Tuesday, July 20, 2010

ದ.ಕ ಜಿಲ್ಲೆಯಲ್ಲಿ 21,899 ಹೆಕ್ಟೇರ್ ಭತ್ತ ನಾಟಿ

ಮಂಗಳೂರು,ಜು.20:ಜಿಲ್ಲೆಯಲ್ಲಿ 19.7.10 ರವರೆಗೆ 21899 ಹೆಕ್ಟೇರ್ ಭತ್ತ ನಾಟಿ ಮಾಡಲಾಗಿದೆ. ಮಂಗಳೂರಿನಲ್ಲಿ 8740, ಬಂಟ್ವಾಳದಲ್ಲಿ 4270, ಬೆಳ್ತಂಗಡಿಯಲ್ಲಿ 6233, ಪುತ್ತೂರಿನಲ್ಲಿ 2230, ಸುಳ್ಯದಲ್ಲಿ 426 ಹೆಕ್ಟೇರ್ ವ್ಯಾಪ್ತಿಯಲ್ಲಿ ಭತ್ತ ನಾಟಿ ಮಾಡಲಾಗಿದೆ. ಕಳೆದ ಸಾಲಿನಲ್ಲಿ ಇದೇ ಸಮಯಕ್ಕೆ 23814 ಹೆಕ್ಟೇರ್ ವ್ಯಾಪ್ತಿಯಲ್ಲಿ ಭತ್ತ ನಾಟಿ ಮಾಡಲಾಗಿತ್ತು ಎಂದು ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.

ಕಳೆದ ಮುಂಗಾರು ಹಂಗಾಮಿನಲ್ಲಿ ಜೂನ್ ತಿಂಗಳಲ್ಲಿ ಹೆಚ್ಚಿನ ಮಳೆ ಯಾಗಿತ್ತು.ಜಿಲ್ಲೆ ಯಲ್ಲಿ ಒಟ್ಟು ಭತ್ತ ಬೆಳೆಯುವ ಪ್ರದೇಶ 35,000 ಹೆಕ್ಟೇರ್. ಇದು ವರೆಗೆ 504.05 ಕ್ವಿಂಟಾಲ್ ಬೀಜವನ್ನು 1263 ಫಲಾನು ಭವಿಗಳಿಗೆ ವಿತರಿಸ ಲಾಗಿದೆ. 207.85 ಕ್ವಿಂಟಾಲ್ ಬೀಜ ದಾಸ್ತಾನಿದ್ದು, ಬೇಡಿಕೆ ಪೂರೈಕೆಗೆ ಯಾವುದೇ ತೊಂದರೆ ಇಲ್ಲ ಎಂದು ಜಂಟಿ ಕೃಷಿ ನಿರ್ದೇಶಕರು ಹೇಳಿದ್ದಾರೆ. ಮಂಗಳೂರಿನಲ್ಲಿ 541, ಬಂಟ್ವಾಳದಲ್ಲಿ 363, ಬೆಳ್ತಂಗಡಿಯಲ್ಲಿ 133, ಪುತ್ತೂರಿನಲ್ಲಿ 129 ಮತ್ತು ಸುಳ್ಯದಲ್ಲಿ 97 ಫಲಾನುಭವಿಗಳಿಗೆ ಬೀಜ ವಿತರಣೆ ಮಾಡಲಾಗಿದೆ. ಒಟ್ಟು 504050 ರೂ. ರಿಯಾಯಿತಿಯನ್ನು ನೀಡಲಾಗಿದೆ. ಮಂಗಳೂರು ತಾಲೂಕಿನಲ್ಲಿ 69.85,ಬಂಟ್ವಾಳದಲ್ಲಿ 22.25, ಬೆಳ್ತಂಗಡಿಯಲ್ಲಿ 53.75, ಪುತ್ತೂರಿನಲ್ಲಿ 43.50 ಮತ್ತು ಸುಳ್ಯದಲ್ಲಿ 18.50 ಬೀಜ ದಾಸ್ತಾನಿದೆ.ರಾಷ್ಟ್ರೀಯ ಕೃಷಿ ವಿಮಾ ಯೋಜನೆಯನ್ನು ಮುಂಗಾರು 2010 ರಲ್ಲಿಯೂ ಮುಂದುವರೆಸಲಾಗಿದ್ದು,ಮಂಗಳೂರು(A)ಹೊಬಳಿ ಹೊರತು ಪಡಿಸಿ ಜಿಲ್ಲೆಯ ಎಲ್ಲಾ ಹೊಬಳಿಗಳಿಗೆ ಈ ಯೋಜನೆಗೆ ಒಳಪಟ್ಟಿರುತ್ತವೆ.