Wednesday, February 6, 2013

ಸಹಪಠ್ಯ ಚಟುವಟಿಕೆಗಳಿಂದ ಮಕ್ಕಳ ಸರ್ವಾಂಗೀಣ ಅಭಿವೃದ್ಧಿ-ಡಾ.ಕೆ.ಎನ್.ವಿಜಯಪ್ರಕಾಶ್

ಮಂಗಳೂರು, ಫೆಬ್ರವರಿ.06:-ಸಹ ಪಠ್ಯ ಚಟುವಟಿಕೆಗಳಾದ ಕಲೆ,ಸಂಗೀತ,ನೃತ್ಯ,ಸಾಹಿತ್ಯ,ಕರಕುಶಲ ಕಾರ್ಯಗಳು ಮಕ್ಕಳ ಮನೋವಿಕಾಸಕ್ಕೆ ನಾಂದಿಯಾಗಿ ಅವರು ಸರ್ವಾಂಗೀಣ ಅಭಿವೃದ್ಧಿ ಹೊಂದಲು ಸಹಕಾರಿಯಾಗಿವೆ ಎಂದು ದಕ್ಷಿಣಕನ್ನಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಕೆ.ಎನ್. ವಿಜಯಪ್ರಕಾಶ್ ತಿಳಿಸಿದ್ದಾರೆ.
             ಅವರು ಇಂದು ಮಂಗಳೂರು ನಗರದ ಅತ್ತಾವರ ಸರೋಜಿನಿ ಮಧುಸೂದನ್ ಕುಶೆ ವಿದ್ಯಾ ಸಂಸ್ಥೆಯಲ್ಲಿ ದಕ್ಷಿಣಕನ್ನಡ ಜಿಲ್ಲಾ ಪಂಚಾಯತ್ ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ವೃತ್ತಿ ಶಿಕ್ಷಣ ಶಿಕ್ಷಕರ ಸಂಘ ಇವರ ಸಹಯೋಗದಲ್ಲಿ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ವೃತ್ತಿ ಶಿಕ್ಷಣ ವಸ್ತುಗಳ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.
         ನಾವು ಮಕ್ಕಳನ್ನು ನಿಷ್ಕ್ರಿಯರನ್ನಾಗಿಸದೇ, ಸೋಮಾರಿಗಳನ್ನಾಗಿಸದೇ,ಪುಸ್ತಕದ ಹುಳುಗಳನ್ನಾಗಿಸದೇ ಅವರಲ್ಲಿ ಕ್ರಿಯಾಶೀಲತೆ,ಸೃಜನಶೀಲತೆ, ತುಂಬಲು ಅವರಿಗೆ ವೃತ್ತಿ ತರಬೇತಿ ಆವಶ್ಯಕವೆಂದರು.ಇದರಿಂದ ಮಕ್ಕಳಲ್ಲಿ ಪರಿಸರದೊಂದಿಗೆ ಸಂಬಂಧ ಹೆಚ್ಚುತ್ತ್ತದೆ.ಸಾಮಾಜಿಕ ಕೌಶಲಗಳಾದ ತಾಳ್ಮೆ,ಸಹನೆ,ಹೊಂದಾಣಿಕೆ,ಅಥರ್ೈಸುವಿಕೆ ಅವಕಾಶ ವಂಚಿತರನ್ನು ಸಬಲೀಕರಣಗೊಳಿಸುತ್ತದೆ ಎಂದು ಅಭಿಪ್ರಾಯ ಪಟ್ಟರು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಮೋಸೆಸ್ ಜಯಶೇಖರ್ ಅವರು ಮಾತನಾಡಿ ವೃತ್ತಿ ಶಿಕ್ಷಣ ತರಬೇತಿ ಮಕ್ಕಳ ಬದುಕು ರೂಪಿಸಲು ನೆರವಾಗುವಂತಿರಬೇಕು. ಮುಂದಿನ ದಿನಗಳಲ್ಲಿ ಸಕರ್ಾರ ವೃತ್ತಿ ಶಿಕ್ಷಣ ಇತರೆ ಪಠ್ಯ ವಿಷಯಗಳಿಗೆ ಪ್ರಾಮುಖ್ಯತೆ ನೀಡಿದಂತೆ ಪರೀಕ್ಷೆಗಳನ್ನು ಸಹ ನಡೆಸಲಿದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸರಕಾರಿ ಶಿಕ್ಷಕ ಶಿಕ್ಷಣ ಮಹಾ ವಿದ್ಯಾಲಯದ ಪದನಿಮಿತ್ತ ಸಹ ನಿರ್ದೇಶಕರಾದ ಶ್ರೀಮತಿ ಫಿಲೋಮಿನಾ ಲೋಬೋ ಅವರು ಮಾತನಾಡಿ ವೃತ್ತಿ ಶಿಕ್ಷಣ ಮಕ್ಕಳಿಗೆ ಅತ್ಯಂತ ಉಪಯುಕ್ತವಾದುದು,ಸ್ವಾವಲಂಬಿ ಜೀವನ ನಡೆಸಲು ವೃತ್ತಿ ಶಿಕ್ಷಣ ಸಹಕಾರಿಯಾಗಲಿದೆ ಎಂದರು.
ಎಸ್.ಎಂ.ಕುಶೆ ವಿದ್ಯಾ ಸಂಸ್ಥೆಗಳ ಸಂಚಾಲಕರಾದ  ಸುರೇಶ್ ರಾಜ್ ಈ ಸಂದರ್ಭದಲ್ಲಿ ಮಾತನಾಡಿದರು. ವೃತ್ತಿ ಶಿಕ್ಷಣ ವಿಷಯ ಪರಿವೀಕ್ಷಕರಾದ ಎ.ಐ.ಖಾಜಿ ಸಮಾರಂಭಕ್ಕೆ ಎಲ್ಲರನ್ನು ಸ್ವಾಗತಿಸಿದರು.ಕ್ಷೇತ್ರ ಶಿಕ್ಷಣಾಧಿಕಾರಿ ವೈ.ಶಿವರಾಮಯ್ಯ,ಪಾಲಾಕ್ಷ.ಡಿ. ಸರ್ವ ಶಿಕ್ಷಣ ಅಭಿಯಾನ ಅಧಿಕಾರಿ ಶಿವಪ್ರಕಾಶ್,ದಕ್ಷಿಣಕನ್ನಡ ಜಿಲ್ಲಾ ವೃತ್ತಿ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ  ಹನುಮಂತರಾಯ ಮುಂತಾದವರು ಸಭೆಯಲ್ಲಿ ಭಾಗವಹಿಸಿದ್ದರು.
ವಸ್ತು ಪ್ರದರ್ಶನದಲ್ಲಿ ಜಿಲ್ಲೆಯ ಎಲ್ಲಾ 5 ತಾಲೂಕುಗಳ 47 ಶಾಲೆಗಳಿಂದ ಸುಮಾರು 5 ಸಾವಿರಕ್ಕೂ ಹೆಚ್ಚು ಆಕರ್ಷಕ ಮಾದರಿಗಳನ್ನು ಪ್ರದರ್ಶಿಸಲಾಗಿದೆ. ವಸ್ತು ಪ್ರದರ್ಶನ ಫೆಬ್ರವರಿ 7 ರಂದು ಸಹ ಮುಂದುವರಿಯಲಿದೆ.