Tuesday, July 6, 2010

ಜಲಾನಯನ ಅಭಿವೃದ್ಧಿ ಇಲಾಖೆಯಿಂದ 138 ಕಿಂಡಿ ಮತ್ತು ತಡೆಅಣೆಕಟ್ಟು

ಮಂಗಳೂರು,ಜುಲೈ,06: ಜಲಾನಯನ ಅಭಿವೃದ್ಧಿ ಇಲಾಖೆ ಜಿಲ್ಲಾ ಯೋಜನಾ ವ್ಯಾಪ್ತಿಯೊಳಗಿನ ರೈತರ ಶ್ರೇಯೋಭಿವೃದ್ಧಿಗಾಗಿ 2009-10ನೇ ಸಾಲಿನಲ್ಲಿ ರೂ. 573.10 ಲಕ್ಷ ರೂ.ವೆಚ್ಚದಲ್ಲಿ 138 ಕಿಂಡಿ ಮತ್ತು ತಡೆ ಅಣೆಕಟ್ಟುಗಳನ್ನು ನಿರ್ಮಿಸಿದೆ ಎಂದು ಜಿಲ್ಲಾ ಜಲಾನಯನ ಅಭಿವೃದ್ಧಿ ಅಧಿಕಾರಿ ಮಂಜುನಾಥ್ ಬಿ. ತಿಳಿಸಿದ್ದಾರೆ.

ಈ ನಿರ್ಮಾಣ ಗಳಿಂದ ಜಿಲ್ಲೆಯಲ್ಲಿ ಅಂತರ್ಜಲ ಅಭಿವೃದ್ಧಿ ಯೊಂದಿಗೆ ಸುಮಾರು 1200 ಹೆಕ್ಟೇರ್ ಪ್ರದೇಶದಲ್ಲಿ ಎರಡನೇ ಬೆಳೆ ಬೆಳೆಯಲು ಮತ್ತು ತೋಟಗಾರಿಕೆ ಬೆಳೆಗಳಿಗೆ ಬೇಸಿಗೆಯಲ್ಲಿ ನೀರಾವರಿ ಸೌಲಭ್ಯವನ್ನು ಒದಗಿಸಲು ಅನುಕೂಲ ವಾಗಿದೆ. ಜಿಲ್ಲೆಯ ಗ್ರಾಮೀಣ ಭಾಗ ಇಂದಿಗೂ ಕೃಷಿ ಪ್ರಧಾನ ವಾಗಿದ್ದು, ಭತ್ತ, ತೆಂಗು, ಅಡಿಕೆ, ಸಾಂಬಾರು, ರಬ್ಬರ್ ಮುಂತಾದ ಬೆಳೆಗಳನ್ನು ಬೆಳೆಯ ಲಾಗುತ್ತಿದೆ. ವಾರ್ಷಿಕ 4000 ಮಿ.ಮೀ ಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಮುಂಗಾರಿನಲ್ಲಿ ಮಳೆಯಾದರೂ ಡಿಸೆಂಬರ್ ನಿಂದ ಮೇ ವರೆಗೆ ನೀರೊದಗಿಸಲು ಜಲಾನಯನ ಇಲಾಖೆ ಜಿಲ್ಲೆಯಲ್ಲಿ ಸಮಗ್ರ ಬಂಜರು ಭೂಮಿ ಅಭಿವೃದ್ಧಿ,ಜಲಾನಯನ ಅಭಿವೃದ್ಧಿ, ಪಶ್ಚಿಮ ಘಟ್ಟ ಅಭಿವೃದ್ಧಿ, ಸಮಗ್ರ ಜಲಾನ ಯನ ನಿರ್ವಹಣೆ, ಮಳೆ ನೀರು ಕೊಯ್ಲು ವಿನ್ಯಾಸಗಳ ರಚನೆ ಯೋಜನೆಗಳಡಿ 2008-09ನೇ ಸಾಲಿನಲ್ಲಿ 482.84 ಲಕ್ಷ ರೂ. ವೆಚ್ಚದಲ್ಲಿ 93 ಕಿಂಡಿ ಅಣೆಕಟ್ಟು, 7 ತಡೆಅಣೆಕಟ್ಟು, 140 ನಾಲಾ ತಡೆಗೋಡೆ ಕಾಮಗಾರಿ ಗಳನ್ನು ಕೈಗೊಂಡಿದೆ.