ್ನಸ್ಟಿಕ್, ಮೌಂಟ್ ರೋಸರಿ ಆಸ್ಪತ್ರೆ ಮತ್ತು ಡಾ||ಅಶೋಕ್ ಜಿ.ಕೆ.
     ನವೀಕರಣಕ್ಕೆ ಅರ್ಜಿ ಸಲ್ಲಿಸಿದ್ದು ಸ್ಥಳ ತನಿಖೆ ಬಾಕಿ ಇರುವ ಸಂಖ್ಯೆ 11, ಒಟ್ಟಾರೆ ಜಿಲ್ಲೆಯಲ್ಲಿ 161 ಸಂಸ್ಥೆಗಳು ಜನನ ಪೂರ್ವ ಲಿಂಗ ನಿರ್ಣಯ ತಡೆ ಕಾಯ್ದೆ 1994ರ ಅಡಿ ನೋಂದಾವಣೆಗೊಂಡಿವೆ. ನವೀಕರಣ ಮುಗಿದು ಇನ್ನೂ ನವೀಕರಣ ಮಾಡದ ಸಂಸ್ಥೆಗಳು ಕೂಡಲೆ ನವೀಕರಣಗೊಳಿಸಬೇಕು ತಪ್ಪಿದಲ್ಲಿ ಅಂತಹವರ ವಿರುದ್ದ ಕಾನೂನಿನ ರೀತಿ ದಂಡ ವಿಧಿಸಲಾಗುವುದೆಂದು ಅವರು ತಿಳಿಸಿದರು.ಸಭೆಯಲ್ಲಿ ಅರ್,ಸಿ.ಹೆಚ್.ಅಧಿಕಾರಿ ಡಾ||ರುಕ್ಮಿಣಿ, ಮುಂತಾದವರು ಹಾಜರಿದ್ದರು.