Saturday, February 2, 2013

ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ:ಕಾನೂನು ಪಾಲಿಸದ ಉತ್ಪಾದಕರ ಪರವಾನಿಗೆ ರದ್ದು


ಮಂಗಳೂರು, ಫೆಬ್ರವರಿ.02: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದ ಕಾನೂನನ್ನು ಸಮರ್ಪಕವಾಗಿ ಜಾರಿಗೊಳಿಸುವಲ್ಲಿ  ಪ್ಲಾಸ್ಟಿಕ್ ಉತ್ಪಾದಕರ ಸಂಘವು ಪಾಲಿಕೆ ಜೊತೆ ಕೈಜೋಡಿಸಿದ್ದು, ಕಾನೂನು ಪಾಲಿಸದ ಉತ್ಪಾದಕರ ಪರವಾನಿಗೆಯನ್ನು ರದ್ದು  ಮಾಡಲು ಕ್ರಮ ಕೈಗೊಳ್ಳುವುದಾಗಿ ಪಾಲಿಕೆ ಆಯುಕ್ತರಾದ ಡಾ. ಹರೀಶ್ ಕುಮಾರ್ ಹೇಳಿದರು.
                ಪಾಲಿಕೆ ಕಚೇರಿ ಯಲ್ಲಿಂದು ಸುದ್ದಿ ಗೋಷ್ಠಿ ಯಲ್ಲಿ ಮಾಹಿತಿ ನೀಡಿದ  ಆಯುಕ್ತರು  ಪ್ಲಾಸ್ಟಿಕ್ ಬಳಕೆಯ ಸಂದರ್ಭ ಪರಿಸರಕ್ಕೆ ಹಾನಿ ಯಾಗ ದಂತೆ ಎಚ್ಚರಿಕೆ ವಹಿಸುವುದು  ಪಾಲಿಕೆಯ ಜವಾಬ್ಧಾರಿ ಆಗಿದ್ದು, ಈ ಬಗ್ಗೆ ಸೂಕ್ತ ನಿರ್ವಹಣೆ ಉತ್ಪಾದಕರ ಹೊಣೆಯೂ ಆಗಿರುವುದರಿಂದ ಉತ್ಪಾದಕರು ಪ್ಲಾಸ್ಟಿಕ್ ನಿರ್ವಹಣೆಗೆ ಒಪ್ಪಿಕೊಂಡಿದ್ದಾರೆ. ಈ ಹಿಂದೆ ಜಿಲ್ಲಾಡಳಿತದ ಪ್ಲಾಸ್ಟಿಕ್ ನಿಷೇಧಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.  ಆ ಹಿನ್ನೆಲೆಯಲ್ಲಿ ಕೇಂದ್ರದ ನಿಯಮಗಳನ್ನು ಮೀರಿ ಪ್ಲಾಸ್ಟಿಕ್ ಉತ್ಪಾದಿಸುವ ಸಂಸ್ಥೆಗಳ ಪರವಾನಿಗೆ ರದ್ದುಪಡಿಸುವ, ದಂಡ ವಿಧಿಸುವ ಹಾಗೂ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸುವ ಅಧಿಕಾರ ಮಾಲಿನ್ಯ ನಿಯಂತ್ರಣ ಮಂಡಳಿಗೆ ಇರುತ್ತದೆ.ಕೇಂದ್ರದ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ನಿಯಮಗಳು 2011ರ ಪ್ರಕಾರ ಅದನ್ನು ಪಾಲಿಸುವುದು ಸ್ಥಳೀಯಾಡಳಿತದ ಜವಾಬ್ಧಾರಿಯಾಗಿದೆ.ಈ ಪ್ರಕಾರ ಇದೀಗ ಮನೆ ಮನೆ ಕಸ ಸಂಗ್ರಹದ ಸಂದರ್ಭಲ್ಲಿ  ಪ್ಲಾಸ್ಟಿಕ್ ತ್ಯಾಜ್ಯವನ್ನು ವಾರಕ್ಕೊಮ್ಮೆ ಪ್ರತ್ಯೇಕವಾಗಿ ಸಂಗ್ರಹಿಸಲಾಗುವುದು. ಪಾಲಿಕೆ  ವ್ಯಾಪ್ತಿಯ ವಾರ್ಡು ಗಳಿಂದ ಕಸ ಸಂಗ್ರಹಿಸುವ ಏಜೆನ್ಸಿಗಳಿಂದ ಈ ರೀತಿ ಸಂಗ್ರಹಿಸಲಾಗುವ ಪ್ಲಾಸ್ಟಿಕ್ ತ್ಯಾಜ್ಯವನ್ನು ಉತ್ಪಾದಕರು ಸೂಕ್ತ ದರ ನೀಡಿ ಖರೀದಿಸಿ ನಿರ್ವಹಣೆ ಮಾಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ಲಾಸ್ಟಿಕ್ ಉತ್ಪಾದಕರು ಪಾಲಿಕೆ ಜೊತೆ ಕೈಜೋಡಿಸಲು ಮುಂದೆ ಬಂದಿದ್ದಾರೆ ಎಂದರು.
