Tuesday, February 5, 2013

' ಸಕಾಲ' ಜಿಲ್ಲೆಯಲ್ಲಿ 5.80 ಲಕ್ಷ ಅರ್ಜಿಗಳ ವಿಲೆ


ಮಂಗಳೂರು, ಫೆಬ್ರವರಿ.05:-ಸಾಮಾನ್ಯ ನಾಗರೀಕರಿಗೆ ಸೂಕ್ತ ಸಮಯದಲ್ಲಿ ಕೆಲಸ ಕಾರ್ಯ ಒದಗಿಸುವ  ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಕಾಯ್ದೆ, ಸಕಾಲ.ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕಳೆದ ಮಾರ್ಚ್  1 ರಿಂದ ಫೆಭ್ರವರಿ 02,2013  ರ ವರೆಗೆ ಒಟ್ಟು 5,93,749 ಅರ್ಜಿಗಳನ್ನು ಸ್ವೀಕರಿಸಿ 5,80,752 ಅರ್ಜಿಗಳನ್ನು ವಿಲೇ ಮಾಡುವ ಮೂಲಕ ಶೇಕಡಾ 97.98 ಸಾಧನೆ ಮಾಡಲಾಗಿದೆ.
        ಈ ಮೇಲ್ಕಂಡ ಅವಧಿಯಲ್ಲಿ  ಕಂದಾಯ ಇಲಾಖೆಯಲ್ಲಿ ಅತೀ ಹೆಚ್ಚು ಅರ್ಜಿಗಳನ್ನು ಅಂದರೆ 1,53,791 ಸ್ವೀಕರಿಸಿ,1,51,773 ಅರ್ಜಿಗಳನ್ನು ವಿಲೇ ಮಾಡಿದ್ದರೆ,ಸಾರಿಗೆ ಇಲಾಖೆಯಲ್ಲಿ 1,53,539 ಅರ್ಜಿಗಳನ್ನು ಸ್ವೀಕರಿಸಿ 1,49,992 ಅರ್ಜಿಗಳನ್ನು  ಇತ್ಯರ್ಥಪಡಿಸುವ ಮೂಲಕ 2ನೇ ಸ್ಥಾನದಲ್ಲಿದೆ.
       ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯಲ್ಲಿ 99,268 ಅರ್ಜಿಗಳನ್ನು ಸ್ವೀಕರಿಸಿ 99,104 ಅರ್ಜಿದಾರರಿಗೆ ಸಮರ್ಪಕ ಸಮಜಾಯಿಸಿ ದೊರಕಿಸಲಾಗಿದೆ. ಇತರೆ ಇಲಾಖೆಗಳಲ್ಲಿ ಅಂದರೆ ನಗರಾಭಿವೃದ್ಧಿ ಇಲಾಖೆಯಲ್ಲಿ 43,173 ಅರ್ಜಿ ಸ್ವೀಕರಿಸಿ 42,368 ವಿಲೇ,ಗೃಹ ಇಲಾಖೆಯಲ್ಲಿ 45,740 ಅರ್ಜಿ ಸ್ವೀಕೃತ 42,931 ವಿಲೇ,ಶಿಕ್ಷಣ ಇಲಾಖೆಯಲ್ಲಿ 170 ಸ್ವೀಕೃತ 90 ವಿಲೇ,ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ 6,143 ಅರ್ಜಿ ಸ್ವೀಕೃತ  6,137 ವಿಲೇ,ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್  ಇಲಾಖೆಯಲ್ಲಿ 10,746 ಸ್ವೀಕೃತ 9,994 ಅರ್ಜಿ ವಿಲೇ,ಹಣಕಾಸು ಇಲಾಖೆ 69,009 ಸ್ವೀಕೃತ 67,397 ಅರ್ಜಿ ವಿಲೇ, ಕಾರ್ಮಿಕ ಇಲಾಖೆ 6062 ಸ್ವೀಕೃತ 5891 ವಿಲೇ ,ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ 3944 ಸ್ವೀಕೃತ 3944 ವಿಲೇ (ಶೇಕಡಾ ನೂರು ಸಾಧನೆ)ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ 1099 ಸ್ವೀಕೃತ 1099 ಶೇ.100 ವಿಲೇ ಅರ್ಜಿಗಳನ್ನು ಇತ್ಯರ್ಥ ಮಾಡಲಾಗಿದೆ.