Saturday, November 3, 2012

ಮಂಗಳೂರು ತಾಲೂಕನ್ನು ಪ್ಲಾಸ್ಟಿಕ್ ಮುಕ್ತವಾಗಿಸಲು ಜಿಲ್ಲಾಧಿಕಾರಿ ನಿರ್ದೇಶನ

ಮಂಗಳೂರು,ನವೆಂಬರ್.03 : ಮಂಗಳೂರು ತಾಲೂಕನ್ನು ಪ್ಲಾಸ್ಟಿಕ್ ಮುಕ್ತ ವಲಯವನ್ನಾಗಿಸಲು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳು ಇಂದು ಮತ್ತೊಂದು ಸುತ್ತಿನ ಅಧಿಕಾರಿಗಳ ಸಭೆಯನ್ನು ಕರೆದಿದ್ದು, ತ್ಯಾಜ್ಯ ವಿಲೇಗೆ ಸವಾಲಾಗಿರುವ ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕಲು ಮಂಗಳೂರು ಮಹಾನಗರಪಾಲಿಕೆಯ ಅಧಿಕಾರಿಗಳ ಮತ್ತು ತಾಲೂಕು ಪಂಚಾಯತ್ ಅಧಿಕಾರಿಗಳ, ಪಿಡಿಒಗಳ ಸಭೆಯನ್ನು ಕರೆದು ನಿರ್ದೇಶನ ನೀಡಿದರು.
ಇಂದು ಜಿಲ್ಲಾಧಿ ಕಾರಿಗಳ ಅಧ್ಯಕ್ಷ ತೆಯಲ್ಲಿ ಅವರ ಕಚೇರಿ ಯಲ್ಲಿ ನಡೆದ ಸಭೆ ಯಲ್ಲಿ ಈ ಸಂಬಂಧ ಇತರ ಅಧಿಕಾ ರಿಗಳ ಅಭಿ ಪ್ರಾಯ ಗಳನ್ನು ಸಂಗ್ರ ಹಿಸಿದ ಜಿಲ್ಲಾಧಿ ಕಾರಿಗಳು, ಮಂಗ ಳೂರಿನ ಜನತೆ ಯಿಂದ ಪ್ಲಾಸ್ಟಿಕ್ ಮುಕ್ತ ನಗರ ವನ್ನಾ ಗಿಸಲು ಸಕ ರಾತ್ಮಕ ಪ್ರ ತಿಕ್ರಿಯೆ ವ್ಯಕ್ತ ವಾಗಿದೆ ಎಂದರು.
ಈಗಾಗಲೇ ಮಂಗಳೂರನ್ನು ಪ್ಲಾಸ್ಟಿಕ್ ಮುಕ್ತವಾಗಿಸಲು ಸಾಕಷ್ಟು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಜನರಿಗೆ ಈ ಬಗ್ಗೆ ಮಾಹಿತಿ ನೀಡುವ ಕೆಲಸವಾಗಿದೆ. ಆದರೆ ಹಲವೆಡೆ ವಿವಿಧ ಕಾರಣಗಳಿಂದ ಗೊಂದಲಗಳು ವ್ಯಕ್ತವಾಗಿದ್ದು, ಪ್ಲಾಸ್ಟಿಕ್ ನಿಷೇಧಕ್ಕೆ ಸಂಬಂಧಿಸಿ ಯಾವುದೇ ಗೊಂದಲ ಇಲ್ಲ. ತಾಲೂಕಿನಲ್ಲಿ ಆಹಾರ ವಸ್ತು ಪ್ಯಾಕ್ ಮಾಡಲು, ಹಾಗೂ ಪ್ಲಾಸ್ಟಿಕ್ ಕಪ್ ಬಳಸಲು, ಡೈನಿಂಗ್ ನಲ್ಲಿ ಪ್ಲಾಸ್ಟಿಕ್ ಷೀಟ್ ಬಳಸುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.
