Thursday, November 15, 2012

2014ರಲ್ಲಿ ಕರ್ನಾಟಕ ವಿದ್ಯುತ್ ಸ್ವಾವಲಂಬಿ ರಾಜ್ಯ: ಶೋಭಾ ಕರಂದ್ಲಾಜೆ

ಮಂಗಳೂರು, ನವೆಂಬರ್.15: ರಾಜ್ಯದಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ವಿದ್ಯುತ್ ಸಮಸ್ಯೆಯನ್ನು ಸವಾಲಾಗಿ ಸ್ವೀಕರಿಸಿ ಪರಿಹರಿಸುವಲ್ಲಿ ರಾಜ್ಯ ಸರಕಾರ ಯಶಸ್ವಿಯಾಗಿದೆ ಎಂದು ಇಂಧನ ಸಚಿವರಾದ ಕುಮಾರಿ ಶೋಭಾ ಕರಂದ್ಲಾಜೆ ಅವರು ಹೇಳಿದರು.
ಅವರಿಂದು ನಗರದ ಬಿಜೈಯಲ್ಲಿ ನೂತನ ಮಂಗ ಳೂರು ವಿದ್ಯು ಚ್ಛಕ್ತಿ ಸರಬ ರಾಜು ಕಂಪೆನಿ ಯ ಆಡ ಳಿತ ಕಚೇ ರಿಯ ನೂತನ ಕಟ್ಟ ಡದ ಶಿಲಾ ನ್ಯಾಸ ನೆರ ವೇರಿಸಿ ಮಾತ ನಾಡು ತ್ತಿದ್ದರು.
ವಿದ್ಯುತ್ ಉತ್ಪಾದನೆ ಮತ್ತು ಬೇಡಿಕೆಗೆ ಸ್ಪಂದಿಸಿ ಅಭಾವ ನೀಗಿಸಲು ಸಮಗ್ರ ಯೋಜನೆ ರೂಪಿಸಿ 4,500 ಮೆಗಾವ್ಯಾಟ್ ಹೆಚ್ಚುವರಿ ವಿದ್ಯುತ್ ನ್ನು ರಾಜ್ಯಕ್ಕೆ ನೀಡಿದೆ.
ಉಡುಪಿಯಲ್ಲಿ 600 ಮೆಗಾವ್ಯಾಟ್, ಬಳ್ಳಾರಿಯಲ್ಲಿ 500, ರಾಯಚೂರಿನ ಎಂಟನೆ ಘಟಕದಿಂದ 250 ಮೆಗಾವ್ಯಾಟ್,  ವರಾಹಿ ಘಟಕಗಳು, ಸಣ್ಣ ಜಲವಿದ್ಯುತ್ ಘಟಕ ಹಾಗೂ ಪವನ ವಿದ್ಯುತ್ ಶಕ್ತಿಗಳ ಮೂಲಕ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ಬಳ್ಳಾರಿ ದ್ವಿತೀಯ ಘಟಕ ಈ ತಿಂಗಳು ಪೂರ್ಣಗೊಳ್ಳಲಿದೆ ಈ ಮೂಲಕ ನಾಲ್ಕು ವರ್ಷಗಳಲ್ಲಿ 4500 ಮೆಗಾವ್ಯಾಟ್ ವಿದ್ಯುತ್ತನ್ನು ಹೆಚ್ಚುವರಿಯಾಗಿ ಉತ್ಪಾದಿಸಿ ನಮ್ಮ ಗ್ರಿಡ್ಗೆ ಸೇರ್ಪಡೆಗೊಳಿಸಲಾಗಿದೆ. ಎಲ್ಲವೂ ಯೋಜನೆಯಂತೆ ಸಂಪೂರ್ಣಗೊಂಡರೆ 2014ರ ವೇಳೆಗೆ ಗುಜರಾತ್ ನಂತೆ ಕರ್ನಾಟಕ ಕೂಡಾ ವಿದ್ಯುತ್ ನಲ್ಲಿ ಸ್ವಾವಲಂಬಿ ರಾಜ್ಯವಾಗಲಿದೆ ಎಂದು ಶೋಭಾ ಅಭಿಪ್ರಾಯಿಸಿದರು.