           ಪತ್ರಿಕಾ ಗೋಷ್ಟಿ ಯಲ್ಲಿ  ಮಾತ ನಾಡಿದ  ಕೆನರಾ ಪ್ಲಾಸ್ಟಿಕ್ ಉತ್ಪಾ ದಕರು ಮತ್ತು ವ್ಯಾಪಾ ರಿಗಳ ಸಂಘದ ಅಧ್ಯಕ್ಷ ಬಿ.ಎ. ನಝೀರ್ ಈ ಬಗ್ಗೆ ಪ್ರಾಥಮಿ ಕವಾಗಿ ಜನರಿಗೆ ಅರಿವು ಮೂಡಿ ಸುವ ಕಾರ್ಯ ಕ್ರಮ ವನ್ನು ಕೈ ಗೊಳ್ಳಲಾಗು ವುದು. ವಾಹ ನದ ಮೂಲಕ ಪ್ರಚಾರ ಜಾಥ, ರಾಜ್ಯ ಮಟ್ಟದ ಸಮ್ಮೇಳ ನಗಳ ಮೂಲಕ ಜನರಲ್ಲಿ ಪ್ಲಾಸ್ಟಿಕನ್ನು ಎಲ್ಲೆಂದರಲ್ಲಿ ಎಸೆಯದಂತೆ ಜನಜಾಗೃತಿ ಮೂಡಿಸಲಾಗುವುದು. ಏಜೆನ್ಸಿಗಳಿಂದ ಖರೀದಿ ಮಾಡುವ ಪ್ಲಾಸ್ಟಿಕ್ ನಲ್ಲಿ ಪುನರ್ ಬಳಕೆ ಮಾಡಬಹುದಾದ ಪ್ಲಾಸ್ಟಿಕನ್ನು ಪ್ರತ್ಯೇಕಿಸಿ ಬೈಕಂಪಾಡಿಯಲ್ಲಿರುವ ಎರಡು ಸ್ಥಾವರಗಳಲ್ಲಿ ಪುನರ್ ಬಳಕೆಗೆ ಕ್ರಮ ಕೈಗೊಳ್ಳಲಾಗುವುದು. ಉಳಿದ ಪ್ಲಾಸ್ಟಿಕನ್ನು ರಸ್ತೆ ನಿರ್ಮಾಣ ಕಾರ್ಯದಲ್ಲಿ ಬಳಕೆ ಮಾಡಲು ಕಂಪನಿಗಳಿಂದ ಬೇಡಿಕೆ ಇದೆ ಎಂದರು.
       ಪ್ಲಾಸ್ಟಿಕ್ ಖರೀದಿ ಮಾಡುವಾಗ ಸಾರ್ವಜನಿಕರು ಪ್ಲಾಸ್ಟಿಕ್ನಲ್ಲಿ ಉತ್ಪಾದಕರ ಹೆಸರು, ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಪರವಾನಿಗೆ ಪಡೆದಿರುವ ಬಗ್ಗೆ ನಮೂದಿಸಲಾಗಿದೆಯೇ ಎಂಬುದನ್ನು ಖಾತರಿಪಡಿಸಿಕೊಳ್ಳಬೇಕು. ಈ ಬಗ್ಗೆ ಅಂಗಡಿಗಳಿಗೆ, ಜನಸಾಮಾನ್ಯರಿಗೆ ಮಾಹಿತಿ ನೀಡುವ ಕೆಲಸ ಮಾಡಲಾಗುವುದು. ನಗರದ ಉತ್ಪಾದಕರಿಂದ ಉತ್ಪತ್ತಿಯಾಗುವ ಪ್ಲಾಸ್ಟಿಕ್ ಗಳಲ್ಲಿ ಶೇ. 50ರಷ್ಟು ಸ್ಥಳೀಯವಾಗಿ ಅಂಗಡಿ ಹಾಗೂ ಮಾಲ್ ಗಳಲ್ಲಿ ಬಳಕೆಯಾಗುತ್ತಿದೆ. ಉಳಿದವು ಇಲ್ಲಿಂದ ಹೊರ ಜಿಲ್ಲೆ, ರಾಜ್ಯಗಳಿಗೆ ರಫ್ತಾಗುತ್ತಿವೆ. ಕೇಂದ್ರದ ನಿಯಮ ಉಲ್ಲಂಘಿಸಿ ಉತ್ಪಾದನೆ ಮಾಡದಂತೆ ಹಾಗೂ 40 ಮೈಕ್ರೋನ್ ಗಿಂತ ಕಡಿಮೆ ಗುಣಮಟ್ಟದ ಪ್ಲಾಸ್ಟಿಕ್ ಉತ್ಪಾದಿಸದಂತೆ ನಗರದ ಉತ್ಪಾದಕರಿಗೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದು ಬಿ.ಎ. ನಝೀರ್ ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ಲಕ್ಷ್ಮಣ್, ಮನಪಾ ಅಧಿಕಾರಿಗಳು ಉಪಸ್ಥಿತರಿದ್ದರು.