Monday, July 29, 2013

ಜಿಲ್ಲೆಯಲ್ಲಿ ಪ್ರಸ್ತುತ ಮುಂಗಾರಿನಲ್ಲಿ 92125 ಟನ್ ಭತ್ತ ಬೆಳೆಯುವ ಗುರಿ

ಮಂಗಳೂರು,ಜುಲೈ.29:-ಪ್ರಸ್ತುತ ಮುಂಗಾರು ಹಂಗಾಮಿನಲ್ಲಿ ದಕ್ಷಿಣಕನ್ನಡ ಜಿಲ್ಲೆಯ 33500 ಹೆಕ್ಟೇರ್ ನಲ್ಲಿ 92125 ಟನ್ ಭತ್ತ ಉತ್ಪಾದಿಸುವ ಗುರಿ ಹೊಂದಲಾಗಿದೆ ಎಂದ ಜಂಟಿ ಕೃಷಿ ನಿರ್ದೇಶಕರ ಪ್ರಕಟಣೆ ತಿಳಿಸಿದೆ.
ಜಿಲ್ಲೆಯಲ್ಲಿ 28-7-13 ರ ವರೆಗೆ 27008 ಹೆಕ್ಟೇರ್ನಲ್ಲಿ ಕೃಷಿ ಚಟುವಟಿಕೆಗಳು ಪೂರ್ಣಗೊಂಡಿದ್ದು,ಶೇಕಡಾ 80.6 ರಷ್ಟು ಪ್ರಗತಿ ಆಗಿದೆ.  ಕಳೆದ ವರ್ಷ ಇದೇ ಅವಧಿಯಲ್ಲಿ ಜಿಲ್ಲೆಯಲ್ಲಿ 23513 ಹೆಕ್ಟೇರ್ನಲ್ಲಿ ಕೃಷಿ ಕಾರ್ಯ ನಡೆದಿತ್ತು.
ಮಂಗಳೂರು ತಾಲೂಕಿನಲ್ಲಿ ಒಟ್ಟು 11800 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯುವ ಗುರಿ ಇದ್ದು,ಇಲ್ಲಿಯ ವರೆಗೆ 9367 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಕಾರ್ಯ ಪೂರ್ಣಗೊಂಡಿದೆ. ಸುಳ್ಯ ತಾಲೂಕಿನಲ್ಲಿ 500 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯುವ ಗುರಿ ಇದ್ದು ಈಗಾಗಲೇ 489 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ನಾಟಿ ಮಾಡಲಾಗಿದ್ದು ಶೇಕಡಾ 98 ಗುರಿ ಸಾಧಿಸಲಾಗಿದೆ. ಬಂಟ್ವಾಳ ತಾಲೂಕಿನಲ್ಲಿ 9500 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯುವ ಗುರಿ ಇದ್ದು ಈಗಾಗಲೇ 7420 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ನಾಟಿ ಮಾಡಲಾಗಿದ್ದು ಶೇಕಡಾ 78 ಗುರಿ ಸಾಧಿಸಲಾಗಿದೆ.
ಬೆಳ್ತಂಗಡಿ  ತಾಲೂಕಿನಲ್ಲಿ 8500 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯುವ ಗುರಿ ಇದ್ದು ಈಗಾಗಲೇ 6932 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ನಾಟಿ ಮಾಡಲಾಗಿದ್ದು ಶೇಕಡಾ 81 ಗುರಿ ಸಾಧಿಸಲಾಗಿದೆ.
ಪುತ್ತೂರು ತಾಲೂಕಿನಲ್ಲಿ 3200 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯುವ ಗುರಿ ಇದ್ದು ಈಗಾಗಲೇ 2800 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ನಾಟಿ ಮಾಡಲಾಗಿದ್ದು ಶೇಕಡಾ 78 ಗುರಿ ಸಾಧಿಸಲಾಗಿದೆ.
ಈ ಮುಂಗಾರು ಹಂಗಾಮಿನಲ್ಲಿ 8000ಟನ್ ರಸಗೊಬ್ಬರ ಬೇಡಿಕೆ ಇದ್ದು ಈಗಾಗಲೇ 9463 ಟನ್ ರಸಗೊಬ್ಬರ ವಿತರಣೆಯಾಗಿದ್ದು, 5900 ಟನ್ ರಸಗೊಬ್ಬರು ದಾಸ್ತಾನಿದೆ. ಮುಂಗಾರು ಹಮಗಾಮಿಗೆ ಜಿಲ್ಲೆಯಲ್ಲಿ ಒಟ್ಟು 2600 ಹೆಕ್ಟೇರ್ ಪ್ರದೇಶದಲ್ಲಿ ಭೂಚೇತನಾ ಕಾರ್ಯಕ್ರಮವನ್ನು ಯಶಸ್ವಿಯಾಗಿ ಕೈಗೊಳ್ಳಲಾಗುತ್ತಿದೆ.
ಬಿತ್ತನೆ ಬೀಜ ಪ್ರಮಾಣ ಸಾಕಷ್ಟಿದ್ದು,ಇದುವರಗೂ 459.50 ಕ್ವಿಂಟಾಲ್ ನಷ್ಟು ಬಿತ್ತನೆ ಬೀಜಗಳನ್ನು ರೈತ ಸಂಪರ್ಕ ಕೇಂದ್ರಗಳ ಮೂಲಕ 1274 ರೈತರಿಗೆ ವಿತರಿಸಲಾಗಿದೆ.ಕ್ವಿಂಟಾಲಿಗೆ  ಶೇಕಡಾ 50 ರಂತೆ ರೂ.700 ರಿಯಾಯಿತಿಯಲ್ಲಿ ಪ್ರಾಮಾಣಿತ ಬೀಜ) ರೈತ ಸಂಪರ್ಕ ಕೇಂದ್ರಗಳ ಮೂಲಕ ವಿತರಿಸಲಾಗುತ್ತಿದೆ. ಕರ್ನಾಟ ಕಜಕ ರಾಜ್ಯ ಬೀಜ ನಿಗಮದಿಂದ 27-7-13 ರ ವರೆಗೆ ಒಟ್ಟು 483.50 ಕ್ವಿಂಟಾಲ್ ಬೀಜ ದಾಸ್ತಾನು ಪಡೆದು459.50 ಕ್ವಿಂಟಾಲ್ ವಿತರಿಸಲಾಗಿದೆ.