ನಗರದಲ್ಲಿ ಪ್ಲಾಸ್ಟಿಕ್ ಬಳಸಿ ಬಿಸಾಡುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದ್ದು, ಗೃಹರಕ್ಷಕದಳದ ಸಿಬಂದಿಗಳ  ಜೊತೆಗೆ 'ಪರಿಸರ ಸ್ನೇಹಿ' ತಂಡ ರಚಿಸಿ ನವೆಂಬರ್ 15ರ ಬಳಿಕ ದಂಡ ವಿಧಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ ಎನ್ ಎಸ್ ಚನ್ನಪ್ಪಗೌಡ ಹೇಳಿದರು.
ಮೀನು ಮಾರುಕಟ್ಟೆ ಗಳು, ತರಕಾರಿ ಮಾರುಕಟ್ಟೆಗಳಲ್ಲಿ ಈ ತಂಡಗಳು ಸಂಚರಿಸಿ ಜಿಲ್ಲಾಡಳಿತದ ನಿರ್ದೇಶನವನ್ನು ಜಾರಿಗೆ ತರಲು ಕಾರ್ಯೋನ್ಮುಖವಾಗಲಿದೆ ಎಂದರು. ಕ್ರಮಕೈಗೊಳ್ಳುವಲ್ಲಿ ಅಧಿಕಾರಿಗಳು ವಿಫಲವಾದರೆ ಅಧಿಕಾರಿಗಳ ವಿರುದ್ಧವೂ ಕ್ರಮಕೈಗೊಳ್ಳುವುದಾಗಿ ಜಿಲ್ಲಾಧಿಕಾರಿಗಳು ಎಚ್ಚರಿಸಿದರು..
ಹಲವು ಸ್ತ್ರೀ ಶಕ್ತಿ ಮತ್ತು ಸ್ವಯಂ ಸೇವಾ ಸಂಸ್ಥೆಗಳು ಬಟ್ಟೆ ಚೀಲ ತಯಾರಿಕೆಗೆ ಮುಂದೆ ಬಂದ್ದಿದ್ದು, ಜನರ ಕೈಗೆಟುಕುವ ದರದಲ್ಲಿ ಬಟ್ಟೆ ಚೀಲ ಪೂರೈಕೆಗೂ ಕ್ರಮ ಕೈಗೊಳ್ಳಲಾಗುವುದು. ನಿಷೇಧ ಜಾರಿಗೆ ಮಂಗಳೂರು ಮಹಾಜನತೆಯ ಸಹಕಾರದ ಅಗತ್ಯವಿದೆ. ಜನರ ಸಹಕಾರದಿಂದ ಮಾತ್ರ ನಗರ ಪ್ಲಾಸ್ಟಿಕ್ ಮುಕ್ತವಾಗಲು ಸಾಧ್ಯ. ಈ ಧ್ಯೇಯದ ಹಿಂದಿನ ಸದುದ್ದೇಶವನ್ನು ಜಿಲ್ಲೆಯ ಬುದ್ದಿವಂತ ಜನರು ಅರ್ಥ ಮಾಡಿಕೊಂಡು, ಜಿಲ್ಲಾಡಳಿತದ ಕ್ರಮಕ್ಕೆ ಪೂರಕ ಸ್ಪಂದನೆ ನೀಡಬೇಕೆಂದರು. ನಮ್ಮ ಪರಿಸರ, ನಮ್ಮ ಪೃಕೃತಿಯನ್ನು ರಕ್ಷಿಸುವ ಹೊಣೆ ನಮ್ಮದಾಗಬೇಕಿದೆ ಎಂದರು.
ಮನಾಪ ಜಂಟಿ ಆಯುಕ್ತರಾದ ಶ್ರೀಕಾಂತ್ ಭಟ್, ಪರಿಸರ ಇಂಜಿನಿಯರ್ ಮಂಜುನಾಥ್. ನಗರ ಯೋಜನಾ ನಿರ್ದೇಶಕರಾದ ತಾಕತ್ ರಾವ್ ಮತ್ತು ತಾಲೂಕು ಪಂಚಾಯತ್ ಅಧಿಕಾರಿಗಳು ಹಾಗೂ ಪಾಲಿಕೆಯ ಸಮುದಾಯ ಅಭಿವೃದ್ಧಿ ಅಧಿಕಾರಿಗಳು ಉಪಸ್ಥಿತರಿದ್ದರು.