Wednesday, November 23, 2011

ಪ್ರಾಕೃತಿಕ ಸಮತೋಲನದಿಂದ ವಿಕೋಪಗಳನ್ನು ತಡೆಯಲು ಸಾಧ್ಯ;ಡಾ.ಕೆ.ಎನ್.ವಿಜಯಪ್ರಕಾಶ್

ಮಂಗಳೂರು,ನವೆಂಬರ್.23:ಪ್ರಾಕೃತಿಕ ಅಸಮತೋಲನದಿಂದಾಗಿ ಪ್ರಕೃತಿ ವಿಕೋಪಗಳು ಹೆಚ್ಚುತ್ತಿದ್ದು ಅಭಿವೃದ್ಧಿಯ ಮೇಲೆ ಇಂತಹ ವಿಕೋಪಗಳು ದುಷ್ಪರಿಣಾಮ ಬೀರಲಿದೆ ಎಂದು ದಕ್ಷಿಣಕನ್ನಡ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಕೆ.ಎನ್.ವಿಜಯಪ್ರಕಾಶ್ ರವರು ಹೇಳಿದರು.
ಅವರು ಇಂದು ಜಿಲ್ಲಾ ತರ ಬೇತಿ ಸಂಸ್ಥೆ ಯಲ್ಲಿ ಜಿಲ್ಲಾ ಮಟ್ಟದ ಹಾಗೂ ತಾಲೂಕು ಮಟ್ಟದ ಅಧಿ ಕಾರಿ ಗಳಿಗೆ ಹಮ್ಮಿ ಕೊಂಡಿದ್ದ ಮೂರು ದಿನ ಗಳ ಕಡಲ ಕೊರೆತ ನಿರ್ವ ಹಣೆ ತರ ಬೇತಿ ಕಾರ್ಯಾ ಗಾರ ವನ್ನು ಉದ್ಘಾ ಟಿಸಿ ಮಾತ ನಾಡು ತ್ತಿದ್ದರು.ನಮ್ಮ ಸುತ್ತಲಿನ ಪರಿ ಸರ ವನ್ನು ಸೂಕ್ಷ್ಮ ವಾಗಿ ಗಮ ನಿಸಿ ದರೆ ಪರಿ ಸರ ದಲ್ಲಾ ಗುತ್ತಿ ರುವ ಬದ ಲಾವನೆ ನಮ್ಮ ಗಮ ನಕ್ಕೆ ಬರು ತ್ತದೆ ಎಂದ ಅವರು, ಇಂದು ಜಿಲ್ಲೆ ಯಲ್ಲಿ ಕನಿಷ್ಠ ಉಷ್ಣಾಂಶ ದಾಖಲಾಗಿದೆ; ಆಗಾಗ ಅಕಾಲಿಕ ಮಳೆಯು ಆಗುತ್ತಿದೆ. ಹೀಗೆ ಪ್ರಕೃತಿಯಲ್ಲಿ ಆಗುವ ಏರಿಳಿತಗಳು ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮವನ್ನು ಬೀರುತ್ತಿದೆಯೆಂದು ನುಡಿದರು.
