Saturday, July 10, 2010

ಬೇಲಿಕೇರಿ ಅಕ್ರಮ ಗಣಿಗಾರಿಕೆ: ಲೋಕಾಯುಕ್ತ ವರದಿ ಬಳಿಕ ಕ್ರಮ

ಮಂಗಳೂರು,ಜು.10:ಉತ್ತರ ಕನ್ನಡ ಬೇಲೀಕೇರಿ ಬಂದರಿನಲ್ಲಿ ಅದಿರು ಕಳವು ಬಗ್ಗೆ ಸಮಗ್ರ ತನಿಖೆಗೆ ರಾಜ್ಯ ಸರ್ಕಾರ ಲೋಕಾಯುಕ್ತ ಹಾಗೂ ಸಿಐಡಿಗೆ ವಹಿಸಿದ್ದು ವರದಿಯ ಬಳಿಕ ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಬಂದರು ಸಚಿವರಾದ ಕೃಷ್ಣ ಜೆ.ಪಾಲೆಮಾರ್ ಅವರು ಹೇಳಿದರು.ಅವರಿಂದು ಸರ್ಕಿಟ್ ಹೌಸ್ ನಲ್ಲಿ ಪತ್ರಿಕಾ ಗೋಷ್ಠಿಯನ್ನು ದ್ದೇಶಿಸಿ ಮಾತ ನಾಡುತ್ತಾ,ಪ್ರಕರಣದ ಬಗ್ಗೆ ಸವಿವರ ಮಾಹಿತಿ ನೀಡಿದರು. ಜಲಮಾಲಿನ್ಯ ತಡೆಗೆ ಕೈಗೊಂಡಿರುವ ಕ್ರಮಗಳನ್ನು ವಿವರಿಸಿದ ಅವರು ಬೆಂಗಳೂರಿನಲ್ಲಿ ಬೋರ್ ವೆಲ್ ನೀರು ಕಲುಷಿತಗೊಂಡಿದ್ದು ನೀರು ಶುದ್ದೀಕರಣದ ಪ್ಲಾಂಟ್ ಅಳವಡಿಸಲು ಯೋಜನೆ ರೂಪಿಸಿದೆ ಹಾಗೂ ಪರಿಸರ ಸಂರಕ್ಷಣೆಗೆ ಹಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು. ಮಂಗಳೂರು ನಗರ ಪಾಲಿಕೆಗೆ ಮತ್ತೆ 100 ಕೋಟಿ ರೂ.ಯೋಜನೆ ರೂಪಿಸಿ ಸರ್ಕಾರಕ್ಕೆ ಸಲ್ಲಿಸಲಾಗಿದ್ದು,ಈ ಹಣದಲ್ಲಿ ಚರಂಡಿ,ಫುಟ್ ಪಾತ್ ನಿರ್ಮಾಣಕ್ಕೆ ಮೊದಲ ಆದ್ಯತೆ ನೀಡಲಾಗುದು ಎಂದರು. .