Monday, November 19, 2012

ಮಹಿಳೆ ಮತ್ತು ಮಕ್ಕಳ ಅನೈತಿಕ ಸಾಗಾಟ ತಡೆ ಸಮಾಜದ ಜವಾಬ್ದಾರಿ:ಯೋಗೀಶ್ ಭಟ್

ಮಂಗಳೂರು, ನವೆಂಬರ್.19: ಇಂದು ಸಮಾಜದಲ್ಲಿ ಮಹಿಳೆ ಮತ್ತು ಮಕ್ಕಳನ್ನು ಅನೈತಿಕವಾಗಿ ಸಾಗಾಟ ಮಾಡುತ್ತಿರುವ ಪಿಡುಗು ಇಡೀ ಸಮಾಜವೇ ತಲೆ ತಗ್ಗಿಸುವಂತಹ ಹೀನಾಯ ಸ್ಥಿತಿಗೆ ಬಂದಿದ್ದು,ಇದನ್ನು ಕೇವಲ ಸರ್ಕಾರಗಳು ಮಾತ್ರ ತಡೆಯಲು ಸಾಧ್ಯವಿಲ್ಲ.ಬದಲಾಗಿ ಇದೊಂದು ಸಾಮಾಜಿಕ ಜವಾಬ್ದಾರಿಯಾಗಬೇಕೆಂದು ವಿಧಾನ ಸಭಾ ಉಪಸಭಾಧ್ಯಕ್ಷರಾದ ಎನ್.ಯೋಗೀಶ್ ಭಟ್ ಅವರು ಹೇಳಿದರು.
 ಇಂದು ನಗರದ ಪುರ ಭವನ ದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಡಳಿತ,ಜಿಲ್ಲಾ ಪಂಚಾ ಯತ್ ಹಾಗೂ ಮಹಿಳೆ ಯರ ಮತ್ತು ಮಕ್ಕಳ ಅಭಿ ವೃದ್ಧಿ ಇಲಾಖೆ,ಮಂಗ ಳೂರು ಇವರ ಜಂಟಿ ಆಶ್ರಯ ದಲ್ಲಿ  ಆಯೋ ಜಿಸಿದ್ದ ` ಮಹಿಳೆ ಯರ ಮತ್ತು ಮಕ್ಕಳ ಅನೈ ತಿಕ ಸಾಗಾ ಣಿಕೆ ವಿರುದ್ಧ ಬೃಹತ್ ಆಂದೋ ಲನ ' ಉದ್ಘಾಟಿಸಿ  ಅವರು ಮಾತನಾಡಿದರು.ಮಾದಕ ವಸ್ತುಗಳ ಕಳ್ಳ ಸಾಗಾಣಿಕೆಯಷ್ಟೇ ಮಹಿಳೆಯರ ಹಾಗೂ ಮಕ್ಕಳ ಕಳ್ಳ ಸಾಗಾಣಿಕೆಯಾಗುತ್ತಿರುವುದು ಅತ್ಯಂತ ಅಪಾಯಕಾರಿಯಾಗಿದ್ದು,ಇದಕ್ಕೆ ಬಡತನ ಹಾಗೂ ನಿರುದ್ಯೋಗ ಸಮಸ್ಯೆಯೊಂದೇ ಕಾರಣವಲ್ಲ. ಬದಲಾಗಿ ಲೈಂಗಿಕತೆಯು ಕಾರಣವಾಗಿದೆಯೆಂದು ಅಭಿಪ್ರಾಯಪಟ್ಟರು.
              ಸಮಾ ರಂಭ ದಲ್ಲಿ ಮುಖ್ಯ ಅತಿಥಿ ಗಳಾಗಿ ಆಗ ಮಿಸಿದ್ದ ಶಾಸಕ ರಾದ ಯು.ಟಿ.ಖಾದರ್ ಅವರು ಮಾತ ನಾಡಿ ಅಪ ಹರಣಕ್ಕೆ ಒಳ ಗಾದ ಮಹಿಳೆ ಯರನ್ನು, ಮಕ್ಕ ಳನ್ನು ರಕ್ಷಿಸಿ,ಅವರಿಗೆ ಪುನರ್ ವಸತಿ ಕಲ್ಪಿ ಸುವ ಕಾರ್ಯ ಆಗ ಬೇಕಿದೆ ಎಂದರು. ದಕ್ಷಿಣ ಕನ್ನಡ ಜಿಲ್ಲಾ ಬಾಲ ನ್ಯಾಯ ಮಂಡಳಿ ಸದಸ್ಯರಾದ ಶ್ರೀಮತಿ ರಮೀಳಾ ಶೇಖರ್ ಅವರು ಮಾತನಾಡಿ ಮಹಿಳೆ ಮತ್ತು ಮಕ್ಕಳ ಅಪಹರಣ/ಸಾಗಾಟ ತಡೆಗೆ ಅವರಿಗೆ ಉತ್ತಮ ಶಿಕ್ಷಣ ನೀಡಬೇಕು. ಅಮಿಷಗಳಿಗೆ ಒಳಗಾಗದಂತೆ ಅವರಲ್ಲಿ ಜಾಗೃತಿ ಮೂಡಿಸಬೇಕೆಂದರು.
       ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ್ಯೆ ಶ್ರೀಮತಿ ಆಶಾ ನಾಯಕ್,ಮೇಯರ್ ಶ್ರೀಮತಿ ಗುಲ್ಜಾರ್ ಭಾನು, ರಾಜ್ಯ ಸಂಪನ್ಮೂಲ ವ್ಯಕ್ತಿ  ಪ್ರೇಮಾನಂದ ಕಲ್ಮಾಡಿ, ಜಿಲ್ಲಾ ಮಟ್ಟದ ಮಹಿಳೆಯರ ಮತ್ತು ಮಕ್ಕಳ ಸಾಗಾಟ ನಿಷೇಧ ಸಮಿತಿ ಉಪಾಧ್ಯಕ್ಷ್ಯೆ ಶ್ರೀಮತಿ ಧನಲಕ್ಷ್ಮಿ ಜನಾರ್ಧನ್ ಮುಂತಾದವರು ಮಾತನಾಡಿದರು. ಜಿಲ್ಲಾ ಪಂಚಾಯತ್ ಯೋಜನಾಧಿಕಾರಿ ನಝೀರ್, ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ವಿಜಯಲಕ್ಷ್ಮಿ ಶೆಟ್ಟಿ, ರೆನ್ನಿ ಡಿ `ಸೋಜಾ, ಉಪಸ್ಥಿತರಿದ್ದರು. ಶಕುಂತಳಾ ಉಪನಿರ್ದೇಶಕರು,ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಇವರು ಸ್ವಾಗತಿಸಿದರು. ಇದಕ್ಕೂ ಮುನ್ನ ನಗರದ ಜ್ಯೋತಿ ಸರ್ಕಲ್ ನಿಂದ ಏರ್ಪಡಿಸಿದ್ದ  ಜಾಗೃತಿ ಜಾಥಾವನ್ನು ಯೋಗೀಶ್ ಭಟ್  ಅವರು ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಕೆ.ಎನ್.ವಿಜಯಪ್ರಕಾಶ್ ಹಾಜರಿದ್ದರು.