ಸಾಮಾಜಿಕ ಸ್ವಾಸ್ಥ್ಯ ಕಾಪಿಡುವಲ್ಲಿ ಅಧಿಕಾರಿಗಳ ಪಾತ್ರ, ಕಾರ್ಯಕ್ರಮದ ಅನುಷ್ಠಾನದಲ್ಲಿರಬೇಕಾದ ಪ್ರಾಮಾಣಿಕತೆಯ ಬಗ್ಗೆ ಮಾತನಾಡಿದರು. ಮೂರು ದಿನಗಳ ಕಾರ್ಯಾಗಾರದ ಅವಧಿಯನ್ನು ವಿರಾಮವೆಂದು ಭಾವಿಸದೇ ತರಬೇತಿಯಲ್ಲಿ ಪಡೆದ ಮಾಹಿತಿ ಮತ್ತು ತಂತ್ರಜ್ಞಾನಗಳನ್ನು ತಮ್ಮ ಕಾರ್ಯಕ್ಷೇತ್ರದಲ್ಲಿ ಅಳವಡಿಸಿಕೊಳ್ಳಲು ಸಲಹೆ ಮಾಡಿದರು. ಇದಕ್ಕೆ ಉತ್ತಮ ಉದಾಹರಣೆಯೆಂದರೆ ತಾವು ಮಹಾನಗರಪಾಲಿಕೆಯ ಆಯುಕ್ತರಾಗಿದ್ದ ಅವಧಿಯಲ್ಲಿ ನಗರಾಡಳಿತದಲ್ಲಿ ವಿಕೋಪ ನಿರ್ವಹಣೆ ಕ್ರಿಯಾ ಯೋಜನೆಯನ್ನು ಅಳವಡಿಸಿಕೊಂಡ ಕಾರಣ, ಮಳೆಗಾಲದಲ್ಲಿ ಕೃತಕ ನೆರೆ ಉಂಟಾಗಲಿಲ್ಲವೆಂಬುದನ್ನು ಈ ಸಂದರ್ಭದಲ್ಲಿ ಸ್ಮರಿಸಿಕೊಂಡರು. ಜಿಲ್ಲೆಯಲ್ಲಿ ಈ ದಿಸೆಯಲ್ಲಿ ರಚನಾತ್ಮಕ ಯೋಜನೆಗಳನ್ನು ಅಳವಡಿಸಿಕೊಳ್ಳಲು ಸಾಧ್ಯವಾಗಿದೆಯೆಂದರು.
ಕಡಲ್ಕೊರೆತ ತಡೆಗೆ ಕೈಗೊಂಡ ಕ್ರಮಗಳು, ಕಾಂಡ್ಲಾ ವನದ ಅಗತ್ಯವನ್ನು ಈ ಸಂದರ್ಭದಲ್ಲಿ ಸಿಇಒ ಪ್ರತಿಪಾದಿಸಿದರು.
ಸಮಾರಂಭದಲ್ಲಿ ಮೈಸೂರಿನ ಆಡಳಿತ ತರಬೇತಿ ಸಂಸ್ಥೆಯ ವಿಕೋಪ ನಿರ್ವಹಣೆ ಕೇಂದ್ರದ ಡಾ.ಆರ್.ಧರ್ಮರಾಜು ಅವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಡಾ. ಜಿ.ವಿಶ್ವನಾಥ್ ಅವರು ಉಪಸ್ಥಿತರಿದ್ದರು. ಉಪಪ್ರಾಚಾರ್ಯರಾದ ಶ್ರೀಮತಿ ಪ್ರಮೀಳಾ ಸ್ವಾಗತಿಸಿದರು. ಶ್ರೀಮತಿ ಸುಷ್ಮಾ ಕಾರ್ಯಕ್ರ್ರಮ ನಿರೂಪಿಸಿದರು.
ಬಳಿಕ ನಡೆದ ಅಧಿವೇಶನದಲ್ಲಿ 2005 ವಿಕೋಪ ನಿರ್ವಹಣಾ ಕಾಯಿದೆ ಕುರಿತು, ವಿಕೋಪ ನಿರ್ವಹಣೆಗಾಗಿ ಮೀಸಲಿಟ್ಟಿರುವ 25,000 ಕೋಟಿ ರೂ.ಗಳು ಹಾಗೂ ಈ ಸಂಬಂಧ ನಡೆಯುತ್ತಿರುವ ನಿರಂತರ ಯೋಜನೆಗಳ ಬಗ್ಗೆ ಡಾ ವಿಶ್ವನಾಥ ಅವರು ಮಾಹಿತಿ ನೀಡಿದರು. ಸಿಆರ್ ಝಡ್ ಕುರಿತು ಸಹಾಯಕ ನಿರ್ದೇಶಕರಾದ ಮಹೇಶ್ ಅವರು ಪಿಪಿಟಿ ಪ್ರಸಂಟೇಷನ್ ಮೂಲಕ ಮಾಹಿತಿ ನೀಡಿದರು.