Tuesday, February 19, 2013

ಫೆ.24 ಎರಡನೇ ಸುತ್ತಿನ ಪಲ್ಸ್ ಪೋಲಿಯೋ

ಮಂಗಳೂರು,ಫೆಬ್ರವರಿ.19 : ಫೆಬ್ರವರಿ 24ರಂದು ನಡೆಯಲಿರುವ ಪ್ರಸಕ್ತ ಸಾಲಿನ ಎರಡನೇ ಸುತ್ತಿನ ಪಲ್ಸ್ ಪೋಲಿಯೋ ಹನಿ ಹಾಕಿಸುವ ಕಾರ್ಯಕ್ರಮದಲ್ಲಿ ಅಲೆಮಾರಿ ಮಕ್ಕಳು ಯಾವುದೇ ಕಾರಣದಿಂದ ವಂಚಿತರಾಗಬಾರದು ಎಂದು ಜಿಲ್ಲಾಧಿಕಾರಿ ಎನ್ ಪ್ರಕಾಶ್ ಅವರು ಹೇಳಿದರು.
       ಇಂದು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ 2013ನೇ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ ಅನುಷ್ಠಾನಕ್ಕೆ ಕರೆಯಲಾದ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು. ಕಳೆದ ಬಾರಿ ಲಸಿಕಾ ಕಾರ್ಯಕ್ರಮದಲ್ಲಿ ಎದುರಾಗಿರುವ ಸಮಸ್ಯೆಗಳನ್ನು ಅವಲೋಕಿಸಿ ಪರಿಹರಿಸಿ ಕಾರ್ಯಕ್ರಮ ಯಶಸ್ವಿಯಾಗ ಬೇಕೆಂದು ಸೂಚಿಸಿದರು.
ಕಳೆದ ಹಲವು ವರ್ಷಗಳಿಂದ ನಿರಂತರವಾಗಿ ನಡೆಯುತ್ತಿರುವ ಕಾರ್ಯ ಕ್ರಮವಿದು; ನಿರಾಂತ ಕವಾಗಿ ನಡೆಯು ತ್ತಿದೆ ಎಂದು ನಿರ್ಲಕ್ಷ್ಯ ವಹಿಸದೆ ಹೆಚ್ಚಿನ ಅಸ್ಥೆ ವಹಿಸಿ ಮಾಡ ಬೇಕಾದ ಅಗತ್ಯವಿದ್ದು, ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸೂಕ್ತ  ಸಮನ್ವಯ ಮತ್ತು ಸಂವಹನವನ್ನಿರಿಸಿಕೊಂಡು ಹೈ ರಿಸ್ಕ್ ಪ್ರದೇಶದಲ್ಲಿ ಹೆಚ್ಚು ಕೆಲಸಮಾಡಿ, ರೂಟ್ ಮ್ಯಾಪ್ ಗಳು ಸಮರ್ಪಕ ಮತ್ತು ಸಮಗ್ರವಾಗಿರಲಿ. ಜಿಲ್ಲಾ ಮಟ್ಟದಲ್ಲಿ ಪ್ರತಿದಿನ ಸಂಜೆ ನಡೆಯುವ ಸಭೆಗಳಂತೆ ತಾಲೂಕು ಮಟ್ಟದಲ್ಲೂ ತಾಲೂಕು ವೈದ್ಯಾಧಿಕಾರಿಗಳು ಸಭೆ ನಡೆಸಿ ಎಂದರಲ್ಲದೆ, ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಪ್ರದೇಶಗಳಲ್ಲಿ ಪೋಲಿಯೋ ಸಂಬಂಧ ಪ್ರಚಾರ ಸಾಮಗ್ರಿ ಗಳನ್ನು ಪ್ರಚುರ ಪಡಿಸುವ ಸಂದರ್ಭದಲ್ಲಿ ಮುನ್ನೆಚ್ಚರಿಕೆ ವಹಿಸಿ ಎಂದು ಎಚ್ಚರಿಕೆ ನೀಡಿದರು.
ಕರ್ತವ್ಯದಲ್ಲಿ ನಿರ್ಲಕ್ಷ್ಯ ವಹಿಸುವವರ ಹೆಸರನ್ನು ತಮಗೆ  ನೀಡಿ ಎಂದು ಜಿಲ್ಲಾಧಿಕಾರಿಗಳು ಆರ್ ಸಿ ಎಚ್ ಅಧಿಕಾರಿಗಳಿಗೆ ಹೇಳಿದರು. ಡಿವಿಷನಲ್ ಮೆಡಿಕಲ್ ಸವರ್ೆಲೆನ್ಸ್ ಅಧಿಕಾರಿಗಳಾದ ಡಾ ಸತೀಶ್ಚಂದ್ರ ಅವರು ನ್ಯೂನ್ಯತೆಗಳ ಬಗ್ಗೆ ಹಾಗೂ ಸಾಧನೆಗಳ ಬಗ್ಗೆ ವಿವರಿಸಿದರು. ಕಳೆದ ಜನವರಿಯಲ್ಲಿ ನಡೆದ ಪಲ್ಸ್ ಪೋಲಿಯೋ ಕಾರ್ಯಕ್ರಮದಲ್ಲಿ ಮಹಾನಗರಪಾಲಿಕೆ ಉತ್ತಮ ಸಾಧನೆ ಮಾಡಿದೆ ಎಂದೂ ಆರ್ ಸಿ ಎಚ್ ಡಾಕ್ಟರ್ ರುಕ್ಮಿಣಿ ಹೇಳಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಓ ಆರ್ ಶ್ರೀರಂಗಪ್ಪ ಉಪಸ್ಥಿತರಿದ್ದರು.