ಉತ್ಪಾದನೆಗೆ ಮತ್ತು ವಿತರಣೆಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಗ್ರಾಮೀಣ ಪ್ರದೇಶಗಳಲ್ಲಿನ ವಿದ್ಯುತ್ ಸಮಸ್ಯೆ ನಿವಾರಣೆಗೂ ರಾಜ್ಯ ಸರಕಾರ ಬದ್ಧವಾಗಿದೆ. ನಾಲ್ಕು ವರ್ಷಗಳಲ್ಲಿ ಹೊಸ ವಿದ್ಯುತ್ ಲೈನ್ ಹಾಗೂ ಹೊಸ ಸ್ಟೇಷನ್ಗಳ ಆರಂಭ ಹಾಗೂ ಮೇಲ್ದರ್ಜೆಗೇರಿಸುವ ಕಾರ್ಯಕ್ಕಾಗಿಯೇ 11,000 ಕೋಟಿ ರೂ.ಗಳನ್ನು ವ್ಯಯಿಸಲಾಗಿದೆ. ಹಾಗಿದ್ದರೂ ಇನ್ನೂ ಸ್ಟೇಷನ್ ಗಳ ಕೊರತೆ ಇದೆ. ಬೆಂಗಳೂರು ಮಹಾನಗರದಲ್ಲೇ 22 ಕಡೆಗಳಲ್ಲಿ ವಿದ್ಯುತ್ ಸ್ಟೇಷನ್ ಳ ಕೊರತೆ ಇದೆ. ಸ್ಟೇಷನ್ ಳ ಕೊರತೆಯಿಂದಾಗಿ ಸಾಗಾಣಿಕೆ ನಷ್ಟ ಹೆಚ್ಚತ್ತಿದೆ. ವಿದ್ಯುತ್ ಕಳ್ಳತನ, ಅಕ್ರಮ ಜೋಡಣೆಗೆ ಸಂಬಂಧಿಸಿ ಲೈನ್ ಗಳ ಬದಲಾವಣೆ ಕೆಲಸ ಮಾಡಲಾಗುತ್ತಿದೆ ಎಂದು ಇಂಧನ ಸಚಿವರು ವಿವರಿಸಿದರು.
ಶಿಲಾನ್ಯಾಸಗೊಂಡ ಮೆಸ್ಕಾಂ ಆಡಳಿತ ಕಚೇರಿ ಕಟ್ಟಡ ಪರಿಸರ ಸ್ನೇಹಿಯಾಗಿದ್ದುಕೊಂಡು 10 ಕೋಟಿ ರೂ. ವೆಚ್ಚದಲ್ಲಿ ಒಂದು ವರ್ಷದೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಈ ಕಟ್ಟಡವು ಮಳೆ ನೀರು ಕೊಯ್ಲು, ಸೌರ ವಿದ್ಯುತ್ ಯೋಜನೆಗಳನ್ನು ಒಳಗೊಂಡು ಮಾದರಿಯಾಗಲಿದೆ ಎಂದವರು ಹೇಳಿದರು.
ಸಂಸದ ನಳಿನ್ ಕುಮಾರ್ ಕಟೀಲ್ ಮಾತ ನಾಡಿ, ಕಳೆ ದೆರಡು ವರ್ಷ ಗಳಿಂದ ಜಿಲ್ಲೆ ಯಲ್ಲಿ ವಿದ್ಯುತ್ ಕಡಿತ ಸಮಸ್ಯೆ ಬಹು ತೇಕ ಕಡಿಮೆ ಯಾಗಿದೆ ಎಂದರು. ಗ್ರಾಮಾಂ ತರ ಪ್ರದೇಶ ಗಳಲ್ಲೂ ಸಮ ರ್ಪಕ ವಿದ್ಯುತ್ ಒದಗಿ ಸುವಲ್ಲಿ ರಾಜ್ಯ ಸರ ಕಾರ ಸೂಕ್ತ ಯೋಜನೆ ಗಳನ್ನು ರೂಪಿಸಿದ್ದು, ಬೆಳ್ತಂಗಡಿ, ಸುಳ್ಯ ಮೊದಲಾದೆಡೆಗಳಲ್ಲಿ ವಿದ್ಯುತ್ ಕಂಬ, ತಂತಿ ಅಳವಡಿಕೆ ಕಾರ್ಯದಲ್ಲಿ ಅದ್ಭುತವಾದ ಬೆಳವಣಿಗೆ ಆಗಿದೆ. ಹಾಗಿದ್ದರೂ  ಕೆಲವೆಡೆಗಳಲ್ಲಿ ಕೆಪಿಟಿಸಿಎಲ್ ಲೈನ್ ಹಾದುಹೋಗುವಲ್ಲಿ ಜನರ ಸಹಕರಿಸದಿರುವುದರಿಂದ ಕಾಮಗಾರಿ ವಿಳಂಬವಾಗುತ್ತಿದೆ ಎಂದವರು ಹೇಳಿದರು.
ವೇದಿಕೆಯಲ್ಲಿ ವಿಧಾನ ಪರಿಷತ್ ಸದಸ್ಯ ಮೋನಪ್ಪ ಭಂಡಾರಿ, ಉಪ ಮೇಯರ್ ಅಮಿತಕಲಾ, ಮನಪಾ ಸದಸ್ಯ ಲ್ಯಾನ್ಸಿಲಾಟ್ ಪಿಂಟೋ, ರಾಮ ಅಮೀನ್ ಮೊದಲಾದವರು ಉಪಸ್ಥಿತರಿದ್ದರು.
ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಎಸ್. ಸುಮಂತ್ ಪ್ರಾಸ್ತಾವಿಕವಾಗಿ ಮಾತನಾಡಿದರು. ತಾಂತ್ರಿಕ ವಿಭಾಗದ ನಿರ್ದೇಶಕ ಎಚ್. ನಾಗೇಶ್ ವಂದಿಸಿದರು. ಮೆಸ್ಕಾಂ ಕಚೇರಿ ಸಹಾಯಕ ನಾಗರಾಜ್ ಪ್ರಾರ್ಥಿಸಿದರು.