Wednesday, November 9, 2011

ಅಪಾಯಕಾರಿ ಸ್ಪೋಟಕ ಸರಕು ಸಾಗಣೆ -ವಾಹನ ಚಾಲಕರಿಗೆ ಮಾಹಿತಿ ಅಗತ್ಯ :ಆರ್ ಟಿ ಓ

ಮಂಗಳೂರು,ನವೆಂಬರ್.09: ಚಾಲಕರು ತನ್ನ ಲೈಸನ್ಸನ್ನು ಪ್ರತೀ ವರ್ಷ ನಿಗಧಿತ ಸಮಯಕ್ಕೆ ನವೀಕರಣ ಮಾಡಿಕೊಂಡು,ರಾಸಾಯನಿಕ ವಸ್ತುಗಳ ಸಾಗಣೆ ಕುರಿತು ಹೆಚ್ಚಿನ ಮಾಹಿತಿಯನ್ನು ಪಡೆಯುವುದು ಅತ್ಯಗತ್ಯ.ವಾಹನದಲ್ಲಿ ಸುರಕ್ಷತಾ ಪೆಟ್ಟಿಗೆ ಇದ್ದು,ಅಪಘಾತವಾದಲ್ಲಿ ಕೂಡಲೇ ಪೊಲೀಸರಿಗೆ,ಅಂಬುಲೆನ್ಸ್ ,ಅಗ್ನಿಶಾಮಕ ದಳಕ್ಕೆ ತಿಳಿಸುವ ಸಲುವಾಗಿ.ವಾಹನದಲ್ಲಿ ತುರ್ತು ಮಾಹಿತಿ ಫಲಕಗಳನ್ನು ಬರೆಸಬೇಕೆಂದು ಮಂಗಳೂರು ಪ್ರಾದೇಶಿಕ ಸಾರಿಗೆ ಅಧಿಕಾರಿಗಳಾದ ಮಲ್ಲಿಕಾರ್ಜುನರವರು ತಿಳಿಸಿದರು.ಅವರು ಇಂದು ಐ.ಒ.ಸಿ.ಮಂ ಗಳಾ ಟರ್ಮಿ ನಲ್ ನಲ್ಲಿ ಕರ್ನಾ ಟಕ ರಾಜ್ಯ ಸಾರಿಗೆ ಇಲಾಖೆ ಅಧಿ ಕಾರಿ ಗಳ ಸಂಘ,ಇಂಡಿ ಯನ್ ಆಯಿಲ್ ಕಾರ್ಪೋ ರೇಷನ್ ಮಂಗ ಳೂರು ಮತ್ತು ಪ್ರಾದೇ ಶಿಕ ಸಾರಿಗೆ ಅಧಿ ಕಾರಿ ಗಳ ಕಚೇರಿ ಮಂಗ ಳೂರು ಇವರ ಸಂಯುಕ್ತಾ ಶ್ರಯದಲ್ಲಿ ಅಪಾಯಕಾರಿ ಹಾಗೂ ಸ್ಪೋಟಕ ಸರಕು ಸಾಗಣೆ ಕುರಿತು ವಾಹನ ಚಾಲಕರಿಗೆ ನೀಡಲಾಗುತ್ತಿರುವ ತರಬೇತಿಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಬೆಂಗಳೂರು ಟ್ರಾಫಿಕ್ ಇಂಜಿನಿಯರ್ ಮತ್ತು ಸೇಫ್ಟಿ ತರಬೇತಿ ಸಂಸ್ಥೆಯ ನಿರ್ದೇಶಕರಾದ ಬಿ.ಸಿ.ಎಸ್.ಕುಮಾರ್ ತರಬೇತಿ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.ತರಬೇತಿ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿದ್ದ ಬೆಂಗಳೂರು ಸಾರಿಗೆ ಇಲಾಖೆ ಅಧಿಕಾರಿಗಳ ಸಂಘದ ಅಧ್ಯಕ್ಷರಾದ ಶಿವರಾಜ್ ಪಾಟೀಲ್ ಮಾತನಾಡಿ,ರಾಜ್ಯ ಬೊಕ್ಕಸಕ್ಕೆ ಪ್ರತೀ ವರ್ಷ ಸುಮಾರು 200 ಕೋಟಿ ರಾಜಸ್ವ ಸಂಗ್ರಹ ಮಾಡಿ ದೇಶದಲ್ಲಿ 4ನೇ ಸ್ಥಾನದಲ್ಲಿದೆ ಎಂದರು.ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಗಳಾಗಿ ಎಲ್.ಜಯಬಾಲನ್ ಉಪಸ್ಥಿತರಿದ್ದರು.ತರಬೇತಿಯಲ್ಲಿ ಸುಮಾರು 250 ಟ್ರಕ್ ಚಾಲಕರು ಭಾಗವಹಿಸಿದ್ದರು.